ಕ್ಯಾರೆಟ್ ಜ್ಯೂಸ್ ಸೇವನೆಯ ಆರೋಗ್ಯಕರ ಪ್ರಯೋಜನಗಳು!

#ಕ್ಯಾರೆಟ್ ಜ್ಯೂಸ್ ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆಯನ್ನು ಪೂರೈಸುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವ ಜನರಿಗೆ ಕ್ಯಾರೆಟ್ ಜ್ಯೂಸ್ ಪ್ರಯೋಜನಕಾರಿಯಾಗಿದೆ ಮತ್ತು ಅದರ ಸೇವನೆಯಿಂದ ದೇಹದಲ್ಲಿ ರಕ್ತವು ವೇಗವಾಗಿ ರೂಪುಗೊಳ್ಳುತ್ತದೆ. ಇದರಲ್ಲಿ ನಾರಿನಂಶ ಯಥೇಚ್ಛವಾಗಿ ದೊರೆಯುತ್ತದೆ, ಇದು ದೇಹದ ಜೀರ್ಣಶಕ್ತಿಯನ್ನು ಹೆಚ್ಚಿಸಿ, ಮಲಬದ್ಧತೆ ಸಮಸ್ಯೆಗೆ ಪರಿಹಾರ ನೀಡುತ್ತದೆ.
#ಕ್ಯಾರೆಟ್‌ಗಳಲ್ಲಿರುವ ವಿಟಮಿನ್ ಎ ಚರ್ಮಕ್ಕೆ ಆರೈಕೆ ನೀಡುವ ಜೊತೆಗೇ ಮೊಡವೆಗಳನ್ನು ಕೊನೆಗೊಳಿಸಲೂ ನೆರವಾಗುತ್ತದೆ. ಅಲ್ಲದೇ ಚರ್ಮದಡಿಯಿಂದ ಮೊಡವೆಗಳು ಮೂಡಲು ಕಾರಣವಾಗುವ ಕೊಳೆ ಮತ್ತು ಕಲ್ಮಶಗಳನ್ನು ಚರ್ಮದ ರಂಧ್ರಗಳ ಮೂಲಕ ಹೊರದೂಡಿ ಮೊಡವೆಗಳು ಮೂಡುವ ಸಂಭವವನ್ನೇ ಬುಡದಿಂದ ನಿವಾರಿಸುತ್ತದೆ.
#ಕೆಲವು ಅಧ್ಯಯನಗಳಿಂದ ಕ್ಯಾರೆಟ್ನಲ್ಲಿ ಕ್ಯಾನ್ಸರ್ ತಡೆಗಟ್ಟುವ ಕೆಲವು ಅಂಶಗಳಿವೆ ಎಂಬುದು ತಿಳಿದು ಬಂದಿದೆ. ಕ್ಯಾರೆಟ್ನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುತ್ತದೆ. ಇದು ಕ್ಯಾನ್ಸರ್ ಕೋಶಗಳನ್ನು ತಡೆಯುತ್ತದೆ.
#ಕ್ಯಾರೆಟ್ ಜ್ಯೂಸ್‌ಗೆ ಸಕ್ಕರೆ ಮತ್ತು ಕಾಳುಮೆಣಸು ಬೆರೆಸಿ ಕುಡಿಯುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ ಮತ್ತು ಕಫದಿಂದಲೂ ಪರಿಹಾರ ಸಿಗುತ್ತದೆ.
#ಕ್ಯಾರೆಟ್ ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಮತ್ತು ವಿಟಮಿನ್ ಸಿ ಚರ್ಮದ ಕಾಲಜನ್ ಉತ್ಪಾದನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಕ್ಯಾರೆಟ್ ನಲ್ಲಿರುವ ಫೈಬರ್ ಮತ್ತು ಪ್ರೋಟೀನ್ ಚರ್ಮದ ಸ್ಥಿತಿಸ್ಥಾಪಕತ್ವ ಕಾಪಾಡುತ್ತದೆ. ವಿಟಮಿನ್ ಸಿ ಉತ್ಕರ್ಷಣ ನಿರೋಧಕವಾಗಿ ಕೆಲಸ ಮಾಡುತ್ತದೆ. ಕಂಪ್ಯೂಟರ್ ಪರದೆಯ ಹಾನಿ ತಡೆಯುತ್ತದೆ.
#ಕ್ಯಾರೆಟ್ ನಲ್ಲಿ ಸಾಕಷ್ಟು ಪೊಟ್ಯಾಸಿಯಮ್ ಇದೆ. ಅಧಿಕ ರಕ್ತದೊತ್ತಡ ಹೊಂದಿದ್ದರೆ, ನಿಮ್ಮ ಹೃದಯ ಸಮಸ್ಯೆ ಹೆಚ್ಚುತ್ತವೆ. ಆಹಾರದಲ್ಲಿ ಪೊಟ್ಯಾಸಿಯಮ್ ಭರಿತ ಆಹಾರ ಸೇರಿಸಿ. ಇದು ಕ್ಯಾರೆಟ್ ನಲ್ಲಿರುವ ಆಂಟಿ ಆಕ್ಸಿಡೆಂಟ್ ಸಂಯುಕ್ತ ಹೃದಯದ ಆರೋಗ್ಯಕ್ಕೂ ಪ್ರಯೋಜನಕಾರಿ.
#ಕ್ಯಾರೆಟ್ ನಲ್ಲಿ ವಿಟಮಿನ್ ಎ ಹೊರತಾಗಿ ಇತರ ಪೋಷಕಾಂಶಗಳೂ ಉತ್ತಮ ಪ್ರಮಾಣದಲ್ಲಿವೆ. ಕ್ಯಾಲ್ಸಿಯಂ, ಮೆಗ್ನೀಶಿಯಂ, ಪೊಟ್ಯಾಶಿಯಂ, ಫೋಲೇಟ್ ಗಳು ಪ್ರಮುಖವಾಗಿದ್ದು ಇವೆಲ್ಲವೂ ಗರ್ಭಿಣಿಯರ ಆರೋಗ್ಯಕ್ಕೆ ಪೂರಕವಾಗಿವೆ. ಅದರಲ್ಲೂ ವಿಟಮಿನ್ ಎ ಮತ್ತು ವಿಟಮಿನ್ ಸಿ ಗರ್ಭಿಣಿ ಮತ್ತು ಗರ್ಭದಲ್ಲಿರುವ ಮಗುವಿಗೆ ಫ್ರೀ ರ್‍ಯಾಡಿಕಲ್ ಎಂಬ ಹಾನಿಕಾರಕ ಕಣಗಳು ಎದುರಾಗದಂತೆ ತಡೆಯುತ್ತವೆ. ಅಷ್ಟೇ ಅಲ್ಲ, ನಿಯಮಿತ ಕ್ಯಾರೆಟ್ ಸೇವನೆಯಿಂದ ಮಗುವಿನ ಆರೋಗ್ಯವೂ ಚೆನ್ನಾಗಿ ಇರುವ ಜೊತೆಗೇ ಬೆಳವಣಿಗೆಯೂ ಉತ್ತಮವಾಗಿದ್ದು ಜನ್ಮತಃ ಬರುವ ವಿಕಲತೆಗಳಿಂದ ರಕ್ಷಿಸುತ್ತದೆ.