ಮೂಸಂಬಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಏನು ಪ್ರಯೋಜನ?

ಈ ಹಣ್ಣಿನಲ್ಲಿ ವಿಟಮಿನ್ ಸಿ, ಸತು, ಫೈಬರ್ ಮತ್ತು ಕ್ಯಾಲ್ಸಿಯಂ ಇರುತ್ತದೆ.ಈ ಎಲ್ಲಾ ಪೋಷಕಾಂಶಗಳು ಮಾನವ ದೇಹಕ್ಕೆ ಹೆಚ್ಚು ಅಗತ್ಯವಾಗಿವೆ. ಆದ್ದರಿಂದ, ಮೊಸಾಂಬಿ ರಸವನ್ನು ನಿಯಮಿತವಾಗಿ ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಓದಿ.

#ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:ಮೂಸಂಬಿ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ. ಮೊಸಂಬಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

#ಕೂದಲು ಹಾಗೂ ಚರ್ಮದ ಆರೋಗ್ಯಕ್ಕೆ ಮೂಸಂಬಿಯ ರಸವು ತುಂಬಾ ಪರಿಣಾಮವಾರಿ. ಮೂಸಂಬಿಯಲ್ಲಿ ಇರುವಂತಹ ನಂಜುನಿರೋಧಕ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳೇ ಇದಕ್ಕೆ ಕಾರಣವಾಗಿದೆ. ಇದರಲ್ಲಿನ ವಿಟಮಿನ್ ಗಳು ಕೂದಲನ್ನು ಬಲಪಡಿಸುವುದು ಮತ್ತು ತಲೆಹೊಟ್ಟು ಮತ್ತು ಕೂದಲು ತುಂಡಾಗುವುದನ್ನು ತಡೆಯುವುದು.

#ಮೂಸಂಬಿ ಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಎ ರಕ್ತದಲ್ಲಿರುವ ಬಿಳಿ ಜೀವಕೋಶಗಳನ್ನು ಉತ್ಪಾದಿಸಲು ಉತ್ತೇಜಿಸುತ್ತದೆ. ಇದರಿಂದ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸುತ್ತದೆ. ಹಾಗೆಯೇ ದೇಹದಲ್ಲಿ ಕಬ್ಬಿಣಾಂಶವನ್ನು ಹೆಚ್ಚಿಸಲು ಮೂಸಂಬಿ ಹಣ್ಣಿನ ಸೇವನೆ ಉತ್ತಮ. ಅಷ್ಟೇ ಅಲ್ಲದೆ ಶೀತ ಮತ್ತು ಕೆಮ್ಮಿಗೆ ಈ ಹಣ್ಣು ಅತ್ಯುತ್ತಮ ಪರಿಹಾರವಾಗಿದೆ.

#ಒಂದು ಚಿಕ್ಕ ಚಮಚ ಕಡ್ಲೆಹಿಟ್ಟಿಗೆ ಕೊಂಚ ಮೂಸಂಬಿ ರಸ ಸೇರಿಸಿ ನಯವಾದ ಲೇಪನ ತಯಾರಿಸಿ. ಈಗ ತಾನೇ ತೊಳೆದುಕೊಂಡ ಮುಖಕ್ಕೆ ನಯವಾಗಿ ಲೇಪಿಸಿ ಹತ್ತು ನಿಮಿಷ ಬಿಟ್ಟು ತೊಳೆದುಕೊಳ್ಳಿ. ಇದು ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

#ಸ್ಕರ್ವಿಗೆ ಚಿಕಿತ್ಸೆ ನೀಡಲು ನೀವು ಮನೆಮದ್ದುಗಳನ್ನು ಹುಡುಕುತ್ತಿದ್ದರೆ, ಮೊಸಾಂಬಿ ಜ್ಯೂಸ್ ಕುಡಿಯಿರಿ. ಸ್ಕರ್ವಿ ಎಂಬುದು ವಿಟಮಿನ್ ಸಿ ಕೊರತೆಯಿಂದ ಉಂಟಾಗುವ ಒಂದು ಕಾಯಿಲೆಯಾಗಿದೆ. ಮೊಸಾಂಬಿ ರಸದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ ಮತ್ತು ಸ್ಕರ್ವಿ ಪರಿಣಾಮಕಾರಿಯಾಗಿ ಗುಣಪಡಿಸಲು ಸಹಾಯ ಮಾಡುತ್ತದೆ.

#ಮೂಸಂಬಿ ಜ್ಯೂಸ್ ಕಾಮಾಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ರಸವು ಯಕೃತ್ತಿಗೆ ತುಂಬಾ ಒಳ್ಳೆಯದು. ಪರಿಣಾಮವಾಗಿ, ಅನೇಕ ರೀತಿಯ ಪಿತ್ತಜನಕಾಂಗದ ಕಾಯಿಲೆಗಳ ಅಪಾಯವು ಕಡಿಮೆಯಾಗುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group