ಪೀಚ್ ಹಣ್ಣು ಸೇವನೆಯ ಆರೋಗ್ಯಕರ ಲಾಭಗಳು!

ಆರೋಗ್ಯ ತಜ್ಞರ ಪ್ರಕಾರ, ಅಧಿಕ ರಕ್ತದೊತ್ತಡವು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಹೃದ್ರೋಗಕ್ಕೆ ಹಲವು ಕಾರಣಗಳಿವೆ ಕೆಟ್ಟ ಕೊಲೆಸ್ಟ್ರಾಲ್ ಕೂಡ ಒಂದು ಕಾರಣ. ಕೆಟ್ಟ ಕೊಲೆಸ್ಟ್ರಾಲ್ ನಿಂದ ಪಾರ್ಶ್ವವಾಯು ಬರುವ ಅಪಾಯವೂ ಇದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು, ನೀವು ಪ್ರತಿದಿನ ಪೀಚ್ ಅನ್ನು ಸೇವಿಸಬಹುದು. ಇದರ ಬಳಕೆಯಿಂದ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ. ಹಾಗೆಯೇ ಹೃದಯವೂ ಆರೋಗ್ಯವಾಗಿರುತ್ತದೆ.
#ಒತ್ತಡ ನಿಯಂತ್ರಣ : ಪೀಚ್ ಹಣ್ಣಿನಲ್ಲಿರುವ ಖನಿಜಾಂಶಗಳು ಒತ್ತಡ ನಿವಾರಣೆಗೆ ಸಹಾಯಕವಾಗಿದೆ. ಇದರ ಹೂವುಗಳನ್ನು ಮನಸ್ಸನ್ನು ಶಾಂತಗೊಳಿಸಲು ಬಳಸಲಾಗುತ್ತದೆ.
#ಪೀಚ್‌ನಲ್ಲಿ ಬೀಟಾ ಕ್ಯಾರೋಟಿನ್ ಅಂಶ ಕಂಡುಬರುತ್ತದೆ. ಬೀಟಾ ಕ್ಯಾರೋಟಿನ್ ಕಣ್ಣುಗಳಿಗೆ ಮುಖ್ಯವೆಂದು ಪರಿಗಣಿಸಲಾಗುತ್ತದೆ. ವಿಟಮಿನ್ ಎ ಯುಕ್ತ ಆಹಾರ ಸೇವಿಸುವುದರಿಂದ ದೃಷ್ಟಿ ಹೆಚ್ಚಾಗುತ್ತದೆ. ಅಲ್ಲದೆ, ವಿಟಮಿನ್ ಎ ರೆಟಿನಾವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
#ಈ ಹಣ್ಣುಗಳಲ್ಲಿರುವ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಕೊಲ್ಯಾಜೆನ್ ಉತ್ಪಾದನೆಗೆ ನೆರವಾಗುತ್ತವೆ. ಈ ಕೊಲ್ಯಾಜೆನ್ ನಮ್ಮ ಚರ್ಮ ಮತ್ತು ಕೂದಲುಗಳು ನಿರ್ಮಿಸಲ್ಪಟ್ಟಿರುವ ಧಾತುಗಳಾಗಿವೆ. ತನ್ಮೂಲಕ ತ್ವಚೆ ಮತ್ತು ಕೂದಲ ಆರೋಗ್ಯ ಉತ್ತಮಗೊಳ್ಳುತ್ತದೆ. ಆಪ್ರಿಕಾಟ್, ಪ್ಲಂ ಮತ್ತು ಈ ಹಣ್ಣುಗಳ ತಿರುಳಿನಿಂದ ಪ್ರತ್ಯೇಕಿಸಲ್ಪಟ್ಟ ಅಂಶಗಳನ್ನು ಹಲವಾರು ತ್ವಚೆಯ ಆರೈಕೆಯ ಪ್ರಸಾದನಗಳಲ್ಲಿ ಬಳಸಲಾಗುತ್ತದೆ. ಅಲ್ಲದೇ ಇದರ ಪ್ರಬಲ ಆಂಟಿ ಆಕ್ಸಿಡೆಂಟ್ ಗುಣ ತ್ವಚೆ ಸಡಿಲಗೊಳ್ಳುವುದನ್ನು ತಡವಾಗಿಸಿ ವೃದ್ದಾಪ್ಯವನ್ನು ಮುಂದೂಡುತ್ತವೆ.
#ಅಂಟಿ-ಆಕ್ಸಿಡೆಂಟ್ಗಳು : ಪೀಚ್ ಹಣ್ಣಿನ ಸಿಪ್ಪೆಯು ಪಾಲಿಫೆನಾಲ್ ಎಂಬ ಅಂಶವನ್ನು ಒಳಗೊಂಡಿರುತ್ತದೆ. ಇದು ದೇಹದಲ್ಲಿ ಅಂಟಿ-ಆಕ್ಸಿಡೆಂಟ್ಗಳಾಗಿ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಗಣನೀಯ ಪ್ರಮಾಣದಲ್ಲಿದ್ದು, ಈ ಹಣ್ಣನ್ನು ಸಿಪ್ಪೆಯೊಂದಿಗೆ ತಿನ್ನುವುದು ಉತ್ತಮ.
#ಪೀಚ್ ಹಣ್ಣಿನಲ್ಲಿ ಕ್ಯಾಲೊರಿ ತುಂಬಾ ಕಡಿಮೆ ಇರುತ್ತದೆ. 100 ಗ್ರಾಂ ಪೀಚ್ನಲ್ಲಿ ಕೇವಲ 39 ಕ್ಯಾಲೊರಿಗಳು ಕಂಡು ಬರುತ್ತದೆ. ಇದನ್ನು ತಿಂದು ಹೊಟ್ಟೆ ತುಂಬಿಸಿಕೊಂಡರೂ, ಯಾವುದೇ ರೀತಿಯಲ್ಲೂ ತೂಕ ಹೆಚ್ಚಾಗುವುದಿಲ್ಲ. ಅಲ್ಲದೆ ಪ್ರತಿನಿತ್ಯ ಈ ಹಣ್ಣನ್ನು ಸೇವಿಸುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ.