ಸೋರೆಕಾಯಿ ಜ್ಯೂಸ್ ಸೇವನೆಯ ಆರೋಗ್ಯಕರ ಪ್ರಯೋಜನಗಳು!

ಸೋರೆಕಾಯಿ ಜ್ಯೂಸ್ (Bottle Gourd Juice) ಕುಡಿಯುವುದರಿಂದ ದೇಹವನ್ನು ತಂಪಾಗಿಸುವುದು, ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡುವುದು ಮತ್ತು ಹೆಚ್ಚಿನವು ಸೇರಿದಂತೆ ಅನೇಕ ಆರೋಗ್ಯ (Health) ಪ್ರಯೋಜನಗಳಿವೆ! ಅವು ಯಾವುವೂ ಈಗ ತಿಳಿಯೋಣ

#ಕೂದಲು ಮತ್ತು ಚರ್ಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ:ಇದು ಆರೋಗ್ಯ ಸಮಸ್ಯೆಗಳಿಗೆ ಮಾತ್ರವಲ್ಲ, ಸೌಂದರ್ಯವರ್ಧಕ ಸಮಸ್ಯೆಗಳಿಗೂ ಸಹಾಯ ಮಾಡುತ್ತದೆ. ಸೋರೆಕಾಯಿ ಜ್ಯೂಸ್ ನೈಸರ್ಗಿಕ ಕ್ಲೆನ್ಸರ್ ಆಗಿದ್ದು ಅದು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಸೋರೆಕಾಯಿ ರಸವನ್ನು ನೆತ್ತಿಗೆ ಹಚ್ಚುವುದರಿಂದ ಬೋಳು ಮತ್ತು ಅಕಾಲಿಕ ಕೂದಲು ಬಿಳಿಯಾಗುವುದನ್ನು ತಡೆಯಬಹುದು.

#ಸೋರೆಕಾಯಿ ಕಾರ್ಡಿಯೋ-ಟಾನಿಕ್ ಮತ್ತು ಮೂತ್ರವರ್ಧಕವಾಗಿದೆ. ಇದು ಶೀತ ಪ್ರಕೃತಿಯ ಪದಾರ್ಥವಾಗಿದೆ. ವಾತ ಮತ್ತು ಪಿತ್ತವನ್ನು ಸಮತೋಲನಗೊಳಿಸುವುದರಿಂದ ನೋವು, ಹುಣ್ಣು, ಜ್ವರ ಮತ್ತು ಉಸಿರಾಟದ ಸಮಸ್ಯೆಗಳಿಗೆ ಸಹ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ.

#ಒಂದು ವೇಳೆ ಕಿಡ್ನಿಯಲ್ಲಿ ಮತ್ತು ಮೂತ್ರವ್ಯವಸ್ಥೆಯಲ್ಲಿ ಏನಾದರೂ ಸಮಸ್ಯೆಗಳಿಲ್ಲಿದ್ದರೆ, ನಿತ್ಯದ ಅಡುಗೆಯಲ್ಲಿ ಸೋರೆಕಾಯಿಯನ್ನು ಹೆಚ್ಚಾಗಿ ಬಳಸಿಕೊಳ್ಳಿ. ಏಕೆಂದರೆ ಈ ತರಕಾರಿಯಲ್ಲಿ ಹೆಚ್ಚಿನ ಪ್ರಮಾಣದ ಕ್ಷಾರೀಯ ಗುಣ ಇರುವುದರಿಂದ, ದೇಹದಲ್ಲಿರುವ ಆಮ್ಲೀಯತೆಯನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಅಷ್ಟೇ ಅಲ್ಲದೆ ಇದೊಂದು, ಉತ್ತಮ ಮೂತ್ರವರ್ಧಕವೂ ಆಗಿರುವುದರಿಂದ, ಮೂತ್ರದ ಸೋಂಕಿನ ಸಮಸ್ಯೆಯಿಂದಲೂ ಕಾಪಾಡುತ್ತದೆ. ಇನ್ನೂ ಒಂದು ಈ ತರಕಾರಿಯ ವೈಶಿಷ್ಟ್ಯದ ಬಗ್ಗೆ ಹೇಳಲೇಬೇಕು, ಮಹಿಳೆಯರಲ್ಲಿ ಸಂತಾನಫಲವನ್ನು ಹೆಚ್ಚಿಸುವ ಮೂಲಕ ಶುಭಸುದ್ದಿ ಪಡೆಯಲು ನೆರವಾಗುತ್ತದೆಯಂತೆ!

#ಕಾಲಲ್ಲಿ, ಪಾದದಲ್ಲಿ ಉರಿ ಅಥವಾ ತುರಿಕೆಯಾಗುತ್ತಿದ್ದಲ್ಲಿ, ಸೊರೇಕಾಯಿ ಸಿಪ್ಪೆ ಬಳಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಸೊರೇಕಾಯಿ ಸಿಪ್ಪೆಯನ್ನ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ, ಅದನ್ನ ಪಾದಕ್ಕೆ ಹಚ್ಚಿದ್ದಲ್ಲಿ, ತುರಿಕೆ ಅಥವಾ ಉರಿ ಇದ್ದಲ್ಲಿ ಕಡಿಮೆಯಾಗುತ್ತದೆ.

#ಬೇಸಿಗೆಯಲ್ಲಿ ಈ ಜ್ಯೂಸ್ ದೇಹವನ್ನು ತಂಪಾಗಿಡುವ ಮೂಲಕ ಬಿಸಿಲ ಬೇಗೆಯಿಂದ ರಕ್ಷಿಸಲು ನೆರವಾಗುತ್ತದೆ. ಇದರಲ್ಲಿರುವ ಅಪಾರ ಪ್ರಮಾಣದ ನೀರು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಬಿಸಿಲನ್ನು ಎದುರಿಸಲು ಸಾಧ್ಯವಾಗುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group