ಬಾಯಿ ಹುಣ್ಣಿನ ಸಮಸ್ಯೆ ಕಾಣಿಸಿಕೊಂಡರೆ ಈ ಮನೆಮದ್ದು ಟ್ರೈ ಮಾಡಿ!

EK6FF5 Close up Children with aphtha on lip
ಸಾಮಾನ್ಯವಾಗಿ ಎಲ್ಲರೂ ಬಾಯಿ ಹುಣ್ಣಿನ ನೋವನ್ನು ಅನುಭವಿಸಿರುತ್ತಾರೆ. ಇದು ನೋಡಲು ಚಿಕ್ಕದಾದರೂ ಬಹಳ ನೋವು ಕೊಡುತ್ತದೆ. ಬಾಯಿಯಲ್ಲಿ ಹುಣ್ಣು ಆದರೆ ಏನೂ ತಿನ್ನಲಾಗುವುದಿಲ್ಲ. ಅದರಲ್ಲೂ ಖಾರದ ಪದಾರ್ಥಗಳನ್ನು ಸೇವಿಸುವಾಗ ಪ್ರಾಣ ಹೋದಂತಾಗುತ್ತದೆ. ಅನೇಕ ಜನರು ಬಾಯಿ ತೆರೆಯಲು ಕೂಡಾ ಕಷ್ಟಪಡುತ್ತಾರೆ. ಕೆಲವೊಂದು ಮನೆಮದ್ದುಗಳನ್ನು ಇಲ್ಲಿ ನೀಡಲಾಗಿದೆ!
#ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು:ಬಾಯಿ ಹುಣ್ಣು ಉಂಟಾದಾಗ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿದರೆ ಹುಣ್ಣು ಬೇಗನೆ ಒಣಗುವುದು. ಇನ್ನು ಹುಣ್ಣು ಇರುವ ಕಡೆ ಸ್ವಲ್ಪ ಕಲ್ಲುಪ್ಪು ಇಡಿ. ಇಟ್ಟಾಗ ಸ್ವಲ್ಪ ಉರಿ ಅನಿಸಿದರೂ ಹುಣ್ಣು ಬೇಗನೆ ಒಣಗುವುದು. ಉಪ್ಪನ್ನು ಹುಣ್ಣು ಒಣಗುವವರೆಗೆ ಆಗಾಗ ಇಡಿ.
#ಬಾಯಿ ಹುಣ್ಣು ಆದಾಗ ಆಮ್ಲೀಯ ಹಣ್ಣುಗಳಾದ ನಿಂಬೆ, ಕಿತ್ತಳೆ, ಅನಾನಸ್, ಚಿಪ್ಸ್ ಮತ್ತು ಮಸಾಲೆಯುಕ್ತ ಆಹಾರ ಸೇವಿಸಬಾರದು. ನಿಧಾನವಾಗಿ ಮೆದುವಾಗಿರುವ ಬ್ರಿಸಲ್ಲುಗಳಿರುವ ಬ್ರಶ್ ಉಪಯೋಗಿಸಿ ಹಲ್ಲು ಉಜ್ಜಬೇಕು. ಯಾವುದೇ ರೀತಿಯ ಮಾನಸಿಕ ಒತ್ತಡ ಇದ್ದರೆ ಧ್ಯಾನ ಮಾಡಲು ಪ್ರಯತ್ನಿಸಿ. ಒತ್ತಡವನ್ನು ನಿವಾರಿಸಲು ನೀವು ಮಾಡಲು ಇಷ್ಟಪಡುವ ಯಾವುದೇ ಚಟುವಟಿಕೆಯನ್ನು ತೊಡಗಿಸಿಕೊಳ್ಳಬೇಕು. ಪ್ರತಿದಿನ ಕನಿಷ್ಠ ಎಂಟು ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡಬೇಕು. ಸಾಕಷ್ಟು ನೀರು ಕುಡಿಯುವುದು ಬಾಯಿ ಹುಣ್ಣುಗಳ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
#ಬಾಯಿಹುಣ್ಣು ಗಾತ್ರ ಹೆಚ್ಚಾಗದಿರಲು ಲೋಳೆಸರ ಬಳಸುವುದು ಒಳ್ಳೆಯದು. ಅಲ್ಲದೆ ಉರಿ, ನೋವು ಕಡಿಮೆ ಮಾಡುತ್ತದೆ. ತಾಜಾ ಲೋಳೆಸರ ತೆಗೆದು ಹುಣ್ಣು ಇರುವ ಕಡೆ ಹಚ್ಚುತ್ತಾ ಇರಿ. ಈ ರೀತಿ ಮಾಡುವುದರಿಂದ ಹುಣ್ಣು ಬೇಗನೆ ಒಣಗುವುದು.
#ಬಾಯಿ ಹುಣ್ಣಿನ ಸಮಸ್ಯೆ ಕಾಣಿಸಿಕೊಂಡರೆ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿ. ಹಾಗೆಯೇ ದೇಹವನ್ನು ತಂಪಾಗಿಡುವ ಮೊಸರು, ಮಜ್ಜಿಗೆ, ಹಣ್ಣುಗಳ ಜ್ಯೂಸ್ಗಳನ್ನು ಹೆಚ್ಚಾಗಿ ಸೇವಿಸಿ. ಇದರಿಂದ ಸಹ ಬೇಗನೇ ಬಾಯಿ ಹುಣ್ಣು ಗುಣವಾಗುತ್ತದೆ.
#ಜೇನು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಬಾಯಿ ಹುಣ್ಣಿಗೆ ಕೂಡ ಇದೊಂದು ಉತ್ತಮ ಮದ್ದು. ಹುಣ್ಣಿರೋ ಜಾಗಕ್ಕೆ ಹನಿಯನ್ನು ಹಚ್ಚಬೇಕು. ಆದ್ರೆ ಬಾಯಿಯೊಳಗಡೆ ಆಗಿರೋ ಕಾರಣ ಜೇನು ಹುಣ್ಣಿನ ಮೇಲೆ ಜಾಸ್ತಿ ಹೊತ್ತು ಇರೋದಿಲ್ಲ. ಲಾಲಾರಸದ ಜೊತೆ ಹೊಟ್ಟೆ ಸೇರುತ್ತೆ. ಆದಕಾರಣ ಗಂಟೆಗೊಮ್ಮೆ ಜೇನನ್ನು ಹುಣ್ಣಿನ ಮೇಲೆ ಲೇಪಿಸುತ್ತಲಿರಬೇಕು. ಜೇನಿನಲ್ಲಿ ಆಂಟಿ ಮೈಕ್ರೋಬೈಯಲ್ ಗುಣವಿದ್ದು,ಯಾವುದೇ ಗಾಯವನ್ನು ಬೇಗ ವಾಸಿ ಮಾಡಬಲ್ಲದು. ಹೀಗಾಗಿ ಜೇನು ಹಚ್ಚೋದ್ರಿಂದ ಹುಣ್ಣು ಬೇಗ ಒಣಗುವ ಜೊತೆಗೆ ಆ ಜಾಗದಲ್ಲಿ ಸೋಂಕು ಮರುಕಳಿಸದಂತೆ ತಡೆಯುತ್ತದೆ.
#ಬಾಯಿ ಹುಣ್ಣು ಉಂಟಾದರೆ ಆಹಾರವನ್ನು ಜಗಿಯಲೂ ಕಷ್ಟವಾಗುತ್ತದೆ, ಮಾತನಾಡಲೂ ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಪೇರಳೆಯ ಚಿಗುರು ಎಲೆಗಳನ್ನು ಜಗಿಯುವುದರಿಂದ ಬಾಯಿ ಹುಣ್ಣನ್ನು ಬೇಗನೇ ಶಮನಗೊಳಿಸಬಹುದು.