ಹರಿವೆ ಸೊಪ್ಪಿನ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳು!

ಇವುಗಳಿಂದ ದೇಹದಲ್ಲಿ ಇರುವ ಉತ್ಕರ್ಷಣ ಗುಣಗಳಿಂದ ಹಿಡಿದು ಕೆಂಪು ರಕ್ತ ಕಣ ಉತ್ಪಾದನೆ ಜೀರ್ಣಕ್ರಿಯೆಯನ್ನು ಉತ್ತಮವಾಗಿಸಿರುವವರೆಗೂ ಹರಿವೆ ಸೊಪ್ಪು ಸಹಾಯಕಾರಿಯಾಗಿದೆ ಚಳಿಗಾಲದಲ್ಲಿ ಹೆಚ್ಚಾಗಿ ಸಿಗುವ ಈ ಸೊಪ್ಪು ಆರೋಗ್ಯಕ್ಕೆ ಇನ್ನೂ ಯಾವೆಲ್ಲ ಪ್ರಯೋಜನಗಳು ನೀಡುತ್ತವೆ ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ.

#ಡಯೆಟನಲ್ಲಿ (Diet) ಪ್ರತೀ ದಿನ ಹರಿವೆ ಸೊಪ್ಪನ್ನು ಸೇರಿಸಿಕೊಳ್ಳುವುದರಿಂದ ದೇಹಕ್ಕೆ ವಿಟಮಿನ್ ಸಿ (Vitamin C) ಸಿಗುತ್ತದೆ. ಜೊತೆಗೆ ಇನ್ಫೆಕ್ಷನ್‌ಗೆ (Infection) ಹಾಗೂ ಗಾಯಗಳನ್ನು ಗುಣಪಡಿಸುವ ಶಕ್ತಿ ಇದಕ್ಕಿದೆ.

#ಕಡಿಮೆ ಕೊಲೆಸ್ಟ್ರಾಲ್‌ ಅಂಶವನ್ನು ಹೊಂದಿರುವ ಹರಿವೆ ಸೊಪ್ಪಿನ ಸೇವನೆಯಿಂದ ದೇಹದಲ್ಲಿ ರಕ್ತದೊತ್ತಡವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು. ಈ ಸೊಪ್ಪಿನಲ್ಲಿ ಕರಗಬಲ್ಲ ಹಾಗೂ ಕರಗದ ನಾರಿನಾಂಶವಿದೆ. ಹರಿವೆ ಸೊಪ್ಪಿನ ಸೇವನೆಯಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದಾಗಿದೆ. ಇದರಲ್ಲಿನ ಕಡಿಮೆ ಕೊಲೆಸ್ಟ್ರಾಲ್‌ ಮಟ್ಟದಿಂದ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸಬಹುದಾಗಿದೆ

#ಟೈಪ್ 2 ಡಯಾಬಿಟಿಸ್ (Type 2 Diabetes) ಹೊಂದಿರುವವರಿಗೆ ರಕ್ತದಲ್ಲಿನ ಶುಗರ್ ಕಡಿಮೆ ಮಾಡುತ್ತದೆ. ಜೊತೆಗೆ ಇದರ ಎಲೆಗಳಲ್ಲಿ(Leaves) ಪ್ರೋಟೀನ್(Protein) ಹೆಚ್ಚಿದ್ದು ಇನ್ಸುಲಿನ್(Insulin) ಪ್ರಮಾಣವನ್ನು ಕಡಿಮೆ ಮಾಡುತ್ತದೆ.

#ಹರಿವೆ ಸೊಪ್ಪನ್ನು ನಾವು ನಮ್ಮ ಆಹಾರದಲ್ಲಿ ಹೆಚ್ಚು ಹೆಚ್ಚು ಉಪಯೋಗಿಸುವುದರಿಂದ ಅದರಲ್ಲಿರುವ ನಾರಿನಂಶವು ಜೀರ್ಣಕ್ರಿಯೆಗೆ ಸಹಾಯವಾಗಿ ಮಲಬಧ್ದತೆಯನ್ನು ದೂರ ಮಾಡುತ್ತದೆ.

ಕೀಲು ನೋವಿನ ಸಮಸ್ಯೆ, ಮೂಳೆ ನೋವು ಸಮಸ್ಯೆ ಇದ್ದಲ್ಲಿ ಹರಿವೆ ಸೊಪ್ಪಿನ ಸೇವನೆ ಮಾಡಿ. ಇದು ನಮ್ಮ ದೇಹಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತದೆ. ಮೂಳೆ ಗಟ್ಟಿಗೊಳಿಸುತ್ತದೆ. ನಾವು ಸಧೃಡವಾಗಿರುವಂತೆ ನೋಡಿಕೊಳ್ಳುತ್ತದೆ. ಹರಿವೆ ಸೊಪ್ಪಿನ ಸೂಪ್ ಮಾಡಿಯೂ ಕುಡಿಯಬಹುದು. ಸೂಪ್‌ನಲ್ಲಿ ಒಂದು ಸ್ಪೂನ್ ತುಪ್ಪ ಅಥವಾ ಕೊಂಚ ಬೆಣ್ಣೆ ಬಳಸಬಹುದು. ಇದರಿಂದ ಸೂಪ್ ಟೇಸ್ಟಿಯಾಗಿರುತ್ತದೆ ಅಲ್ಲದೇ ದೇಹಕ್ಕೆ ಶಕ್ತಿಯೂ ಸಿಗುತ್ತದೆ.

#ಕೆಲವು ಹೆಣ್ಣು ಮಕ್ಕಳಲ್ಲಿ ಕೂದಲು ಉದುರುವ ಸಮಸ್ಯೆ ಇರುತ್ತದೆ. ಅಂತವರು ಹರಿವೆ ಸೊಪ್ಪನ್ನು ಹೆಚ್ಚಾಗಿ ಬಳಸುವುದರಿಂದ ಅದರಲ್ಲಿರುವ ಎಲ್ಲ ರೀತಿಯ ಪೋಷಕಾಂಶಗಳು ಕೂದಲಿಗೆ ದೊರಕುತ್ತವೆ. ಇದರಿಂದ ಕೂದಲು ಉದುರುವುದು ಕಡಿಮೆಯಾಗಿ ಸೊಂಪಾಗಿ ಬೆಳೆಯಲು ಸಹಕಾರಿಯಾಗುತ್ತದೆ.

#ಇದರಲ್ಲಿರುವ ಖನಿಜಾಂಶ ನಿಮ್ಮ ದೇಹದಲ್ಲಿರುವ ಮೂಳೆಗಳನ್ನು ಇನ್ನಷ್ಟು ಬಲಪಡಿಸುತ್ತದೆ. ಮೂಳೆಗಳ ನಿರ್ವಹಣೆಯಲ್ಲಿ ಕ್ಯಾಲ್ಸಿಯಂ ಪ್ರಮುಖ ಪಾತ್ರ ವಹಿಸುತ್ತದೆ.ಈ ಸೊಪ್ಪಿನ ಎಲೆಗಳು ಕ್ಯಾಲ್ಸಿಯಂ ಅನ್ನು ಹೊಂದಿರುತ್ತವೆ, ಇದು ಮೂಳೆಗಳ ಆರೋಗ್ಯಕರ ಬೆಳವಣಿಗೆಯನ್ನು ಹೊಂದಲು ಸಹಾಯ ಮಾಡುವ ಅಮೂಲ್ಯವಾದ ಆಹಾರವಾಗಿದೆ, ಇದು ಆಸ್ಟಿಯೊಪೊರೋಸಿಸ್ ಅನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group