ಅತಿಸಾರಕ್ಕೆ ಸೂಕ್ತವಾದ ಕೆಲವು ಮನೆಮದ್ದು!

ಕೆಲವು ವ್ಯಕ್ತಿಗಳಿಗೆ ಕೆಲವು ಆಹಾರಗಳು ಅಲರ್ಜಿಕಾರಕವಾಗಿದ್ದು ಇವನ್ನು ಜೀರ್ಣಿಸಲು ಸಾಧ್ಯವಿಲ್ಲದೇ ತಕ್ಷಣವೇ ವಿಸರ್ಜಿಸಲು ನೀಡುವ ಸೂಚನೆಯೂ ಅತಿಸಾರಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ಜಠರ ಮತ್ತು ಕರುಳುಗಳಲ್ಲಿ ಕಾಣಿಸಿಕೊಳ್ಳುವ ಉರಿಯೂತ, ಕ್ರಾನ್ಸ್ ಕಾಯಿಲೆ, ಸೀಲಿಯಾಕ್ ಕಾಯಿಲೆ, ಜಠರದ ಹುಣ್ಣು ಅಥವಾ ಅಲ್ಸರೇಟಿವ್ ಕೋಲೈಟಿಸ್ ಅಥವಾ ಪಿತ್ತಕೋಶದ ಕಾಯಿಲೆಯೂ ಅತಿಸಾರಕ್ಕೆ ಕಾರಣವಾಗಬಹುದು. ಇಲ್ಲಿ ಕೆಲವು ಮನೆಮದ್ದು ನೀಡಲಾಗಿದೆ ನೋಡಿ!

#ಭೇದಿ ಸಮಸ್ಯೆ ನಿವಾರಣೆ ಮಾಡಲು ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಬಳಸಿಕೊಳ್ಳಬಹುದು. ಒಣಗಿಸಿದ ದಾಳಿಂಬೆ ಸಿಪ್ಪೆಯ 3-4 ತುಂಡುಗಳನ್ನು ತೆಗೆದುಕೊಳ್ಳಿ ಮತ್ತು ಇದನ್ನು 2 ಕಪ್ ನೀರಿಗೆ ಹಾಕಿ. ಮಧ್ಯಮ ಬೆಂಕಿಯಲ್ಲಿ ಪಾತ್ರೆಯ ಮುಚ್ಚಳ ಹಾಕಿ ಇದನ್ನು ಕುದಿಸಿ. ಇದಕ್ಕೆ ನೀವು ಎರಡು ತುಂಡು ಸಕ್ಕರೆ ಅಥವಾ ಸಕ್ಕರೆ ಬಳಸಬಹುದು. ಪಾತ್ರೆಯಲ್ಲಿ ಅರ್ಧದಷ್ಟು ಆಗುವಷ್ಟು ಕುದಿಸಿಕೊಳ್ಳಿ. ಊಟ ಮಾಡಿದ ಅರ್ಧ ಗಂಟೆ ಬಳಿಕ ನೀವು ಇದನ್ನು ಕುಡಿಯಿರಿ.

ದಾಳಿಂಬೆಯ ಒಣ ಸಿಪ್ಪೆಯ ಹುಡಿಯನ್ನು ಮೊಸರಿನೊಂದಿಗೆ ಕೂಡ ಬಳಸಿಕೊಳ್ಳಬಹುದು. ಒಂದು ಚಮಚ ದಾಳಿಂಬೆ ಸಿಪ್ಪೆಯ ಹುಡಿ ಮತ್ತು ಒಂದು ಕಪ್ ದಪ್ಪ ಮೊಸರು ಬಳಸಿಕೊಳ್ಳಿ. ಇದನ್ನು ನೀವು ಖಾಲಿ ಹೊಟ್ಟೆಯಲ್ಲಿ ಸೇವಿಸಿಕೊಳ್ಳಿ.

#ಲೂಸ್ ಮೋಷನ್ ವೇಳೆ ಎಳನೀರು ಕುಡಿಯುವುದು ಕೂಡ ಉತ್ತಮ. ಎಳನೀರಿನಲ್ಲಿ ದೇಹಕ್ಕೆ ಬೇಕಾದ ಎಲ್ಲಾ ಪೌಷ್ಠಿಕಾಂಶಗಳು ಕಂಡು ಬರುತ್ತವೆ. ಇದು ಹೊಟ್ಟೆಯನ್ನು ತಣ್ಣಗಿಡುವುದಲ್ಲದೆ, ಅತಿಸಾರ ಸಮಸ್ಯೆಯನ್ನು ನಿಯಂತ್ರಿಸುತ್ತದೆ.

#ನಿಂಬೆ ಹಣ್ಣಿನ ಪಾನಕ (Lemon Juice) : ನೀರು ಕುಡಿಯಲು ಆಗ್ತಿಲ್ಲ ಎನ್ನುವವರು ನಿಂಬೆ ಹಣ್ಣಿನ ಪಾನಕ ಮಾಡಿ ಸೇವನೆ ಮಾಡಬಹುದು. ನಿಂಬೆ ಹಣ್ಣಿನ ಪಾನಕವನ್ನು ಅನೇಕ ರೀತಿಯಲ್ಲಿ ತಯಾರಿಸಲಾಗುತ್ತದೆ. ನಿಂಬೆ ರಸಕ್ಕೆ ನೀರು ಬೆರೆಸಿ, ಸಕ್ಕರೆ ಹಾಕಿ, ಚಿಟಕಿ ಉಪ್ಪನ್ನು (Salt) ಹಾಕಿ ಕುಡಿದ್ರೆ ಒಳ್ಳೆಯದು. ಇದು ದೇಹವನ್ನು ಹೈಡ್ರೀಕರಿಸುತ್ತದೆ. ಜೊತೆಗೆ ದೇಹಕ್ಕೆ ಶಕ್ತಿ ನೀಡುತ್ತದೆ. ನಿಂಬೆ ಹಣ್ಣಿನ ಪಾನಕ, ಭೇದಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ನಿಂಬೆ ಪಾನಕವನ್ನು ನೀವು ದಿನಕ್ಕೆ 2- 3 ಬಾರಿ ಸೇವನೆ ಮಾಡಬೇಕು. ಇದು ದೇಹದಲ್ಲಿ ಖನಿಜಗಳನ್ನು ಉತ್ಪಾದಿಸಲು ನೆರವಾಗುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group