ಆರೋಗ್ಯದ ಮೇಲೆ ಕರ್ಪೂರದ ಪ್ರಭಾವ ಏನು ಗೊತ್ತ?

ಪೂಜೆಯ ಹೊರತಾಗಿ, ಜ್ಯೋತಿಷ್ಯದಲ್ಲಿ ಕರ್ಪೂರದ ಬಳಕೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ನಿವಾರಿಸಲು ಕರ್ಪೂರದ ಬಳಕೆಯು ಮಂಗಳಕರವಾಗಿದೆ ಎಂದು ನಂಬಲಾಗಿದೆ ಅದೆ ರೀತಿ ಇವುಗಳ ಬಳಕೆಯು ದೇಹಕೆ ಯಾವೆಲ್ಲ ಪ್ರಯೋಜನಗಳಿವೆ ಈಗ ತಿಳಿಯೋಣ!
#ಉಗುರಿನ ಸಮಸ್ಯೆಗಳಿಗೆ ಪರಿಹಾರ:ಉಗುರಿನಲ್ಲಿ ಫಂಗಸ್ ಸಮಸ್ಯೆಯಿದ್ದರೆ ಕರ್ಪೂರದಿಂದ ಪರಿಹಾರ ಸಿಗುತ್ತದೆ. ಸಮಸ್ಯೆಯಿರುವ ಸ್ಥಳದಲ್ಲಿ ಕರ್ಪೂರವನ್ನು ಹಚ್ಚಿಕೊಂಡರೆ ಬಹು ಬೇಗನೆ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.ಇನ್ನು ವೆಪೊರಬ್ ನಲ್ಲಿ ಹೆಚ್ಚಾಗಿ ಕರ್ಪೂರದ ಎಣ್ಣೆಯನ್ನು ಬಳಕೆ ಮಾಡಲಾಗುತ್ತದೆ ಮತ್ತು ಇದು ಫಂಗಸ್ ವಿರೋಧಿಯಾಗಿ ಕೆಲಸ ಮಾಡುವುದು. ಕರ್ಪೂರವು ವಿವಿಧ ರೀತಿಯ ಫಂಗಸ್ ಸೋಂಕು ದೂರ ಮಾಡುವಲ್ಲಿ ಸಹಕಾರಿಯಾಗುತ್ತದೆ. ಕರ್ಪೂರವು ಹಲವು ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
#ಗ್ಯಾಸ್ ಸಮಸ್ಯೆಯಿರುವವರು ತಿನ್ನಲು ಯೋಗ್ಯವಾದ ಕರ್ಪೂರ ಅಂದ್ರೆ ಪಚ್ಚೆ ಕರ್ಪೂರ ಸೇವಿಸಿದರೆ ಒಳ್ಳೆಯದು. ಇದು ದೇಹದಲ್ಲಿ ಗ್ಯಾಸ್ ತುಂಬಿಕೊಳ್ಳದಂತೆ ಕಾಪಾಡುತ್ತದೆ. ಮಾತ್ರವಲ್ಲ ಆಹಾರ ಪಚನಕ್ರಿಯೆ ಚುರುಕುಗೊಳ್ಳುವಂತೆ ಮಾಡುತ್ತದೆ.
#ಯಾವುದೋ ಕಾರಣಕ್ಕೆ ದೇಹದ ಭಾಗದಲ್ಲಿ ಬಾವು ಮತ್ತು ಉರಿಯೂತ ಕಾಣಿಸಿಕೊಂಡಿದ್ದರೆ ಇದರ ಉರಿಯನ್ನು ಶಮನಗೊಳಿಸಲು ಕರ್ಪೂರವನ್ನು ಬಳಸಬಹುದು. ಇದು ಚರ್ಮದ ಸಂವೇದನಾ ನರ ತುದಿಗಳನ್ನು ಮರಗಟ್ಟುಸುವ ಮೂಲಕ ನೋವು ಮತ್ತು ಉರಿಯನ್ನು ಇಲ್ಲವಾಗಿಸುತ್ತದೆ. ತನ್ಮೂಲಕ ಮತ್ತು ಬಾವು ಶೀಘ್ರವಾಗಿ ಕಡಿಮೆಯಾಗುತ್ತವೆ ಮತ್ತು ಚರ್ಮದ ಮೇಲೆ ಕಾಣಿಸಿಕೊಂಡಿದ್ದ ಕೆಂಪಗಾಗಿರುವುದನ್ನೂ ಶೀಘ್ರ ಸರಿಪಡಿಸುತ್ತದೆ
#ಕರ್ಪೂರವು ಶೀತ ಮತ್ತು ಕೆಮ್ಮು ನಿವಾರಣೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಮಳೆಗಾಲದಲ್ಲಿ ಶೀತ, ಗಂಟಲು ಕಟ್ಟುವುದು ಸಾಮಾನ್ಯ ಸಮಸ್ಯೆ. ಹಾಗಾಗಿ ಕರ್ಪೂರದ ಎಣ್ಣೆಯನ್ನು ಬಳಸುವ ವೆಪೊರಬ್ ಅನ್ನು ಎದೆ ಮತ್ತು ಬೆನ್ನಿಗೆ ಹೆಚ್ಚುವುದರಿಂದ ಆರಾಮದಾಯಕವೆನಿಸುತ್ತದೆ.