ಬೆಳ್ಳುಳ್ಳಿ ಎಣ್ಣೆಯ ಆರೋಗ್ಯ ಪ್ರಯೋಜನಗಳು

#ಬೆಳ್ಳುಳ್ಳಿಗಳನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ರುಬ್ಬಿಕೊಳ್ಳಿ. ಇದು ದಪ್ಪಗಿನ ಪೇಸ್ಟ್ ಮಾಡಿ. ಇದಕ್ಕೆ ಹತ್ತು ಹನಿಯಷ್ಟು ಪುದೀನಾ ಎಣ್ಣೆ ಹಾಕಿ ಮತ್ತು ಸರಿಯಾಗಿ ಎರಡು ಮಿಶ್ರಣ ಮಾಡಿ. ಹಗುರ ಶಾಂಪೂ ಇರುವಂತಹ ಬಾಟಲಿಗೆ ಈ ಮಿಶ್ರಣವನ್ನು ಹಾಕಿಡಿ. ಈ ಶಾಂಪೂವನ್ನು ಕೂದಲು ತೊಳೆಯಲು ಬಳಸಿಕೊಳ್ಳಿ. ವಾರದಲ್ಲಿ ಮೂರಕ್ಕಿಂತ ಹೆಚ್ಚು ಸಲ ಇದನ್ನು ಬಳಸಬೇಡಿ.

#ಬೆಳ್ಳುಳ್ಳಿಯ ಎಣ್ಣೆಯಲ್ಲಿ ವಿಟಮಿನ್ ಸಿ, ಸೆಲೆನಿಯಂ, ಆಲಿಸಿನ್, ಸತು, ತಾಮ್ರ ಮೊದಲಾದ ಪ್ರಮುಖ ಪೋಷಕಾಂಶಗಳಿವೆ. ಬೆಳ್ಳುಳ್ಳಿಯ ಪ್ರಬಲ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಗುಣಗಳು ಇದರ ತೈಲದಲ್ಲಿಯೂ ಇರುತ್ತವೆ. ಈ ಗುಣಗಳು ಮೊಡವೆಗಳು ಮೂಡುವುದನ್ನು ತಡೆಯುತ್ತದೆ ಹಾಗೂ ಈಗಾಗಲೇ ಇರುವ ಮೊಡವೆಗಳು ಕಲೆಯಿಲ್ಲದೇ ಗುಣವಾಗಲು ನೆರವಾಗುತ್ತದೆ. ವಿಶೇಷವಾಗಿ ಇದರಲ್ಲಿರುವ ಸತು ಮೊಡವೆಯ ಒಳಗಿರುವ ಕೀವನ್ನು ಇಲ್ಲವಾಗಿಸಲು ನೆರವಾಗುತ್ತದೆ ಹಾಗೂ ಒಣಚರ್ಮದ ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ಇದಕ್ಕಾಗಿ ನಿಮ್ಮ ನಿತ್ಯದ ಮುಖಲೇಪದೊಂದಿಗೆ ಕೆಲವು ತೊಟ್ಟು ಬೆಳ್ಳುಳ್ಳಿ ಎಣ್ಣೆಯನ್ನು ಬೆರೆಸಿ ಹಚ್ಚಿಕೊಳ್ಳಬೇಕು

#ವಿಟಮಿನ್ ಇ ಯೊಂದಿಗೆ ಬೆಳ್ಳುಳ್ಳಿಯಲ್ಲಿ ಸೆಲೇನಿಯಮ್ ಇದ್ದು ಆಲೀವ್ ಆಯಿಲ್ ಮತ್ತು ಮೊಟ್ಟೆಯೊಂದಿಗೆ ಇದನ್ನು ಬೆರೆಸಿಕೊಂಡು ನಿಮ್ಮ ಕೂದಲಿಗೆ ನೈಸರ್ಗಿಕ ಸಂರಕ್ಷಣೆಯನ್ನು ಮಾಡಿಕೊಳ್ಳಬಹುದಾಗಿದೆ.

#ಬೆಳ್ಳುಳ್ಳಿ ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಇವು ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸಹಾಯ ಮಾಡುತ್ತವೆ. ಇದು ಕೂದಲು ಬೆಳವಣಿಗೆಗೆ (Hair Grow) ಸಹಾಯಕವಾಗಿದೆ.

#ವೈದ್ಯರು ಈ ಎಣ್ಣೆಯನ್ನು ಕೊಲೆಸ್ಟ್ರಾಲ್ ನಿಯಂತ್ರಣ, ಹೃದಯದ ಆರೋಗ್ಯ ರಕ್ಷಣೆ, ರೋಗ ನಿರೋಧಕ ಶಕ್ತಿಯ ವೃದ್ದಿ, ಜೀರ್ಣಶಕ್ತಿ ಉತ್ತಮಗೊಳಿಸುವುದು ಮೊದಲಾದ ಹಲವಾರು ಕಾರಣಗಳಿಗೆ ಔಷಧಿಯ ರೂಪದಲ್ಲಿ ಸೇವಿಸುವಂತೆ ಸಲಹೆ ಮಾಡುತ್ತಾರೆ.

#ಇದರಲ್ಲಿ ಬಲವಾದ ಆಂಟಿಬ್ಯಾಕ್ಟೀರಿಯಲ್‌ ಮತ್ತು ನಂಜು ನಿರೋಧಕ ಗುಣಲಕ್ಷಣಗಳನ್ನು ಹೊಂದಿದ್ದು, ಬ್ಯಾಕ್ಟೀರಿಯಾದ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group