ಚಕ್ಕೋತ ಹಣ್ಣಿನ ಈ ಅದ್ಭುತ ಪ್ರಯೋಜನಗಳು ತಿಳಿದಿದೆಯೇ!

ಚಕ್ಕೋತ ಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಸಿ ದೈನಂದಿನ ಅಗತ್ಯವನ್ನು ಪೂರೈಸುತ್ತದೆ. ವಿಟಮಿನ್ ಸಿ ರಕ್ತ ಪರಿಚಲನೆಗಾಗಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುವುದಲ್ಲದೆ, ಬಿಳಿ ರಕ್ತಕಣಗಳಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಇದರ ಜೊತೆಯಲ್ಲಿ, ಹಣ್ಣಿನಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗುಣಗಳು ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತದೆ.ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಹೀಗೆ ಇದರ ಇನ್ನಷ್ಟು ಪ್ರಯೋಜನಗಳನ್ನು ತಿಳಿಯೋಣ ಬನ್ನಿ!

#ಮಲಬದ್ಧತೆಗೆ ಚಿಕಿತ್ಸೆ ನೀಡುತ್ತದೆ:ಚಕ್ಕೋತ ದೇಹಕ್ಕೆ ಬೇಕಾದ ನಾರುಗಳನ್ನು ಒಳಗೊಂಡಿರುತ್ತದೆ, ಮೂತ್ರಪಿಂಡದ ಕಾರ್ಯವನ್ನು ನಿಯಂತ್ರಿಸಲು ಮತ್ತು ಜೀರ್ಣಕ್ರಿಯೆ ಸರಾಗಗೊಳಿಸಲು ಸಹಾಯ ಮಾಡಿ ಮಲಬದ್ದತೆ ನಿವಾರಣೆ ಮಾಡುತ್ತದೆ. ಅಲ್ಲದೇ ಅಜೀರ್ಣವನ್ನು ಸಹ ಶಮನ ಮಾಡುತ್ತದೆ.

#ಆಲ್ಕೋಹಾಲ್(Alcohol) ಚಟವನ್ನು ತೊಡೆದುಹಾಕಬಹುದುಆಯುರ್ವೇದ ಪುಸ್ತಕ ‘ಚರಕಸಂಹಿತಾ’ದಲ್ಲಿ, ಚಕ್ಕೋತ ತುಂಬಾ ಪ್ರಯೋಜನಕಾರಿ ಎಂದು ವಿವರಿಸಲಾಗಿದೆ. ಒಬ್ಬ ವ್ಯಕ್ತಿಯು ಅತಿಯಾದ ಆಲ್ಕೋಹಾಲ್ ಕುಡಿದಿದ್ದರೆ, ಆಗ ಚಕ್ಕೋತ ತಿನ್ನುವ ಮೂಲಕ, ಅವನ ನಶೆಯನ್ನು ಇಳಿಸಬಹುದು ಎಂದು ಹೇಳಲಾಗುತ್ತೆ. ಇದನ್ನು ಪ್ರತಿದಿನ ಸರಿಯಾಗಿ ಸೇವಿಸಿದರೆ, ಅನೇಕ ಪ್ರಯೋಜನಗಳನ್ನು ಪಡೆಯಬಹುದು.

#ಮಧುಮೇಹಕ್ಕೆ ಒಳ್ಳೆಯದು:ಇದಲ್ಲದೆ, ಈ ಹಣ್ಣು ಸಾಕಷ್ಟು ಪ್ರಮಾಣದ ಆಹಾರದ ನಾರುಗಳು, ಖನಿಜಗಳಾದ ಸತು, ತಾಮ್ರ ಮತ್ತು ಆ್ಯಂಟಿಆಕ್ಸಿಡೆಂಟ್ಗಳು ತುಂಬಿದ್ದು, ಮಧುಮೇಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

#ಆಲ್ಕೋಹಾಲ್(Alcohol) ಚಟವನ್ನು ತೊಡೆದುಹಾಕಬಹುದುಆಯುರ್ವೇದ ಪುಸ್ತಕ ‘ಚರಕಸಂಹಿತಾ’ದಲ್ಲಿ, ಚಕ್ಕೋತ ತುಂಬಾ ಪ್ರಯೋಜನಕಾರಿ ಎಂದು ವಿವರಿಸಲಾಗಿದೆ. ಒಬ್ಬ ವ್ಯಕ್ತಿಯು ಅತಿಯಾದ ಆಲ್ಕೋಹಾಲ್ ಕುಡಿದಿದ್ದರೆ, ಆಗ ಚಕ್ಕೋತ ತಿನ್ನುವ ಮೂಲಕ, ಅವನ ನಶೆಯನ್ನು ಇಳಿಸಬಹುದು ಎಂದು ಹೇಳಲಾಗುತ್ತೆ. ಇದನ್ನು ಪ್ರತಿದಿನ ಸರಿಯಾಗಿ ಸೇವಿಸಿದರೆ, ಅನೇಕ ಪ್ರಯೋಜನಗಳನ್ನು ಪಡೆಯಬಹುದು.

#ದೇಹದ ತೂಕ ಇಳಿಸಿಕೊಳ್ಳಲು ನಾರಿನಂಶದ ಸೇವನೆ ಅಗತ್ಯ. ಚಕೋತ ತಿಂದ್ರೆ ಸಾಕಷ್ಟು ನಾರಿನಂಶ ದೇಹಕ್ಕೆ ಸಿಗುವುದರಿಂದ ನೈಸರ್ಗಿಕವಾಗಿ ಕೊಬ್ಬನ್ನು ಕರಗಿಸಬಹುದು.-ನಿಯಮಿತವಾಗಿ ಚಕೋತ ತಿನ್ನುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.

#ಹೃದಯದ ಆರೋಗ್ಯವನ್ನು ಕಾಪಾಡುತ್ತದೆ:ಪೊಟ್ಯಾಸಿಯಮ್ ಮಟ್ಟಗಳಲ್ಲಿ ಅಧಿಕವಾಗಿರುವ ಚಕ್ಕೋತ ಸಾಮಾನ್ಯ ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಹೃದಯದ ಸ್ನಾಯುವಿನ ಚಟುವಟಿಕೆಯನ್ನು ಉತ್ತೇಜಿಸುವಲ್ಲಿ ಸಹಾಯ ಮಾಡುತ್ತದೆ. ಕೆಟ್ಟ LDL ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ನೈಸರ್ಗಿಕವಾಗಿ ಉತ್ತಮ HDL ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚು ಮಾಡುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group