ಹಸಿ ಮೊಟ್ಟೆ ಸೇವನೆಯು ಈ ಸಮಸ್ಯೆಗಳಿಗೆ ಕಾರಣವಾಗಬಹುದು!

ಮೊಟ್ಟೆಗಳಲ್ಲಿ ಅನೇಕ ರುಚಿ ರುಚಿಯಾದ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಒಂದು ವಿಧದಲ್ಲಿ ಮೊಟ್ಟೆಗಳು ನಿಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸಿ, ದೇಹದ ತೂಕವನ್ನು ಕಡಿಮೆ ಮಾಡಲು ಸಾಕಷ್ಟು ಶ್ರಮಿಸುತ್ತದೆ. ಮುಖ್ಯವಾಗಿ ಸಾಕಷ್ಟು ಮಂದಿ ಮೊಟ್ಟೆಗಳನ್ನು ಹಸಿ ಹಸಿಯಾಗಿ ಸೇವನೆ ಮಾಡಲು ಇಷ್ಟ ಪಡುತ್ತಾರೆ.ಅಷ್ಟಕ್ಕೂ ಮೊಟ್ಟೆಗಳನ್ನು ಹಸಿ ಹಸಿಯಾಗಿ ಸೇವನೆ ಮಾಡಬಹುದೇ? ಇದರಿಂದ ಆಗುವ ಅನಾನುಕೂಲಗಳೇನು? ಎಂಬುದನ್ನು ಇಲ್ಲಿ ತಿಳಿಯಿರಿ.

#ಹಸಿ ಮೊಟ್ಟೆಯಲ್ಲಿರುವ ದ್ರವವು ದೇಹಕ್ಕೆ ವಿವಿಧ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ನೀವು ಮೊಟ್ಟೆಯನ್ನು ಒಡೆದು ತಿಂದರೆ , ಮೊಟ್ಟೆಯ ಬಿಳಿಭಾಗವು ಕೆಲವರಲ್ಲಿ ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡಬಹುದು.

#ಹಸಿ ಮೊಟ್ಟೆಗಳು ಸಾಲ್ಮೊನೆಲ್ಲಾ ಹೊಂದಿರುತ್ತವೆ. ಈ ಸಾಲ್ಮೊನೆಲ್ಲಾ ಎಂಬುದು ಆಹಾರದಲ್ಲಿ ಸಾಮಾನ್ಯವಾಗಿ ಕಂಡುವರುವ ಬ್ಯಾಕ್ಟೀರಿಯಾ ಆಗಿದೆ. ಇದು ಬಹುತೇಕರಿಗೆ ಅತಿಸಾರ, ಜ್ವರ, ಸೆಳೆತ ಮತ್ತು ವಾಂತಿಗೆ ಕಾರಣವಾಗಬಹುದು.

#ಮೊಟ್ಟೆಯ ಬಿಳಿಭಾಗವು ಹೆಚ್ಚಿನ ಪ್ರೋಟೀನ್ ಅನ್ನು ಹೊಂದಿರುತ್ತದೆ. ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಇದು ಹಾನಿಕಾರಕವಾಗಿದೆ. ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾವು ಕೋಳಿಗಳ ಕರುಳಿನಲ್ಲಿ ಕಂಡುಬರುತ್ತದೆ. ಇದು ಮೊಟ್ಟೆಯ ಚಿಪ್ಪಿನ ಒಳಗೆ ಮತ್ತು ಹೊರಗೆ ಎರಡೂ ಹರಡುತ್ತದೆ. ಸಾಲ್ಮೊನೆಲ್ಲಾವನ್ನು ತೆಗೆದುಹಾಕಲು ಮೊಟ್ಟೆಗಳನ್ನು ಹೆಚ್ಚಿನ ತಾಪಮಾನದಲ್ಲಿ ಕುದಿಸಬೇಕು. ಬದಲಾಗಿ ಮೊಟ್ಟೆಯನ್ನು ಹಸಿಯಾಗಿ ಕುಡಿದರೆ ಬ್ಯಾಕ್ಟೀರಿಯಾದ ಬಾಧೆ ಉಂಟಾಗುತ್ತದೆ.

ಸೂಚನೆ: ಮಕ್ಕಳು, ವಯೋವೃದ್ಧರು ಮತ್ತು ಗರ್ಭಿಣಿ ಮಹಿಳೆಯರು ಹಸಿ ಮೊಟ್ಟೆ ಸೇವನೆ ಮಾಡುವುದನ್ನು ಕಡೆಗಣಿಸಬೇಕು. ಹಸಿ ಮೊಟ್ಟೆಯು ಶೇ.100ರಷ್ಟು ಸುರಕ್ಷಿತವಲ್ಲ ಎಂದು ಯಾರೂ ಹೇಳುವಂತಿಲ್ಲ. ಹಸಿ ಮೊಟ್ಟೆಯು ಬ್ಯಾಕ್ಟೀರಿಯಾದಿಂದ ಕಲುಷಿತವಾಗಿರುವಂತಹ ಸಾಧ್ಯತೆಯು ಇರುವುದು. ಶಿತಲೀಕರಿಸಲ್ಪಟ್ಟಿರುವ ಮೊಟ್ಟೆ ಖರೀದಿ ಮಾಡುವುದರಿಂದ ಈ ಅಪಾಯ ತಪ್ಪಿಸಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group