ಬೆವರಿನಿಂದಾಗಿ ದೇಹದ ದುರ್ವಾಸನೆ ಹೋಗಡಿಸಲು ಹೀಗೇ ಮಾಡಿ!

ಬೇಸಿಗೆಯಲ್ಲಿ ಬೆವರಿನಿಂದಾಗಿ ದೇಹದ ದುರ್ವಾಸನೆ ಸಹಜ. ಆದರೆ ಇದು ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ಸೂರ್ಯನಿಂದ ಉಂಟಾಗುವ ಬೆವರು ನಿಮ್ಮ ದೇಹದಲ್ಲಿ ಬ್ಯಾಕ್ಟೀರಿಯಾದ ಜೊತೆಗೆ ದೇಹದ ವಾಸನೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ದೇಹದ ದುರ್ವಾಸನೆ ಹೋಗಲಾಡಿಸಲು ಸ್ವಚ್ಛತೆಯನ್ನು ಪಾಲಿಸುವುದೊಂದೇ ದಾರಿ. ಹೊರಗೆ ಹೋಗುವಾಗ ದೇಹವನ್ನು ಫ್ರೆಶ್ ಆಗಿ ಇಟ್ಟುಕೊಳ್ಳುವುದು ಹೇಗೆ ಎಂದು ಈಗ ತಿಳಿಯೋಣ ಬನ್ನಿ.

#ನಿಂಬೆಹಣ್ಣು(Lemon) – ಬೆವರಿನ ವಾಸನೆಯನ್ನು ತೊಡೆದುಹಾಕಲು ನಿಂಬೆಹಣ್ಣನ್ನು ಸಹ ಬಳಸಬಹುದು. ಇದನ್ನು ಬಳಸಲು, ನಿಂಬೆಹಣ್ಣನ್ನು ಅರ್ಧಕ್ಕೆ ಕತ್ತರಿಸಿ, ಅದನ್ನು ಅಂಡರ್ ಆರ್ಮ್ ಗಳ ಮೇಲೆ 10 ನಿಮಿಷಗಳ ಕಾಲ ಉಜ್ಜಿ ಮತ್ತು ತೊಳೆಯಿರಿ. ಇದು ವಾಸನೆಯನ್ನು ನಿವಾರಿಸಲು ಸಹಕಾರಿ.

#ಕಹಿ ಬೇವಿನ ಎಲೆ ಪೇಸ್ಟ್ ಮಾಡಿ ಕಂಕುಳಿಗೆ ಹಚ್ಚಿ ಸ್ನಾನ ಮಾಡಿದರೂ ಕೂಡ ಬೆವರಿನ ವಾಸನೆ ಹೋಗುತ್ತದೆ. 2 ಚಮಚ ಬೇಕಿಂಗ್ ಸೋಡಕ್ಕೆ 2 ಚಮಚ ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ ಕಂಕುಳಿಗೆ ಹಚ್ಚಿ 5 ನಿಮಿಷ ಬಿಟ್ಟು ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಬೆವರಿನ ವಾಸನೆಯಿಂದ ಮುಕ್ತಿ ಸಿಗುತ್ತದೆ.

#ಎಣ್ಣೆಯಿಂದ ಕೂಡಿರುವ ಚರ್ಮ ಹೆಚ್ಚು ಬೆವರನ್ನು ಉಂಟು ಮಾಡುತ್ತದೆ. ತೆಂಗಿನೆಣ್ಣೆಯನ್ನು ಕೈಗೆ ಹಾಕಿಕೊಂಡು ಕಂಕುಳನ್ನು ಮಸಾಜ್ ಮಾಡಿ. ಸುಮಾರು 5 ನಿಮಿಷಗಳ ಕಾಲ ಮಸಾಜ್ ಮಾಡಿದ ನಂತರ, 15 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಸ್ನಾನ ಮಾಡಿ. ಇದರಿಂದ ಬೆವರು ವಾಸನೆ ಕಡಿಮೆಯಾಗುತ್ತದೆ.

#ಟೊಮೆಟೊ(Tomato)- ಅಂಡರ್ ಆರ್ಮ್ ಗಳ ವಾಸನೆಯನ್ನು ತೊಡೆದುಹಾಕಲು ಟೊಮೆಟೊಗಳನ್ನು ಬಳಸಬಹುದು. ಟೊಮೆಟೊ ತಿರುಳು ಮತ್ತು ರಸವನ್ನು ತೆಗೆದು 15 ನಿಮಿಷಗಳ ಕಾಲ ತೋಳಿನ ಕೆಳಗಿನ ಭಾಗಕ್ಕೆ ಹಚ್ಚಿ ಮತ್ತು ನಂತರ ಅದನ್ನು ಚೆನ್ನಾಗಿ ತೊಳೆಯಬಹುದು. ವಾರಕ್ಕೆ ಎರಡು ಬಾರಿ ಇದನ್ನು ಮಾಡಿದರೆ, ವಾಸನೆ ನಿವಾರಣೆಯಾಗುತ್ತದೆ.

#ದೇಹದ ದುರ್ವಾಸನೆಗೆ ಮುಖ್ಯ ಕಾರಣವೆಂದರೆ ದೇಹದಲ್ಲಿ ಸ್ವಚ್ಛತೆಯ ಕೊರತೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಕೆಲವೊಮ್ಮೆ ಆಹಾರ, ಪರಿಸರ, ಹಾರ್ಮೋನುಗಳು ಮತ್ತು ಔಷಧಿಗಳ ಕಾರಣದಿಂದಾಗಿ ದೇಹದಲ್ಲಿ ಪ್ರತಿಕ್ರಿಯೆ ಉಂಟಾಗುತ್ತದೆ. ಇದರಿಂದಾಗಿ ಅತಿಯಾದ ವಾಸನೆಯ ಬೆವರು (ದೇಹದ ವಾಸನೆ) ಹೊರಬರಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆಹಾರಕ್ರಮವನ್ನು ಆರೋಗ್ಯಕ್ಕೆ ಅನುಗುಣವಾಗಿ ಬದಲಾಯಿಸಲು ಪ್ರಯತ್ನಿಸಿ ಮತ್ತು ಅನಗತ್ಯ ಔಷಧಿಗಳ ಬಳಕೆಯನ್ನು ತಪ್ಪಿಸಿ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group