ನೇರಳೆ ಹಣ್ಣು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಪ್ರಕೃತಿ ನಮಗೆ ಅನೇಕ ರೀತಿಯ ಹಣ್ಣುಗಳನ್ನು ನೀಡಿದೆ. ಅದನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಬಳಸಿಕೊಂಡರೆ ಬಹುತೇಕ ಆರೋಗ್ಯ ಸಮಸ್ಯೆಗಳಿಂದ ನೀವು ಹೊರ ಬಂದಂತೆ. ಮಕ್ಕಳು ಮಾತ್ರವಲ್ಲ, ಯುವಕರು, ಮಧ್ಯಮ ವಯಸ್ಕರು, ವೃದ್ಧರು ಕೂಡಾ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು. ಹಣ್ಣುಗಳು ಮಕ್ಕಳ ಬೆಳವಣಿಗೆಗೆ, ದೃಢತೆಗೆ, ಉತ್ತಮ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಹಣ್ಣು ತಿನ್ನುವುದರಿಂದ ಸಂಪೂರ್ಣ ಆರೋಗ್ಯ ನಿಮ್ಮದಾಗುತ್ತದೆ. ಮೂಳೆಗಳಿಗೂ ಬಲ ನೀಡುತ್ತದೆ. ಒಂದೊದು ಹಣ್ಣು ಒಂದೊಂದು ರೀತಿಯ ಆರೋಗ್ಯ ಲಾಭ ನೀಡುತ್ತದೆ. ಅದೇ ರೀತಿ ನೇರಳೆ ಹಣ್ಣು ಸೇವಿಸುವುದರಿಂದ ನಿಮಗೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ…?

#ನೇರಳೆಯ ಬೀಜಗಳನ್ನು ಒಣಗಿಸಿ, ಪುಡಿ ಮಾಡಿ ಸಂಗ್ರಹಿಸುವ ಆರ್ಯುವೇದ ತಜ್ಞರು, ಅದನ್ನು ಹಲವು ಕಾಯಿಲೆಗಳಿಗೆ ಔಷಧವಾಗಿ ಬಳಸುತ್ತಾರೆ. ನೈಸರ್ಗಿಕವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವ ಗುಣ ನೇರಳೆ ಬೀಜದಲ್ಲಿದೆ. ಬೀಜದಲ್ಲಿರುವ ಹೈಪೋಗ್ಲೈಸೆಮಿಕ್ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಗ್ಗಿಸುತ್ತದೆ. ಜೊತಗೆ ಜಾಂಬೊಲಿನ್ ಮತ್ತು ಜಾಂಬೊಸೈನ್ ಎನ್ನುವ ಅಂಶಗಳು, ದೇಹದಲ್ಲಿ ಇನ್ಸುಲಿನ್ ಮಟ್ಟ ಹೆಚ್ಚಿಸುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ನೆರವಾಗುತ್ತವೆ.

#ನಿಯಮಿತವಾಗಿ ನೇರಳೆ ಹಣ್ಣಿನ ಸೇವನೆಯಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಬಹುದು. ಈ ಹಣ್ಣಿನಲ್ಲಿ ಐರನ್ ಅಂಶ ಇರುವುದರಿಂದ ಇದು ರಕ್ತ ಶುದ್ಧ ಮಾಡುವಲ್ಲೂ ಪ್ರಮುಖ ಪಾತ್ರವಹಿಸುತ್ತದೆ.

#ರುತುಚಕ್ರದ ವೇಳೆ ಮಹಿಳೆಯರಲ್ಲಿ ಉಂಟಾಗುವ ರಕ್ತಸ್ರಾವದಿಂದ ಆಗುವ ರಕ್ತದ ಹಾನಿಯನ್ನು ಸರಿದೂಗಿಸುವ ಶ್ರೇಷ್ಠ ಗುಣ ನೇರಳೆ ಹಣ್ಣಿನಲ್ಲಿದೆ. ರಕ್ತಹೀನತೆಯಿಂದ ಬಳಲುತ್ತಿರುವವರು ಸಾಧ್ಯವಾದರೆ ಪ್ರತಿ ದಿನವೂ ನೇರಳೆ ಹಣ್ಣು ಸೇವಿಸಬೇಕು. ಇದರಲ್ಲಿರುವ ಕಬ್ಬಿಣದ ಅಂಶವು ರಕ್ತವನ್ನು ಶುದ್ಧೀಕರಿಸುತ್ತದೆ. ಜೊತೆಗೆ ರಕ್ತ ಹೀನತೆಯಿಂದ ಮುಕ್ತಿ ನೀಡುತ್ತದೆ. ನೇರಳೆ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದ ಒತ್ತಡ ನಿವಾರಣೆಯಾಗುತ್ತದೆ.

#ಈ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಮೆದುಳಿಗೆ ಮತ್ತು ಹೃದಯಕ್ಕೆ ಹೆಚ್ಚು ಉಪಯುಕ್ತಕಾರಿಯಾಗಿದೆ.

#ನೇರಳೆ ಎಲೆ, ತೊಗಟೆ, ಬೀಜಗಳನ್ನು ಬ್ಯಾಕ್ಟೀರಿಯಾಗಳಿಂದ ಹರಡುವ ಸೋಂಕುಗಳ ನಿವಾರಣೆಗೆ ಬಳಸಲಾಗುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group