ಮಧುಮೇಹ ಅತಿಯಾಗಿ ಇದ್ದರೆ ನಿವಾರಣೆಗೆ ಕೆಲವು ಸರಳ ಸಲಹೆ!

Diabetes : ಮಧುಮೇಹವು ಸ್ಟೀರಾಯ್ಡ್ಗಳು, ಕೆಲವು ರೀತಿಯ ವೈರಸ್ಗಳು, ಸೋಂಕುಗಳು ಮತ್ತು ಹಾರ್ಮೋನುಗಳ ಅಸಮತೋಲನದಿಂದ ಉಂಟಾಗುತ್ತದೆ. ಇದರ ಪ್ರಮುಖ ಲಕ್ಷಣಗಳೆಂದರೆ ಆಗಾಗ್ಗೆ ಮೂತ್ರ ವಿಸರ್ಜನೆ (ಪಾಲಿಯುರಿಯಾ), ಗಂಟಲು ಒಣಗುವುದು ಅಥವಾ ಆಗಾಗ್ಗೆ ಬಾಯಾರಿಕೆ (ಪಾಲಿಡಿಪ್ಸಿಯಾ), ಕಣ್ಣಿನ ಸೈಟ್ ನಿಧಾನವಾಗುವುದು, ಸ್ಪಷ್ಟ ಕಾರಣವಿಲ್ಲದೆ ಹಠಾತ್ ತೂಕ ಹೆಚ್ಚಾಗುವುದು ಅಥವಾ ತೂಕ ಇಳಿಯುವುದು. ನೀವೂ ಮಧುಮೇಹ ನಿಯಂತ್ರಣ ಮಾಡಲು ಪರದಾಡುತ್ತಿದ್ದರೆ ನಿಮಗಾಗಿ ಕೆಲವು ಟಿಪ್ಸ್ ಇಲ್ಲಿದೆ
#ಕೊಬ್ಬಿನಾಂಶ ನಿಯಂತ್ರಣ:ಮಧುಮೇಹಿಗಳಿಗೆ ದೇಹದಲ್ಲಿ ಉತ್ತಮ ಕೊಬ್ಬಿನಾಂಶದ ಪ್ರಮಾಣ ಕಡಿಮೆಯಾಗಿ, ಬೇಡದೇ ಇರುವ ಅಥವಾ ಅನಗತ್ಯ ಕೊಬ್ಬು ಹೆಚ್ಚಳವಾಗುವುದು ಕೂಡಾ ಒಂದು ಪ್ರಮುಖ ಸಮಸ್ಯೆ. ಇದು ಹೃದಯ ಸಂಬಂಧಿ ತೊಂದರೆ ಹಾಗೂ ಸ್ಟ್ರೋಕ್ನಂತಹ ಸಮಸ್ಯೆಗಳಿಗೆ ದಾರಿ ಮಾಡಿಕೊಡುವ ಕಾರಣ ಕೊಬ್ಬಿನಾಂಶ ನಿಯಂತ್ರಣದತ್ತ ನಿಗಾ ವಹಿಸಲೇಬೇಕು. ಆದ್ದರಿಂದ ಮಧುಮೇಹ ಸಮಸ್ಯೆ ಹೊಂದಿದವರು ಫಾಸ್ಟ್ ಫುಡ್, ಪಿಜ್ಜಾ, ಬರ್ಗರ್, ಕರಿದ ತಿಂಡಿಗಳಿಂದ ಆದಷ್ಟು ದೂರವಿರಲೇಬೇಕು.
#ಜೀರಿಗೆ ನೀರು- ಒಂದು ಲೀಟರ್ ನೀರಿಗೆ ಎರಡು ದೊಡ್ಡ ಚಮಚ ಜೀರಿಗೆ ಹಾಕಿ ಕುದಿಸಿ. ಕುದಿಯಲು ಪ್ರಾರಂಭಿಸ ಬಳಿಕ ಸುಮಾರು ನಾಲ್ಕೈದು ನಿಮಿಷಗಳವರೆಗೆ ನೀರನ್ನು ಗಮನಿಸಿ. ಒಂದು ಹಂತದಲ್ಲಿ ಜೀರಿಗೆಯಿಂದ ಬಣ್ಣ ಹೊರಬರಲು ಪ್ರಾರಂಭವಾಗುತ್ತದೆ. ಈಗ ಉರಿಯನ್ನು ಆರಿಸಿ ತಣಿಯಲು ಬಿಡಿ.ಸುಮಾರು ಉಗುರುಬೆಚ್ಚಗಾಗುವಷ್ಟು ತಣಿದ ಬಳಿಕ ಈ ನೀರನ್ನು ಸೋಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿ. ಈ ನೀರನ್ನು ಇಡಿಯ ದಿನ ಕೊಂಚಕೊಂಚವಾಗಿ ಕುಡಿಯುತ್ತಾ ಬನ್ನಿ. ಇದು ಕೊಂಚವೇ ಬಿಸಿಯಾಗಿರಬೇಕೇ ಹೊರತು ತೀರಾ ತಣ್ಣಗೂ ಇರಬಾರದು, ತೀರಾ ಬಿಸಿಯಾಗಿಯೂ ಇರಬಾರದು.
#ಬೆಳ್ಳುಳ್ಳಿ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಹಲವಾರು ಔಷಧೀಯ ಗುಣಗಳಿವೆ. ಬೆಳ್ಳುಳ್ಳಿ ಉತ್ತಮ ರುಚಿ ಮತ್ತು ವಾಸನೆಯನ್ನು ಹೊಂದಿರುತ್ತವೆ. ಬೆಳ್ಳುಳ್ಳಿಗೆ ದೇಹದಲ್ಲಿನ ಕಾಯಿಲೆಗಳನ್ನು ತಡೆಯುವ ಶಕ್ತಿ ಇದೆ.
#ವಿಟಮಿನ್ ಸಿ ಹೊಂದಿರುವ ಕಿತ್ತಳೆ ಹಣ್ಣನ್ನು ಶುಗರ್ ಇರುವವರು ಸೇವನೆ ಮಾಡಬಹುದು.ಅಮೆರಿಕನ್ ಡಯಾಬೆಟಿಸ್ ಅಸೋಸಿಯೇಷನ್ ಪ್ರಕಾರ, ನಿಂಬೆ ಹಣ್ಣು, ಕಿತ್ತಳೆ ಹಣ್ಣು, ಸಿಟ್ರಸ್ ಹಣ್ಣುಗಳನ್ನು “ಡಯಾಬಿಟಿಸ್ ಸೂಪರ್ ಫುಡ್” ಎಂದು ಕರೆಯಲಾಗುತ್ತದೆ.ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ನಿಮ್ಮ ಆಹಾರದಲ್ಲಿ ಈ ಹಣ್ಣುಗಳನ್ನು ಸೇರಿಸಿ.ಈ ಹಣ್ಣಿನಲ್ಲಿಯು ಕೂಡ ಗ್ಲೈಸಮಿಕ್ ಇಂಡೆಕ್ಸ್ ಅತಿ ಕಡಿಮೆ ಪ್ರಮಾಣದಲ್ಲಿದೆ.ನೀವು ಈ ಹಣ್ಣನ್ನು ಸಕ್ಕರೆ ರಹಿತ ಜ್ಯೂಸ್, ಸಲಾಡ್ ರೂಪದಲ್ಲಿ ತೆಗೆದುಕೊಳ್ಳಬಹುದು.
#ಪೇರಳೆ ಎಲೆ- ಸುಮಾರು ನಾಲ್ಕರಿಂದ ಐದು ತಾಜಾ ಪೇರಳೆ ಎಲೆಗಳನ್ನು ಸಂಗ್ರಹಿಸಿ ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿರುವ ನೀರಿನಲ್ಲಿ ಮುಳುಗಿಸಿ ನೀರನ್ನು ಕುದಿಸಿ. ನೀರು ಕುದಿಯಲು ಪ್ರಾರಂಭವಾದ ಬಳಿಕ ಸುಮಾರು ಐದು ನಿಮಿಷಗಳ ಕಾಲ ಕುದಿಸುವುದನ್ನು ಮುಂದುವರೆಸಿ. ಬಳಿಕ ಈ ನೀರನ್ನು ಸೋಸಿ ಒಂದು ಲೋಟದಲ್ಲಿ ಸಂಗ್ರಹಿಸಿ. ಈ ನೀರು ಉಗುರುಬೆಚ್ಚಗಾದ ಬಳಿಕವೇ ಪ್ರತಿ ಊಟದ ಬಳಿಕ ಸೇವಿಸಿ. ಎಲೆಗಳನ್ನು ಸ್ವಚ್ಛಗೊಳಿಸಿ ಹಸಿಯಾಗಿ ಅಗಿದು ನುಂಗುವುದು ಇನ್ನಷ್ಟು ಉತ್ತಮ.