ನೀವೂ ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಸಲಹೆಗಳನ್ನು ಪಾಲಿಸಿ!

ಜನರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ನಿದ್ರಾ ಹೀನತೆ ಕೂಡಾ ಒಂದು. ಮಲಗಲು ಸಮಯ ಸಿಕ್ಕರೂ ನಿದ್ರೆ ಬರುವುದಿಲ್ಲ. ಒಬ್ಬ ಸರಾಸರಿ ವ್ಯಕ್ತಿ ದಿನವಿಡೀ ಕಠಿಣ ಕೆಲಸ ಮಾಡಿ, ಪ್ರಯಾಣ ಮಾಡಿ, ಕೆಲಸದ ಒತ್ತಡ ಮತ್ತು ಇತರ ವೈಯಕ್ತಿಕ ಕೆಲಸಗಳಲ್ಲಿ ಮುಳುಗಿರುತ್ತಾನೆ. ಆದರೂ ಕೆಲವರಿಗೆ ನಿದ್ರೆ ಬರುವುದಿಲ್ಲ.
ಸರಿಯಾಗಿ ನಿದ್ರೆ ಮಾಡದಿರುವವರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಪ್ರತಿಯೊಬ್ಬ ಮನುಷ್ಯನಿಗೆ ತಿನ್ನಲು ಆಹಾರ ಮತ್ತು ಕುಡಿಯಲು ನೀರಿನ ಜೊತೆಗೆ 7-8 ಗಂಟೆಗಳ ನಿದ್ರೆ ಬೇಕು. ಕಣ್ತುಂಬಾ ನಿದ್ರೆ ಮಾಡಿದರೆ ಮಾತ್ರ ಆರೋಗ್ಯ ಚೆನ್ನಾಗಿರುತ್ತದೆ. ಇದಕ್ಕೆ ಆರೋಗ್ಯವೇ ಮಹಾಭಾಗ್ಯ ಎಂಬ ಮಾತು ಹೇಳುವುದು.ನೀವೂ ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ..? ಹಾಗಿದ್ರೆ ಇಲ್ಲಿ ನೀಡಿದ ಸಲಹೆಗಳನ್ನು ಪಾಲಿಸಿ.
#ನಿದ್ದೆ ಸಮಸ್ಯೆ ಹೋಗಲಾಡಿಸುವಲ್ಲಿ ಯೋಗ ತುಂಬಾ ಪರಿಣಾಮಕಾರಿಯಾದ ವಿಧಾನವಾಗಿದೆ. ಯೋಗದಲ್ಲಿ ಅಂಗಾತ ಮಲಗಿಕೊಂಡು 20 ನಿಮಿಷ ಕಾಲವಿದ್ದರೆ ಒತ್ತಡಗಳು ಕಡಿಮೆಯಾಗುತ್ತದೆ. ಈ ರೀತಿ ಯೋಗಾಭ್ಯಾಸದಿಂದ ದೇಹದ ಪ್ರತಿಯೊಂದು ಭಾಗಕ್ಕೆ ವಿಶ್ರಾಂತಿ ದೊರೆಯುವುದರಿಂದ ನಿದ್ರಾ ಹೀನತೆ ಸಮಸ್ಯೆ ನಿವಾರಣೆಯಾಗುವುದು.
#ಒಂದು ಕಪ್ ಬೆಚ್ಚಗಿನ ಹಾಲಿಗೆ ಜೇನುತುಪ್ಪ ಮಿಶ್ರಣ ಮಾಡಿಕೊಂಡು ಕುಡಿಯಿರಿ. ಹಾಲು – ಜೇನುತುಪ್ಪದ ಮಿಶ್ರಣ ನಿದ್ದೆ ಬರಲು ಉತ್ತಮ ಸಂಯೋಜನೆ ಆಗಿದೆ. ಹಾಲಿನಲ್ಲಿರುವ ಟ್ರಿಪ್ಟೋಫಾನ್ ಅಮೈನೋ ಆ್ಯಸಿಡ್ ನೈಸರ್ಗಿಕವಾಗಿ ನಿದ್ದೆ ಬರಿಸುವ ಮದ್ದಾಗಿ ಕೆಲಸ ಮಾಡುತ್ತದೆ.
#ಮನಸ್ಸು ರಿಲ್ಯಾಕ್ಸ್ ಆಗುವಂತಹ ಚಟುವಟಿಕೆಗಳನ್ನು ಮಾಡಿ. ಉದಾಹರಣೆಗೆ ಮಧುರ ಸಂಗೀತವನ್ನು ಆಲಿಸುವುದು, ಇಷ್ಟವಾದ ವಿಷಯದ ಬಗ್ಗೆ ಪುಸ್ತಕವನ್ನು ಓದುವುದು . ಮನೆಯವರೊಂದಿಗೆ ಸರಸ ಸಂಭಾಷಣೆ, ದೇವರ ಧ್ಯಾನ – ಜಪ ಮಾಡುವುದು ಮಾಡುವುದು ಇತ್ಯಾದಿ.
#ವಾತ ಪಿತ್ತಗಳ ಸಮತೋಲನೆಗೆ ಸಂಪೂರ್ಣ ದೇಹಕ್ಕೆ ಎಣ್ಣಿ ಹಚ್ಚಿ ಸ್ನಾನ ಮಾಡುವುದು; ನಿಯಮಿತವಾಗಿ ತಲೆಗೆ ಎಣ್ಣಿ ಹಚ್ಚುವುದು, ಮಲಗುವ ಮುಂಚೆ ಪಾದಗಳಿಗೆ ಎಣ್ಣಿ ಹಚ್ಚುವುದು.
#ಖಿನ್ನತೆ ಅಥವಾ ಉಸಿರಾಟದ ತೊಂದರೆಗಳಿಂದ ನಿದ್ದೆ ಬರದಿದ್ದರೆ ಮಲುಗುವ ಮುಂಚೆ ಜಾಸ್ಮಿನ್ ಎಣ್ಣೆ ಹಚ್ಚಿದರೆ ಸಾಕು. ಅದರ ಸುವಾಸನೆಗೆ ಮನಸ್ಸಿಗೆ ವಿಶ್ರಾಂತಿ ಸಿಕ್ಕಿದಂತೆ ಭಾಸವಾಗುವುದರಿಂದ ಚೆನ್ನಾಗಿ ಬರುತ್ತದೆ.