ಪನೀರ್ ಸೇವನೆ ಮಾಡೋದ್ರಿಂದ ಸಿಗುವ ಲಾಭ!

ಪನೀರ್ (paneer) ಸಾಮಾನ್ಯವಾಗಿ ಎಲ್ಲರೂ ಇಷ್ಟಪಟ್ಟು ತಿನ್ನೋ ಆಹಾರವಾಗಿದೆ. ಈಗ ಪನೀರ್ ನ ಪ್ರಯೋಜನಗಳನ್ನು ನೋಡೋಣ. ಪನೀರ್ ಆರೋಗ್ಯಕ್ಕೆ ಅತ್ಯುತ್ತಮ ಆಹಾರವಾಗಿದೆ. ಇದರಲ್ಲಿ ಒಮೆಗಾ 3 ಕೂಡ ಇರುವ ಕಾರಣ ಮಾನಸಿಕ ಬೆಳವಣಿಗೆಗೆ ಇದು ನೆರವಾಗುತ್ತದೆ. ಬೆಳಗಿನ ಉಪಾಹಾರಕ್ಕೆ ಹುರಿದ ರೋಸ್ಟ್ ತಿನ್ನುವುದನ್ನು ತಪ್ಪಿಸಲು ನೀವು ಬಯಸಿದರೆ ಪನೀರ್ ನಿಮಗೆ ಉತ್ತಮ ಆಯ್ಕೆಯಾಗಿದೆ.

#ಪನೀರ್ ಕೊಲೆಸ್ಟ್ರಾಲ್ ಅನ್ನು ಹೊಂದಿರದ ಕಾರಣ, ಇದು ತೂಕ ಇಳಿಸುವವರಿಗೆ ಮತ್ತು ಫಿಟ್ನೆಸ್ ಉತ್ಸಾಹಿಗಳಿಗೆ ಉತ್ತಮ ಆಹಾರವಾಗಿದೆ. ಅಲ್ಲದೆ, ಪನೀರ್ ನಲ್ಲಿ ಹೆಚ್ಚಿನ ಪ್ರೋಟೀನ್​ ಇದೆ. ಕಾರ್ಬೋಹೈಡ್ರೇಟ್ಗಳು ಕಡಿಮೆ. ಕಡಿಮೆ ಕೊಬ್ಬನ್ನು ಹೊಂದಿರುತ್ತದೆ.

#ಪನೀರ್ (Paneer)ಅನ್ನು ಪ್ರೋಟೀನ್‌ನ ಉತ್ತಮ ಮೂಲವೆಂದು ಪರಿಗಣಿಸಬಹುದು. ಆದರೆ ದೇಹದಲ್ಲಿ ಅಧಿಕ ಪ್ರಮಾಣದ ಪ್ರೋಟೀನ್ ಇದ್ದರೆ, ಅತಿಸಾರದ ಸಮಸ್ಯೆ ಉಂಟಾಗಬಹುದು.

#ಬೆಳಗಿನ ಸಮಯದಲ್ಲಿ ಪನೀರ್ ಸೇವಿಸುವುದರಿಂದ ಇಡೀ ದಿನ ಹೊಟ್ಟೆ ಹಸಿವೆಯಾಗದಂತೆ ದೇಹಕ್ಕೆ ಪುಷ್ಟಿ ದೊರಕುತ್ತದೆ. ಹಾಗಾಗಿ ಪನೀರ್ ಒಂದು ಅತ್ಯುತ್ತಮ ಉಪಾಹಾರ ಎಂದು ಹೇಳಬಹುದು.

#ಪನೀರ್ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿಂದ ಮೂಳೆಗಳು ದುರ್ಬಲಗೊಳ್ಳುವ ಸಮಸ್ಯೆಯನ್ನು ಸರಿಪಡಿಸಲು ಪನೀರ್ ನ್ನು ಆಹಾರದೊಂದಿಗೆ ಪ್ರತಿದಿನ ಸೇವಿಸುವುದು ತುಂಬಾ ಒಳ್ಳೆಯದು.

#ಕ್ಯಾಲ್ಸಿಯಂ ಅಂಶ ನಮ್ಮ ದೇಹಕ್ಕೆ ನಮ್ಮ ಮೂಳೆಗಳ ಬಲವರ್ಧನೆಗೆ ಅತ್ಯಂತ ಅಗತ್ಯವಾಗಿ ಬೇಕಾದ ಒಂದು ಪ್ರಮಾಣವಾಗಿದೆ. ನಮ್ಮ ಹಲ್ಲುಗಳ ಆರೋಗ್ಯವನ್ನು ನಮ್ಮ ದೇಹದಲ್ಲಿರುವ ಕ್ಯಾಲ್ಶಿಯಂ ಅಂಶ ಕಾಪಾಡುತ್ತದೆ. ಪನೀರ್ ನಲ್ಲಿ ಅತ್ಯುತ್ತಮವಾದ ಕ್ಯಾಲ್ಸಿಯಂ ಅಂಶ ದ ಪ್ರಮಾಣ ಇರುವ ಕಾರಣ ಎಲ್ಲಾ ವಯಸ್ಸಿನವರಿಗೂ ಅವರ ದೇಹಕ್ಕೆ ಅನುಗುಣವಾದ ಪೌಷ್ಟಿಕ ಸತ್ವಗಳು ಪನೀರ್ ನಿಂದ ಸಿಗುತ್ತವೆ.

ಗಮನಿಸಿ: ಹೆಚ್ಚಿನ ಪ್ರಯೋಜನಗಳನ್ನು ಪಡೆಯಲು ನಮ್ಮಲ್ಲಿ ಹೆಚ್ಚಿನವರು ಪನೀರ್ ಕಚ್ಚಾ (Raw paneer) ತಿನ್ನಲು ಬಯಸುತ್ತಾರೆ. ಆದರೆ ಹಸಿ ಪನೀರ್ ನ ನ ಅತಿಯಾದ ಸೇವನೆಯು ಸೋಂಕನ್ನು (Infection) ಉಂಟುಮಾಡಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group