ನೈಸರ್ಗಿಕವಾಗಿ ಬಿಳಿ ಕೂದಲನ್ನು ತೊಡೆದುಹಾಕಲು ಸಹಾಯ ಇವು ಮಾಡುತ್ತದೆ!

ಕೆರಟಿನ್ ಕೂದಲಿನ ಬೆಳವಣಿಗೆಗೆ ಬೇಕಾಗಿರುವಂತಹ ಪ್ರಮುಖ ಪ್ರೋಟೀನ್. ಕೆರಟಿನ್ ನಲ್ಲಿ ಮೆಲನಿನ್ ಕೊರತೆ ಅಥವಾ ಇಲ್ಲದೆ ಇರುವ ಕಾರಣದಿಂದ ಕೂದಲು ಬಿಳಿಯಾಗಬಹುದು. ಅನುವಂಶೀಯತೆ, ವಯಸ್ಸು ಮತ್ತು ದೇಹದಲ್ಲಿ ಆಗುವಂತಹ ಹಾರ್ಮೋನು ಅಸಮತೋಲನದಿಂದಾಗಿ ಮೆಲನಿನ್ ಕೊರತೆ ಉಂಟಾಗಬಹುದು. ಮಾರುಕಟ್ಟೆಯಲ್ಲಿ ಸಿಗುವಂತಹ ಕೆಲವು ರಾಸಾಯನಿಕಗಳು ಕೂದಲನ್ನು ಬಿಳಿಯಾಗಿಸಿ, ನಿಮಗೆ ಕಾಂತಿಯುತ ಕೂದಲು ನೀಡಬಹುದು. ಆದರೆ ಇದು ದೀರ್ಘಕಾಲಕ್ಕೆ ತುಂಬಾ ಹಾನಿಯುಂಟು ಮಾಡುವುದು. ಈ ಲೇಖನದಲ್ಲಿ ಕೂದಲು ಬಿಳಿಯಾಗುವುದನ್ನು ತಡೆಯಲು ಕೆಲವು ಮನೆಮದ್ದುಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.

#ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು 2 ಟೀಸ್ಪೂನ್ ಆಮ್ಲಾ ಪುಡಿ ಮತ್ತು 2 ಟೀಸ್ಪೂನ್ ಬ್ರಾಹ್ಮಿ ಪುಡಿಯನ್ನು ಹಾಕಿ ರುಬ್ಬಿಕೊಳ್ಳಿ. ಕೂದಲಿನ ಮೇಲೆ ಹೇರ್ ಮಾಸ್ಕ್ ಆಗಿ ಇದನ್ನು ಹಚ್ಚಿ, ಬೇರುಗಳಿಗೆ ಸರಿಯಾಗಿ ಹಚ್ಚುವುದನ್ನ ಮರೆಯಬೇಡಿ. ಒಂದು ಗಂಟೆ ಬಿಟ್ಟು ಶಾಂಪೂ ಬಳಸಿ ತಲೆ ಸ್ನಾನ ಮಾಡಿ.

#ಮೊದಲು, ಶುಂಠಿಯನ್ನು ತುರಿಯಿರಿ. ನಂತರ ಅದಕ್ಕೆ ಜೇನುತುಪ್ಪ ಸೇರಿಸಿ. ಈ ಪೇಸ್ಟ್ ಅನ್ನು ವಾರಕ್ಕೆ ಎರಡು ಬಾರಿ ಕೂದಲಿಗೆ ಹಚ್ಚಿ.ಇದರಿಂದ ಕೂದಲು ಬಿಳಿಯಾಗುವುದು ಕಡಿಮೆಯಾಗುತ್ತದೆ.

#ಕಪ್ಪು ಚಹಾವು ಬಿಳಿ ಕೂದಲನ್ನು ತಡೆಯಲು ಸಹಾಯ ಮಾಡುವ ಮತ್ತೊಂದು ಪರಿಣಾಮಕಾರಿ ಅಂಶವಾಗಿದೆ. ತಲೆ ಸ್ನಾನ ಮಾಡಿದ ನಂತರ ಇದನ್ನು ಕಂಡಿಷನರ್‌ ರೀತಿ ಬಳಕೆ ಮಾಡಿ.

#ಬೂದು ಕೂದಲಿಗೆ ಬಾದಾಮಿ ಎಣ್ಣೆ ಮತ್ತು ನಿಂಬೆ ರಸಬಾದಾಮಿ ಎಣ್ಣೆ ಮತ್ತು ನಿಂಬೆ ರಸವನ್ನು 2: 3 ರ ಪ್ರಮಾಣದಲ್ಲಿ ಮಿಶ್ರಣ ಮಾಡಿ. ನೆತ್ತಿ ಮತ್ತು ಕೂದಲಿಗೆ ಚೆನ್ನಾಗಿ ಮಸಾಜ್ ಮಾಡಿ. 30 ನಿಮಿಷಗಳ ನಂತರ ತೊಳೆಯಿರಿ.ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಇದ್ದು ಇದು ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಬೇರುಗಳನ್ನು ಪೋಷಿಸುತ್ತದೆ ಮತ್ತು ಅಕಾಲಿಕ ಬೂದುಬಣ್ಣವನ್ನು ತಡೆಯುತ್ತದೆ . ನಿಂಬೆ ರಸವು ಕೂದಲಿಗೆ ಹೊಳಪು ಮತ್ತು ಪರಿಮಾಣವನ್ನು ಸೇರಿಸುವುದು ಮಾತ್ರವಲ್ಲದೆ ಆರೋಗ್ಯಕರ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಬಾದಾಮಿ ಎಣ್ಣೆ ಮತ್ತು ನಿಂಬೆ ರಸ ಎರಡೂ ಸುಲಭವಾಗಿ ಲಭ್ಯವಿರುವ ಪದಾರ್ಥಗಳಾಗಿದ್ದು, ನೈಸರ್ಗಿಕವಾಗಿ ಬೂದು ಕೂದಲನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

#ಹೀರೆಕಾಯಿಯನ್ನು ತೆಂಗಿನ ಎಣ್ಣೆಯೊಂದಿಗೆ ಸೇರಿಸಿ 3-4 ಗಂಟೆಗಳ ಕಾಲ ಕುದಿಸಬೇಕು. ಕುದಿಸಿದ ಎಣ್ಣೆ ಕಪ್ಪು ಬಣ್ಣಕ್ಕೆ ಬಂದ ಮೇಲೆ ಕೂದಲಿಗೆ ಬಳಿದರೆ ಬಿಳಿ ಕೂದಲಿನ ಬಣ್ಣದ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group