ಮಿತವಾದ ಬೆಲ್ಲ ಸೇವನೆಯು ಆರೋಗ್ಯಕ್ಕೆ ಹಿತ!

#ಒಂದು ವೇಳೆ ನೀವೂ ಕೂಡ ಅಧಿಕ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದರೆ ಬೆಲ್ಲದ ಸೇವನೆ ನಿಮಗೆ ತುಂಬಾ ಲಾಭಕಾರಿಯಾಗಿದೆ. ಬೆಲ್ಲದಲ್ಲಿ ಹೇರಳ ಪ್ರಮಾಣದಲ್ಲಿ ಪೊಟ್ಯಾಸಿಯಂ ಕಂಡು ಬರುತ್ತದೆ, ಇದು ರಕ್ತದೊತ್ತಡವನ್ನು ಸಂತುಲನದಲ್ಲಿಡುತ್ತದೆ. ಕಿಡ್ನಿ ಸ್ಟೋನ್ ಹಾಗೂ ಆಸ್ಟಿಯೋಫೋರೋಸಿಸ್ ಸಮಸ್ಯೆಗಳಿಗೂ ಕೂಡ ಬೆಲ್ಲದ ಸೇವನೆ ಪರಿಣಾಮಕಾರಿಯಾಗಿದೆ. ಜಠರ ನಮ್ಮ ಶರೀರದ ಒಂದು ಮಹತ್ವಪೂರ್ಣ ಅಂಗವಾಗಿದೆ. ಜಠರದಲ್ಲಿನ ಸಮಸ್ಯೆ ನಮ್ಮ ಶರೀರದ ಇತರ ಅಂಗಗಳ ಸಮಸ್ಯೆಗಳಿಗೂ ಕೂಡ ಕಾರಣವಾಗುತ್ತದೆ. ಹೀಗಾಗಿ ಜಠರವನ್ನು ಆರೋಗ್ಯಪೂರ್ಣವಾಗಿರಿಸಲು ರಾತ್ರಿಯ ಹೊತ್ತು ಬಿಸಿನೀರಿನ ಜೊತೆಗೆ ಬೆಲ್ಲವನ್ನು ಸೇವಿಸಿ.
#ಬೆಲ್ಲವನ್ನು ಪ್ರತಿದಿನ ಒಂದು ಲೋಟ ಹಾಲು ಅಥವಾ ನೀರಿನ ಜತೆ ಸೇವಿಸುವುದರಿಂದ ಹೊಟ್ಟೆ ತಣ್ಣಗಾಗುತ್ತದೆ ಮತ್ತು ಗ್ಯಾಸ್ಟಿಕ್ನಿಂದ ಹೊಟ್ಟೆ ಉಬ್ಬರಿಸುವಿಕೆಯನ್ನು ತಡೆಯಬಹುದು.
#ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗಲು ಸಹಾಯ:ಮಹಿಳೆಯರಿಗೆ ಹೆಚ್ಚಾಗಿ ಹಿಮೋಗ್ಲೋಬಿನ್ ಸಮಸ್ಯೆ ಕಾಡುತ್ತಿರುತ್ತೆ. ದಿನ ಬೆಲ್ಲ ತಿಂದ್ರೆ ಹಿಮೋಗ್ಲೋಬಿನ್ ಮಟ್ಟದಲ್ಲಿ ಏರಿಕೆಯಾಗುತ್ತದೆ ಎಂದು ಆರ್ಯುವೇದದ ವೈದ್ಯರು ಹೇಳಿದ್ದಾರೆ. ಐರನ್ ಕಂಟೆಂಟ್ ಹೆಚ್ಚಿರುವುದರಿಂದ ಕೆಂಪು ರಕ್ತ ಕಣಗಳು ಹೆಚ್ಚಾಗುತ್ತವೆ.
#ಗಂಟಲು ಕೆರೆತ, ಕೆಮ್ಮು ಕಾಣಿಸಿದರೆ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಸುಟ್ಟು ಅದನ್ನು ಬೆಲ್ಲದ ಜೊತೆ ತಿನ್ನುವುದು ಒಳ್ಳೆಯದು.
#ನಿಯಮಿತವಾದ ಬೆಲ್ಲದ ಸೇವನೆ ಸಂಧಿನೋವನ್ನು ಕಡಿಮೆ ಮಾಡುತ್ತದೆ. ಮಂಡಿ ನೋವು, ಕೈಕಾಲು ನೋವು ಇವುಗಳನ್ನು ಕಮ್ಮಿ ಮಾಡುವಲ್ಲಿ ಬೆಲ್ಲ ಪ್ರಯೋಜನಕಾರಿಯಾಗಿದೆ.
#ಮುಟ್ಟಿನ ಸಮಸ್ಯೆ ನಿವಾರಣೆ: ಹಲವು ಪೌಷ್ಟಿಕಾಂಶಗಳು ಬೆಲ್ಲದಲ್ಲಿ ಇರುವುದರಿಂದ ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಸ್ಯೆಗೆ ಇದು ದಿವೌಷಧ. ಮುಟ್ಟಿನ ಸಮಯದಲ್ಲಿ ಸೆಳೆತ ಮತ್ತು ಹೊಟ್ಟೆ ನೋವನ್ನು ನಿವಾರಿಸುತ್ತದೆ.