ಎದೆಯುರಿ ಸಮಸ್ಯೆ ಪರಿಹಾರಕ್ಕೆ ಇಲ್ಲಿವೆ ಮನೆಮದ್ದು!

ಅನಾರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಎದೆಯುರಿ ಮತ್ತು ಆಮ್ಲೀಯತೆಯ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಜನರು ಸಾಮಾನ್ಯವಾಗಿ ಔಷಧಿಗಳನ್ನು ಬಳಸುತ್ತಾರೆ. ಇದು ಸ್ವಲ್ಪ ಸಮಯದವರೆಗೆ ಮಾತ್ರ ಪರಿಹಾರವನ್ನು ನೀಡುತ್ತದೆ. ಆದರೆ ಕೆಲವು ಗಂಟೆಗಳ ನಂತರ ಸಮಸ್ಯೆ ಮತ್ತೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇದರ ಪರಿಹಾರಕ್ಕೆ ಕೆಲವು ಮನೆಮದ್ದುಗಳು ಇಲ್ಲಿವೆ.
#ಬಿಗಿಯಾದ ಬೆಲ್ಟ್‌ಗಳು, ಬಟ್ಟೆಗಳು ಮತ್ತು ಒಳ ಉಡುಪುಗಳು ಹೊಟ್ಟೆಯ ಮೇಲೆ ಒತ್ತಡವನ್ನು ಉಂಟುಮಾಡುತ್ತವೆ, ಹೀಗಾಗಿ ಎದೆಯುರಿ ರೋಗಲಕ್ಷಣಗಳನ್ನು ಉಲ್ಬಣಗೊಳಿಸುತ್ತದೆ. ಹಾಗಾಗಿ ನೀವು ಬಿಗಿಯಾದ ಬಟ್ಟೆಗಳನ್ನು ಧರಿಸದಿರಿ.
#ಊಟವಾದ ಕೂಡಲೇ ಮಲಗಬೇಡಿ: ಕೆಲವರು ಊಟ ಮಾಡಿದ ಕೂಡಲೇ ಸ್ವಲ್ಪವೂ ಸಮಯ ನೀಡದೆ ಮಲಗುತ್ತಾರೆ. ಆದರೆ ಇದು ತಪ್ಪು. ಮಲಗಲು ಕನಿಷ್ಠ ಒಂದು ಗಂಟೆ ಮುನ್ನ ಊಟ ಮಾಡಿ. ಊಟ ಆದ ಕೂಡಲೇ 15 ನಿಮಿಷವಾದರೂ ಅತ್ತಿಂದಿತ್ತ ಅಡ್ಡಾಡಿ. ಇದರಿಂದ ಎದೆ ಉರಿ ಕಡಿಮೆಯಾಗುತ್ತದೆ.
#ಎದೆಯುರಿ ಸಮಸ್ಯೆ ಇದ್ದರೆ ಬಾಳೆಹಣ್ಣು ತಿನ್ನಿರಿ ಏಕೆಂದರೆ ಇದು ಹೊಟ್ಟೆಯ ಆಮ್ಲವನ್ನು ಎದುರಿಸಲು ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಅನ್ನು ಹೊಂದಿರುವುದರಿಂದ ಅಸ್ವಸ್ಥತೆಯನ್ನು ತಡೆಯಯತ್ತದೆ. ಆದರಿಂದ ಮಾಗಿದ ಬಾಳೆಹಣ್ಣನ್ನು ತಿನ್ನಲು ಮರೆಯದಿರಿ.
#ಹಸಿ ಹಾಲನ್ನು ಕುಡಿದರೆ ಎದೆ ಉರಿ, ಹೊಟ್ಟೆ ಉರಿ ಕಡಿಮೆಯಾಗುವುದು ಬರೀ ಹಾಲು ಕುಡಿಯಲು ಇಷ್ಟವಿಲ್ಲದವರು ಅದಕ್ಕೆ ಸ್ವಲ್ಪ ಜೇನು ಹಾಕಿ ಕುಡಿಯಬಹುದು.
#ಅತಿಯಾದ ಉಪ್ಪಿನಂಶವಿರುವ ಪದಾರ್ಥಗಳ ಸೇವನೆ ಒಳ್ಳೆಯದಲ್ಲ.ಮಸಾಲೆಯುಕ್ತ, ಎಣ್ಣೆಯಲ್ಲಿ ಕರಿದ ಆಹಾರ, ಹುರಿದ ಪದಾರ್ಥಗಳ ಸೇವನೆ ಮಾಡಬೇಡಿ.