ಈ ಆಹಾರ ಪದಾರ್ಥಗಳನ್ನು ಫ್ರಿಡ್ಜ್‌ನಲ್ಲಿ ಇಡಬೇಡಿ!

ಕೆಲವು ರೀತಿಯ ಪದಾರ್ಥಗಳು ವಿಷಕಾರಿಯಾಗಬಹುದು ಮತ್ತು ಆಹಾರ ವಿಷವನ್ನು ಉಂಟುಮಾಡಬಹುದು ಎಂದು ಪೌಷ್ಟಿಕಾಂಶ ತಜ್ಞರು ಹೇಳುತ್ತಾರೆ. ಮತ್ತು ಈ ರೀತಿಯಾಗಿ, ಅವು ಹಾಳಾಗುವ ಅಪಾಯವೂ ಇದೆ.ಹಾಗಾದರೆ ಫ್ರಿಜ್ ನಲ್ಲಿ ಯಾವ ರೀತಿಯ ಪದಾರ್ಥಗಳನ್ನು ಇಡಬೇಕು ಎಂಬುದನ್ನು ಅರಿತುಕೊಳ್ಳೋಣ. ಈಗ ಫ್ರಿಡ್ಜ್ ನಲ್ಲಿ ಇಡಬಾರದ ಆಹಾರ ಪದಾರ್ಥಗಳು ಯಾವುವು ಎಂದು ನೋಡೋಣ!
#ಅನೇಕರು ಬಾಳೆಹಣ್ಣನ್ನು (Banana) ಕೂಡ ಫ್ರಿಜ್‌ನಲ್ಲಿ ಇಡುತ್ತಾರೆ. ಫ್ರಿಜ್ ನಲ್ಲಿಟ್ಟಿರುವ ಬಾಳೆಹಣ್ಣನ್ನು ತಿನ್ನುವುದರಿಂದ ನಿಮ್ಮ ಆರೋಗ್ಯ ಹಾಳಾಗಬಹುದು. ಬಾಳೆಹಣ್ಣನ್ನು ಫ್ರಿಜ್ ನಲ್ಲಿ ಇಡುವುದರಿಂದ, ಬಾಳೆಹಣ್ಣು ಮಾತ್ರವಲ್ಲ ಇತರ ಹಣ್ಣುಗಳು ಮತ್ತು ತರಕಾರಿಗಳು ಕೂಡ ಹಾಳಾಗಬಹುದು. ಅದೇ ಸಮಯದಲ್ಲಿ, ಕತ್ತರಿಸಿದ ಮಾವಿನಹಣ್ಣು, ಮತ್ತು ಕಲ್ಲಂಗಡಿ ಹಣ್ಣನ್ನು (Watermelon) ಕೂಡಾ ಫ್ರಿಜ್‌ನಲ್ಲಿ ಇಡಬಾರದು.
#ಕಲ್ಲಂಗಡಿಯನ್ನು ಫ್ರಿಡ್ಜ್ ನಲ್ಲಿ ಇಡಲೇಬಾರದು. ಇದನ್ನು ನೀವು ಹಾಗೆ ಕೋಣೆಯ ತಾಪಮಾನದಲ್ಲಿ ಇಡಬೇಕು ಮತ್ತು ಇದರಿಂದ ರುಚಿಯು ಹಾಗೆ ಉಳಿಯುವುದು. ಕೆಲವೊಂದು ಆಹಾರಗಳನ್ನು ಕೋಣೆಯ ತಾಪಮಾನದಲ್ಲಿ ಇಟ್ಟಾಗ ಅದರಲ್ಲಿ ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್ ಉಂಟಾಗುವುದು ಎಂದು ಯುಎಸ್ ಡಿಎ ಅಧ್ಯಯನವು ತಿಳಿಸಿದೆ.
#ಬೆಳ್ಳುಳ್ಳಿ ಎಸಳುಗಳನ್ನು ಫ್ರಿಡ್ಜ್‌ನಲ್ಲಿ ಇಡುವುದಕ್ಕಿಂತ ಗಾಳಿ ಮತ್ತು ಬೆಳಕು ಇರುವ ಜಾಗದಲ್ಲಿ ಇಟ್ಟರೆ ತಿಂಗಳುಗಟ್ಟಲೆ ಫ್ರೆಶ್ ಆಗಿರುತ್ತದೆ. ಫ್ರಿಡ್ಜ್ ನಲ್ಲಿಟ್ಟರೆ ಅಂಟಿನಂತೆ ತಿರುಗುತ್ತವೆ.
#ಜನರು ಆಲೂಗಡ್ಡೆ (Potato), ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ತರಕಾರಿಗಳನ್ನು ಫ್ರಿಜ್‌ನಲ್ಲಿ ಇಡುತ್ತಾರೆ. ಆದರೆ ಇದು ತಪ್ಪು. ಈ ತರಕಾರಿಗಳನ್ನು ಫ್ರಿಜ್ ನಲ್ಲಿಡಬಾರದು. ಆಲೂಗಡ್ಡೆಯನ್ನು ಫ್ರಿಜ್‌ನಲ್ಲಿ ಇಟ್ಟರೆ, ಮಧುಮೇಹ ರೋಗಿಗಳ ಸಮಸ್ಯೆಗಳನ್ನು ಹೆಚ್ಚಿಸಬಹುದು. ಏಕೆಂದರೆ ಆಲೂಗಡ್ಡೆಯ ಸ್ಟಾರ್ಚ್ ಶೀತದಿಂದಾಗಿ ಸಕ್ಕರೆಯಾಗಿ ಬದಲಾಗುತ್ತದೆ. ಆಲೂಗಡ್ಡೆಯನ್ನು ಕಾಗದದ ಚೀಲದಲ್ಲಿ ಹಾಕಿ, ಅದನ್ನು ತೆರೆದ ಸ್ಥಳದಲ್ಲಿ ಇರಿಸಿಡ್ರೆ ಅದು ಕೆಡುವುದಿಲ್ಲ.
#ನೈಸರ್ಗಿಕವಾಗಿ ಸಿಗುವಂತಹ ಜೇನುತುಪ್ಪವನ್ನು ನೀವು ಅನೈಸರ್ಗಿಕವಾದ ಫ್ರಿಡ್ಜ್ ನಲ್ಲಿ ಇಟ್ಟರೆ ಆಗ ಅದರ ರುಚಿ ಕೆಡುವುದು. ಇದರ ನಿಜವಾದ ರುಚಿ ಹಾಗೂ ಸುವಾಸನೆ ಪಡೆಯಬೇಕಾದರೆ ನೀವು ಜೇನುತುಪ್ಪವನ್ನು ಫ್ರಿಡ್ಜ್ ನಲ್ಲಿ ಇಡಬಾರದು.