ಪಾದಗಳಲ್ಲಿ ಊತ ನೋವಿಗೆ ಪರಿಹಾರ!

ಐಸ್ ಪ್ಯಾಕ್ (Ice Pack) ನಲ್ಲಿದೆ ನೋವಿಗೆ ಪರಿಹಾರ ಕಾಲುಗಳ ಊತ ವಿಪರೀತವಾಗಿದ್ರೆ ನೀವು ಐಸ್ ಪ್ಯಾಕ್ ಕೂಡ ಬಳಸಬಹುದು. ಐಸ್ ಪ್ಯಾಕ್‌ಗಳನ್ನು ನೀವು ನೇರವಾಗಿ ಊದಿರುವ ಜಾಗಕ್ಕೆ ಇಡಲು ಸಾಧ್ಯವಿಲ್ಲ. ಒಂದು ಬಟ್ಟೆ ಅಥವಾ ಟವೆಲ್ ನಲ್ಲಿ ಐಸ್ ಪ್ಯಾಕ್ ಸುತ್ತಿ. ನಂತ್ರ ಆ ಬಟ್ಟೆಯನ್ನು ನೋವಿರುವ ಜಾಗದ ಮೇಲೆ ನಿಧಾನವಾಗಿ ಇಡಿ. ಐಸ್ ಪ್ಯಾಕ್ (Ice Pack) ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಐಸ್ ಪ್ಯಾಕ್ ಬಳಕೆಯಿಂದ ಉರಿಯೂತವೂ ನಿಧಾನವಾಗಿ ಶಮನವಾಗುತ್ತದೆ. ನೋವು ಬೇಗ ಕಡಿಮೆಯಾಗ್ಬೇಕೆಂದ್ರೆ ನೀವು ದಿನಕ್ಕೆ ಎರಡು ಬಾರಿ ಐಸ್ ಪ್ಯಾಕ್ ಇಡಬೇಕು.

#ನಿಮಗೆ ಆಗಾಗ್ಗೆ ಪಾದಗಳಲ್ಲಿ ಊತ ಕಂಡುಬರುತ್ತಿದ್ದರೆ ಕೊಬ್ಬರಿ ಎಣ್ಣೆಯ ಮಸಾಜ್ ನಿಮಗೆ ಪರಿಹಾರವನ್ನು ನೀಡಬಹುದು. ಇದಕ್ಕಾಗಿ, ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ. ಬಳಿಕ, ಎಣ್ಣೆಯಲ್ಲಿ ಬೆಳ್ಳುಳ್ಳಿ ಎಸಳುಗಳನ್ನು ಸಹ ಫ್ರೈ ಮಾಡಬಹುದು. ಬೆಳ್ಳುಳ್ಳಿಯಿಂದ ತಯಾರಿಸಿದ ಈ ಎಣ್ಣೆಯನ್ನು ಪಾದಗಳಿಗೆ ಹಚ್ಚಿ ಸುಮಾರು 5 ನಿಮಿಷಗಳ ಕಾಲ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಊತ ಕಡಿಮೆ ಆಗುವುದರ ಜೊತೆಗೆ ನೋವಿನಿಂದಲೂ ಪರಿಹಾರ ಸಿಗಲಿದೆ.

#ಹರಳೆಣ್ಣೆಯಲ್ಲಿ ಸಿಗುವಂತಹ ಆರೋಗ್ಯಕಾರಿ ಅಂಶಗಳು ಹೆಚ್ಚಿ ನವರಿಗೆ ತಿಳಿದಿಲ್ಲ! ಯಾಕೆಂದರೆ ಇದರ ಬಳಕೆ ಮಾಡುವ ಜನರು ತುಂಬಾ ಕಡಿಮೆ ಎಂದೇ ಹೇಳ ಬಹುದು. ಆದರೆ ಆದರೆ ಈ ಎಣ್ಣೆಯು ನಮ್ಮ ಆರೋಗ್ಯ ಹಾಗೂ ಚರ್ಮದ ಆರೈಕೆಯ ವಿಷ್ಯದಲ್ಲಿ ಪ್ರಮುಖ ಪಾತ್ರ ವಹಿಸುವುದು.

#ಅಕ್ಕಿ ತೊಳೆದ ನೀರು ಹಾಗೂ ಅಡುಗೆ ಸೋಡಾ ಕೂಡ ನಿಮಗೆ ಪರಿಹಾರ ನೀಡಬಲ್ಲದು. ಮೊದಲು ಅಕ್ಕಿ ಅಕ್ಕಿ ತೊಳೆದ ನೀರನ್ನು ಚೆನ್ನಾಗಿ ಕುದಿಸಿ. ಅದಕ್ಕೆ ಅಡುಗೆ ಸೋಡಾ ಸೇರಿಸಿ. ನಂತ್ರ ನೀರು ತಣ್ಣಗಾದ್ಮೇಲೆ ನೋವಿರುವ ಜಾಗಕ್ಕೆ ಇದನ್ನು ಹಚ್ಚಿ. ಒಂದು 15 ನಿಮಿಷ ಹಾಗೆಯೇ ಬಿಡಿ. ನಂತ್ರ ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಈ ಮಿಶ್ರಣ ಕೂಡ ನಿಮ್ಮ ಪಾದದ ಊತವನ್ನು ಕಡಿಮೆ ಮಾಡುತ್ತದೆ.

#ಆಯುರ್ವೇದದಲ್ಲಿ ಅರಿಶಿನವನ್ನು ಉತ್ತಮ ಔಷಧೀಯ ಮೂಲ ಎಂದು ಹೇಳಲಾಗಿದೆ. ಪಾದಗಳಲ್ಲಿನ ಊತದ ಸಮಸ್ಯೆಯಲ್ಲಿ ಪರಿಹಾರ ಪಡೆಯಲು ಸಹ ನೀವು ಅರಿಶಿನವನ್ನು ಬಳಸಬಹುದು. ಇದಕ್ಕಾಗಿ ಒಂದು ಚಮಚ ಅರಿಶಿನಕ್ಕೆ ಒಂದು ಚಮಚ ತೆಂಗಿನೆಣ್ಣೆ ಬೆರೆಸಿ ಪೇಸ್ಟ್ ತಯಾರಿಸಿ ಊತವಿರುವ ಜಾಗಕ್ಕೆ ಹಚ್ಚಿ. ಈ ಪೇಸ್ಟ್ ಒಣಗಿದಾಗ, ಉಗುರು ಬೆಚ್ಚಗಿನ ನೀರಿನಿಂದ ಪಾದಗಳನ್ನು ತೊಳೆಯಿರಿ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group