ಅಗಸೆ ಸೊಪ್ಪಿನ ಈ ಪ್ರಯೋಜನಗಳನ್ನು ತಿಳಿದುಕೊಳ್ಳಿ!

ಈ ಮರವನ್ನು ವಿಶೇಷವಾಗಿ ವೀಳ್ಯದೆಲೆಗೆ ಆಸರೆಯಾಗಿ ಬೆಳೆಯಲು ಬಳಸುತ್ತಾರೆ ಕೆಲವರು ತೋಟದ ಅಂಚುಗಳಲ್ಲಿ ತಂಪಿಗೂ ಬೆಳೆಸುತ್ತಾರೆ.ಇದು ೨೫/೩೦ ಪೂಟ್ ಎತ್ತರವರೆಗೂ ಬೆಳೆಯುವ ಬೆಂಡುಜಾತಿ ಮರ. ಇದರಲ್ಲಿ ೨ ಜಾತಿ ಹೂಬಿಡುವ ಮರ ಇದೆ ಗಾಢ ಕೆಂಪು ಅಲ್ಲದಿದ್ದರೂ ಅದನ್ನು ನಾವು ಕರೆಯೋದು ಕೆಂಪು ಇನ್ನೊಂದು ಬಿಳಿ ಎರಡೂ ಔಷಧೀಯ ಗುಣಹೊಂದಿದೆ.ಆದರೆ ಎಲ್ಲಾ ಗಿಡಗಳಲ್ಲಿ ಔಷಧಕ್ಕೆ ಬಿಳಿಯ ಜಾತಿ ಶ್ರೇಷ್ಠ ಆದರೆ ಅಗಸೆಯಲ್ಲಿ ಕೆಂಪು ಶ್ರೇಷ್ಠ. ಇದರ ಪ್ರಯೋಜನಗಳೇನು ಈಗ ತಿಳಿಯೋಣ

#ಅಗಸೆ ಸೊಪ್ಪು ನಮ್ಮಲ್ಲಿ ಹೆಚ್ಚು ಬಳಕೆಯಲ್ಲಿಲ್ಲ ಕಾರಣವೆಂದರೆ ಈ ಸೊಪ್ಪಿನಲ್ಲಿ ನಮ್ಮ ದೇಹಕ್ಕೆ ಹೆಚ್ಚು ಪ್ರಯೋಜನ ಉಂಟು ಎಂಬ ವಿಷ್ಯ ಬಹು ಮಂದಿಗೆ ತಿಳಿಯದು, ಈ ಸೊಪ್ಪನ್ನು ಬೇಯಿಸಿ ತಿನ್ನುವುದರಿಂದ ಕಬ್ಬಿಣ, ರಂಜಕ, ಕ್ಯಾಲ್ಸಿಯಂ ಮತ್ತು A ಜೀವಸತ್ವದ ಅಭಾವದಿಂದ ತಲೆದೋರುವ ರೋಗಗಳು ಗುಣವಾಗುವುದರಲ್ಲಿ ಸಂಶಯವಿಲ್ಲ.

#ಹೊಟ್ಟೆಯ ಹುಳುಗಳಿಗೆ 20 ಎಂ ಎಲ್ ನಷ್ಟು ಎಲೆಗಳ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿ ಯಬೇಕು. ಸ್ಮರಣ ಶಕ್ತಿ ವೃದ್ಧಿಸಲು ಚೊಗಚೆ ಗಿಡದ ಬೀಜಗಳ ಪೌಡರ್ ನ್ನು 05 ಗ್ರಾಂ ನಷ್ಟು ಹಸುವಿನ ತುಪ್ಪದಲ್ಲಿ ಎರಡು ಬಾರಿ ಸೇವನೆ ಮಾಡಬೇಕು. ಹೊಟ್ಟೆ ನೋವಿಗೆ ಅಗಸೆ ಗಿಡದ ಚಕ್ಕೆ , ಹುರಿದ ಲವಂಗ ಸೇರಿಸಿ ಕಾಢೆ ( ಕಷಾಯ) ತಯಾರಿಸಿ ಸೈಂಧವ ಲವಣ ಸೇರಿಸಿ ದಿನದಲ್ಲಿ ಮೂರು ಬಾರಿ ಸೇವಿಸಬೇಕು.

#ಅಜೀರ್ಣ:ಅಗಸೆ ಎಲೆಯ ರಸ ೫/೬ ಚಮಚ ಬಿಸಿನೀರಿಗೆ ಹಾಕಿ ೨ ಸಲ ಸೇವಿಸಿ ಹೀಗೆ ೫/೬ ದಿನ ಮಾಡಿ.

#ಕೆಮ್ಮು.ಕಫದಿಂದಾಗಿ ಕೆಮ್ಮು ಉಂಟಾಗಿದ್ದರೆ ಅಗಸೆ ಬೇರನ್ನು ನೀರಿನಲ್ಲಿ ತೆದು ೧/೨ ಚಮಚ ಗಂಧ ನೆಕ್ಕಬೇಕು ಅಥವಾ ಬೇರುಸಿಕ್ಕಾಗ ಒಣಗಿಸಿಟ್ಟುಕೊಂಡು ಪುಡಿಮಾಡಿ ಅರ್ಧ ಚಮಚ ಪುಡಿ ಬಿಸಿ ನೀರಿಗೆ ಹಾಕಿ ಕುಡಿಯಿರಿ.ಗಂಧ ತೇದು ಸೇವಿಸುವದಾದರೆ ೩ ದಿನ ಬೆಳಿಗ್ಗೆ ಹಾಗೆ ಪುಡಿ ಸೇವಿಸುವದಾದರೆ ೩ ಹೊತ್ತು ೨ / ೩ ದಿನ.

#ಇರುಳುಗಣ್ಣಿಗೆ ಅಗಸೆ ಹೂವುಗಳ ಪಲ್ಯ ಮಾಡಿ ಎರಡು ವೇಳೆ ಸೇವಿಸಬೇಕು. ಕಣ್ಣಿನ ರೋಗಗಳಿಗೆ ಬಿಳಿ ಅಗಸೆ ಹೂವಿನ ರಸ ಎರಡೆರಡು ಹನಿ ಹಾಕಬೇಕು. ಹಾಗೂ ಇದರ ಎಲೆಗಳನ್ನು ತುಪ್ಪದಲ್ಲಿ ಹುರಿದು ಸೇವನೆ ಮಾಡುವು ದರಿಂದ ನೇತ್ರ ವಿಕಾರಗಳು ಪರಿಹಾರವಾಗುತ್ತವೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group