ಸೋರೆಕಾಯಿ ಹೊಂದಿರುವ ಔಷಧೀಯ ಗುಣಗಳು!

ಸೋರೆಕಾಯಿ ಅಧಿಕ ನೀರಿನಂಶ ಹೊಂದಿರುವ ತರಕಾರಿ ಮಾತ್ರವಲ್ಲ, ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿರುವ ತರಕಾರಿಯಾಗಿದೆ. ಕೆಲವು ನಿರ್ಧಿಷ್ಟ ಕಾಯಿಲೆಗಳನ್ನು ಹೋಗಲಾಡಿಸಲು ಸೋರೆಕಾಯಿಯಯನ್ನು ಮದ್ದಾಗಿ ಉಪಯೋಗಿಸುತ್ತಾರೆ.
#ಮೂತ್ರ ಉರಿಗೆ ಹಸಿ ತಿರುಳನ್ನು ಮಿಕ್ಸಿಯಲ್ಲಿ ಅರೆದು ಹುರಿದ ಜೀರಿಗೆ ಸೇರಿಸಿ ಕುಡಿದರೆ ಶಮನವಾಗುವುದಲ್ಲದೆ ಮೂತ್ರಬಂಧವೂ ಪರಿಹಾರವಾಗುತ್ತದೆ. ತಿರುಳಿನ ಹೊರತು ಹೊರಗಿನ ಸಿಪ್ಪೆಯನ್ನಷ್ಟೇ ಬೇಯಿಸಿ ರಸ ಮಾಡಿ ಕುಡಿಯುವುದು ಮೂತ್ರವರ್ಧನೆಗೆ ಸಹಕಾರಿ.
#ತೂಕವನ್ನು ಕಡಿಮೆ ಮಾಡುವಲ್ಲಿ ಪ್ರಯೋಜನಕಾರಿ:ಸೋರೆಕಾಯಿ ತೂಕವನ್ನು ಕಡಿಮೆ ಮಾಡಲು ಸಹ ತುಂಬಾ ಪ್ರಯೋಜನಕಾರಿಯಾಗಿದೆ. ಬಾಟಲ್ ಸೋರೆಕಾಯಿಯಲ್ಲಿ ವಿಟಮಿನ್-ಸಿ, ಸೋಡಿಯಂ, ಫೈಬರ್ ಮತ್ತು ಕಬ್ಬಿಣದ ಸಮೃದ್ಧವಾಗಿದೆ. ಇದರ ಸೇವನೆಯಿಂದ ನಿಮ್ಮ ತೂಕವನ್ನು ಆರೋಗ್ಯಕವಾಗಿ ಕಡಿಮೆ ಮಾಡಬಹುದು.
#ಪಿತ್ಥಬಾಧೆ ತೀವ್ರವಿದ್ದವರು ಬೇಯಿಸಿದ ಸೋರೆ ತಿರುಳಿನ ರಸಕ್ಕೆ ಲಿಂಬೆರಸ ಮತ್ತು ಜೇನುತುಪ್ಪಬೆರೆಸಿ ಕುಡಿಯುವುದು ಗುಣಕಾರಿಯಾಗಿದೆ.
#ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ;ಇದರ ಹೊರತಾಗಿ, ಕೂದಲು ಅಕಾಲಿಕವಾಗಿ ಬಿಳಿಯಾಗುವ ಸಮಸ್ಯೆಯಲ್ಲೂ ನೀವು ಪ್ರಯೋಜನವನ್ನು ಪಡೆಯಬಹುದು. ಪ್ರತಿನಿತ್ಯ ಒಂದು ಲೋಟ ಸೋರೆಕಾಯಿ ಜ್ಯೂಸ್ ಕುಡಿದರೆ ಕೂದಲು ಬೆಳೆಯುವುದರ ಜೊತೆಗೆ ಅದು ಬಿಳಿಯಾಗುವುದನ್ನು ತಡೆಯಬಹುದು ಎಂದು ಹೇಳಲಾಗುತ್ತದೆ.
#ಪೈಲ್ಸ್ ನಿವಾರಣೆ: ಪೈಲ್ಸ್‌ನಿಂದ ಬಳಲುತ್ತಿರುವವರು ಸೊರೇಕಾಯಿ ಸಿಪ್ಪೆಯ ಸೇವನೆ ಮಾಡಬೇಕು. ಇದರಿಂದ ಪೈಲ್ಸ್ ನಿವಾರಣೆಯಾಗುತ್ತದೆ. ಸೊರೇಕಾಯಿ ಸಿಪ್ಪೆಯನ್ನ ಒಣಗಿಸಿ, ಅದು ಚೆನ್ನಾಗಿ ಒಣಗಿದ ಮೇಲೆ ಪೌಡರ್ ಮಾಡಿ, ಅದನ್ನು ಬೆಳಿಗ್ಗೆ ಮತ್ತು ಸಂಜೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚು ಹಾಲಿನೊಂದಿಗೆ ಸೇವಿಸಬೇಕು.ಒಂದು ಸ್ಪೂನ್ ಸೊರೇಕಾಯಿ ಸಿಪ್ಪೆಯ ಪೌಡರ್ ಮತ್ತು ಒಂದು ಲೋಟ ಹಾಲು ಸೇರಿಸಿ ಕುಡಿಯಬೇಕು. ಹಾಲು ಇಲ್ಲದಿದ್ದಲ್ಲಿ ನೀರನ್ನ ಕೂಡ ಬಳಸಬಹುದು.