ಬೇವು ಕಹಿ ಆದರೂ ಆರೋಗ್ಯಕ್ಕೆ ಸಿಹಿ!

ಬೇವು ಶರೀರದಲ್ಲಿ ಶಾಖವನ್ನುಂಟು ಮಾಡುತ್ತದೆ. ಅಂಗ ವ್ಯವಸ್ಥೆಯೊಳಗೆ ತೀವ್ರತರವಾದ ವಿವಿಧ ಶಕ್ತಿಗಳನ್ನು ಉತ್ಪಾದಿಸಲು, ಬೇವಿನಿಂದ ಉಂಟಾದ ಶಾಖವು ನೆರವಾಗುತ್ತದೆ. ವಿವಿಧ ಗುಣಗಳು ಶರೀರದಲ್ಲಿ ಪ್ರಧಾನವಾಗಿರಬಹುದು. ಹೀಗೆ ಇದರ ಇನ್ನಷ್ಟು ಪ್ರಯೋಜನಗಳನ್ನು ತಿಳಿಯೋಣ
#ಜೀರ್ಣಕಾರಿ ವ್ಯವಸ್ಥೆಯನ್ನು ಸರಿಪಡಿಸಲು ಬೇವಿನ ಎಲೆಗಳು ಸಹಾಯ ಮಾಡುತ್ತವೆ, ಇದರಿಂದ ಹೊಟ್ಟೆಯ ಹುಣ್ಣು, ಸುಡುವ ಸಂವೇದನೆ, ಅನಿಲ ಮುಂತಾದ ಸಮಸ್ಯೆಗಳನ್ನು ನಿವಾರಿಸಬಹುದು. ಬೇವಿನ ಎಲೆ ಸೇವನೆಯಿಂದ ಮಲಬದ್ಧತೆಯ ಸಮಸ್ಯೆಯಿಂದಲೂ ಮುಕ್ತಿ ಸಿಗಲಿದೆ.
#ಇದು ನಮ್ಮ ರಕ್ತದಿಂದ ವಿಷವನ್ನು ಮತ್ತಷ್ಟು ತೆಗೆದುಹಾಕುತ್ತದೆ ಮತ್ತು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಚಟುವಟಿಕೆಯನ್ನು ನಿಗ್ರಹಿಸುತ್ತದೆ. ಬೇವಿನ ಎಲೆಗಳನ್ನು ಅಗಿಯುವುದರಿಂದ ನಮ್ಮ ಕೂದಲನ್ನು ಪೋಷಿಸಬಹುದು ಮತ್ತು ತಲೆನೋವುಗಳಿಗೂ ಚಿಕಿತ್ಸೆ ನೀಡಬಹುದು.
#ಬೇವಿನ ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದಲ್ಲದೆ ಕಹಿ ಬೇವು ರಕ್ತವನ್ನು ಸಹ ಶುದ್ಧೀಕರಿಸುತ್ತದೆ. ಇದು ಅನೇಕ ರೀತಿಯ ದೈಹಿಕ ಕಾಯಿಲೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
#ಬೇವಿನ ಎಲೆಗಳಲ್ಲಿ ಪ್ರಬಲ ಬ್ಯಾಕ್ಟೀರಿಯಾ ನಿರೋಧಕ ಗುಣಗಳಿವೆ. ಇದು ಸೋಂಕುಗಳು, ಉರಿಯೂತ ಮತ್ತು ಯಾವುದೇ ರೀತಿಯ ಚರ್ಮದ ಸಮಸ್ಯೆಗಳಿಗೆ ಅದ್ಭುತವಾದ ಶಮನ ನೀಡುತ್ತದೆ. ಕೀಟಗಳ ಕಡಿತ, ತುರಿಕೆ, ಎಕ್ಸಿಮಾ, ಹುಳಕಡ್ಡಿ ಮತ್ತು ಕೆಲವು ಸೌಮ್ಯ ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬೇವಿನ ಎಲೆಗಳು ಮತ್ತು ಅರಿಶಿನ ಅರೆದ ಲೇಪವನ್ನು ಬಳಸಬಹುದಾದರೂ, ಎಲೆಗಳನ್ನು ಅಗಿಯುವುದರಿಂದ ನಿಮಗೆ ಹೆಚ್ಚಿನ ಪೋಷಣೆ, ಶುದ್ಧೀಕರಿಸಿದ ಮತ್ತು ಕಾಂತಿಯುಕ್ತ ತ್ವಚೆಯನ್ನು ಪಡೆಯಬಹುದು ನೀಡುತ್ತದೆ.
#ಪ್ರತಿದಿನ ನೀವು ಸ್ನಾನ ಮಾಡುವಾಗ ನೀರಿನೊಂದಿಗೆ ಒಂದು ಎಸಳು ಬೇವಿನ ಸೊಪ್ಪನ್ನು ಬೆರೆಸಿ, ಸ್ವಲ್ಪ ಸಮಯ ಬಿಟ್ಟು ಸ್ನಾನ ಮಾಡುವುದರಿಂದ ದೇಹದ ದುರ್ಗಂಧ ನಿವಾರಣೆಯಾಗುತ್ತದೆ.