ಪೇರಳೆ ಹಣ್ಣಿನ ಎಲೆಗಳಲ್ಲಿ ಅಡಗಿರುವ ಔಷಧೀಯ ಗುಣಗಳು!

ಕೆಲವೊಬ್ಬರು ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಸೀಬೆ ಮರದ ಎಲೆಗಳನ್ನು ಜಗಿಯುತ್ತಾರೆ. ಇದರಿಂದ ಆರೋಗ್ಯಕ್ಕೆ ಯಾವುದೇ ರೀತಿಯ ಸಮಸ್ಯೆಗಳಾಗುವುದಿಲ್ಲ. ಬದಲಾಗಿ, ಬಾಯಿಯ ದುರ್ಗಂಧ ದೂರವಾಗುತ್ತದೆ. ಉಸಿರು ಸ್ವಚ್ಛವಾಗುತ್ತದೆ. ಇದನ್ನು ಯಾವಾಗ ಬೇಕಾದರೂ ಜಗಿದು ತಿನ್ನಬಹುದು. ಏಕೆಂದರೆ, ಇದರಲ್ಲಿ ಹಲವು ಆರೋಗ್ಯಕರ ಲಾಭಗಳಿವೆ. ಅವೇನೆಂದು ಇಲ್ಲಿ ತಿಳಿಯಿರಿ.
#ಬ್ಲಾಕ್ ಹೆಡ್ಸ್ ಮುಖದಲ್ಲಿ ಸಣ್ಣಪುಟ್ಟ ರಂದ್ರಗಳ ಸಮಸ್ಯೆ ಹೊಂದಿದವರು ಸಮಸ್ಯೆಗೆ ಎಲೆಗಳನ್ನು ತರಿ ತರಿಯಾಗಿ ರುಬಿ ಮುಖಕ್ಕೆ ಸ್ಕ್ರಬ್ ತರಹ ಮಸಾಜ್ ಮಾಡುತ್ತಾ ಬಂದರೆ ಜೊತೆಗೆ ಇದರ ಪೇಸ್ಟನ್ನು ಮುಖಕ್ಕೆ ಪ್ಯಾಕ್ ತರಹ ಬಂದಲ್ಲಿ ಮುಖದ ಸುಕ್ಕು ಕಡಿಮೆಯಾಗಿ ಕಪ್ಪಾಗಿರುವ ಜಾಗ ಕಾಲಕ್ರಮೇಣ ಬಿಳಿಯಾಗುತ್ತದೆ.
#ಇದು ನಿಮ್ಮ ಕೂದಲಿನ ಆರೋಗ್ಯವನ್ನು ಉತ್ತಮಗೊಳ್ಳುವಂತೆ ಮಾಡುವುದರಲ್ಲಿ ಎರಡು ಮಾತಿಲ್ಲ.*ಕೂದಲಿನ ಬುಡದಲ್ಲಿ ಸೇರಿಕೊಂಡಿರುವ ಕೊಳೆಯನ್ನು ತೆಗೆಯುವುದರಿಂದ ಒಂದೊಂದು ಕೂದಲು ಸಹ ನಯವಾಗಿ ಮತ್ತು ಹೊಳಪಿನಿಂದ ತುಂಬಿ ಮೂಡಿಬರುತ್ತದೆ. ಸೀಬೆ ಮರದ ಎಲೆಗಳು ಮನುಷ್ಯನ ಕೂದಲಿಗೆ ಅಷ್ಟೇ ಅಲ್ಲದೆ ಇನ್ನಿತರ ಕಾಯಿಲೆಗಳಿಗೂ ರಾಮಬಾಣವಾಗಿ ಪರಿಣಮಿಸು ವಂತೆ ಅನೇಕ ಔಷಧೀಯ ಗುಣಲಕ್ಷಣಗಳನ್ನು ಹೊಂದಿದೆ.
#ಅತಿಸಾರಕ್ಕೆ ಚಿಕಿತ್ಸೆ: ಅತಿಸಾರವು ಸಾಮಾನ್ಯವಾಗಿ ಸ್ಟ್ಯಾಫಿಲೋಕೊಕಸ್ ಎಂಬ ಬ್ಯಾಕ್ಟೀರಿಯಾದ ಬೆಳವಣಿಗೆಯಿಂದ ಉಂಟಾಗುತ್ತದೆ. ಅಧ್ಯಯನದ ಪ್ರಕಾರ ಪೇರಲೆ ಎಲೆ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ. ಸೀಬೆ ಎಲೆ ಚಹಾವನ್ನು ಸೇವಿಸುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ. ನೋವಿನಿಂದ ತ್ವರಿತ ಪರಿಹಾರಕ್ಕಾಗಿ, ಒಂದು ಕಪ್ ಕುದಿಯುವ ನೀರಿನಲ್ಲಿ ಪೇರಲೆ ಎಲೆಗಳನ್ನು ಬೆರೆಸಿ, ನಂತರ ನೀರನ್ನು ಫಿಲ್ಟರ್ ಮಾಡಿ ಮತ್ತು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
#ಯಾರಿಗೆ ಶುಗರ್ ತುಂಬಾನೇ ರೈಜ್ ಆಗಿರುತ್ತದೆ ಅಂಥವರು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಎರಡು ಎಲೆಗಳನ್ನು ನೀವು ಅಗಿದು ತಿನ್ನುವುದರಿಂದ ಶುಗರ್ ಲೆವೆಲ್ ಮೆಂಟೇನ್ ಆಗುತ್ತದೆ ಡಯಾಬಿಟಿಸ್ ಕಂಟ್ರೋಲ್ ಗೆ ಬರುತ್ತದೆ ಈ ಪೇರಳೆ ಎಲೆಗಳ ಎರಡು ಎಲೆಗಳನ್ನು ಡೈಲಿ ನೀವು ಬೆಳಗ್ಗೆ ಎದ್ದ ತಕ್ಷಣ ತಿನ್ನುವುದರಿಂದ ಹೃದಯ ಸಂಬಂಧಿ.ಕಾಯಿಲೆಗಳು ಬರುವುದಿಲ್ಲ
#ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಕಾಪಾಡುವ ಜತೆಗೆ ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸುವುದು. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ತುಂಬಾ ಸಹಕಾರಿ.