ಬಾಳೆಲೆಯ ಊಟ ಯಾವೆಲ್ಲ ಪ್ರಯೋಜನಕ್ಕೆ ಸಹಕಾರಿ ತಿಳಿಯಿರಿ!

ಇತಿಹಾಸವನ್ನು ಕೆದಕಿದರೆ ಸಾವಿರಾರು ವರ್ಷಗಳಿಂದ ಭಾರತದಲ್ಲಿ ಬಾಳೆಲೆಯ ಮೇಲೆ ಊಟ ಮಾಡಲಾಗುತ್ತಾ ಬಂದಿರುವುದನ್ನು ಗಮನಿಸಬಹುದು. ಬಾಳೆಲೆಯ ಊಟ ಕೇವಲ ಸ್ವಾದವನ್ನು ಹೆಚ್ಚಿಸುವುದು ಮಾತ್ರವಲ್ಲ, ಹಲವು ರೀತಿಯಲ್ಲಿ ಆರೋಗ್ಯಕರವೂ ಆಗಿದೆ. ಇದು ಯಾವ ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಪೂರಕವಾಗಿದೆ ಎಂಬ ಅಮೂಲ್ಯ ಮಾಹಿತಿಗಳನ್ನು ನೀಡಲಾಗಿದೆ ಓದಿ

#ಉತ್ಕರ್ಷಣ ನಿರೋಧಕಗಳು:ಹೇರಳವಾಗಿವೆಹಸಿರು ಚಹಾದಂತೆ, ಬಾಳೆ ಎಲೆ ಸಹ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿವೆ. ಇದಲ್ಲದೆ, ಇದು ಬ್ಯಾಕ್ಟೀರಿಯಾ ವಿರೋಧಿಯಾಗಿದೆ. ಹೀಗಾಗಿ ಆಹಾರದಲ್ಲಿರುವ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುತ್ತದೆ. ಇದಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತವೆ ಎಂದು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ. ನಾವು ಬಾಳೆ ಎಲೆಯನ್ನು ತಿನ್ನದಿರಬಹುದು. ಆದರೆ ಇದರಲ್ಲಿ ಬಿಸಿ ಪದಾರ್ಥಗಳನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಇದರ ಪ್ರಯೋಜನ ಸಿಗುತ್ತವೆ.

#ಕೆಲವು ಕಡೆಗಳಲ್ಲಿ ಪ್ಲಾಸ್ಟಿಕ್ ಪ್ಲೇಟ್ ಗಳ ಬಳಕೆ ಮಾಡುವರು. ಆದರೆ ಇದು ಪರಿಸರಕ್ಕೆ ಹಾನಿ ಉಂಟು ಮಾಡುವುದು. ಬಾಳೆ ಎಲೆಯನ್ನು ಬಳಕೆ ಮಾಡಿದರೆ ಅದರಿಂದ ಪರಿಸರಕ್ಕೆ ಯಾವುದೇ ರೀತಿಯ ಹಾನಿ ಆಗದು. ಇದು ಮಣ್ಣಿನಲ್ಲಿ ಬೇಗನೆ ಕರಗುವುದು ಮತ್ತು ತೊಂದರೆ ಆಗದು.

#ರುಚಿ ಹೆಚ್ಚಾಗುತ್ತದೆ:ಬಾಳೆ ಎಲೆಗಳು ಮೇಣದ ತೆಳುವಾದ ಪದರವನ್ನು ಹೊಂದಿದ್ದು, ಅದು ವಿಭಿನ್ನ ರುಚಿಯನ್ನು ಹೊಂದಿರುತ್ತದೆ. ಬಾಳೆ ಎಲೆಯ ಮೇಲೆ ಬಿಸಿ ಆಹಾರವನ್ನು ನೀಡಿದಾಗ, ಮೇಣ ಕರಗಿ ಆಹಾರದೊಂದಿಗೆ ಬೆರೆಯುತ್ತದೆ. ಇದು ಆಹಾರದ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

#ಬ್ಯಾಕ್ಟೀರಿಯಾ ವಿರೋಧಿ:ಬಾಳೆ ಎಲೆಗಳನ್ನು ಬ್ಯಾಕ್ಟೀರಿಯಾ ವಿರೋಧಿ ಎಂದು ಹೇಳಲಾಗುತ್ತದೆ ಮತ್ತು ಆಹಾರದಲ್ಲಿರುವ ಕೀಟಾಣುಗಳನ್ನು ಕೊಲ್ಲುತ್ತದೆ, ಇದು ಅದನ್ನು ಆರೋಗ್ಯಕರ ಮತ್ತು ಶುದ್ಧವಾಗಿಸುತ್ತದೆ. ಅದಕ್ಕಾಗಿಯೇ ಧಾರ್ಮಿಕ ಆಚರಣೆಗಳಲ್ಲಿ ಈ ಬಾಳೆ ಎಲೆಗಳನ್ನು ಹೆಚ್ಚಾಗಿ ಬಳಸುವುದನ್ನು ನಾವು ನೋಡುತ್ತೇವೆ.

#ಇದರಲ್ಲಿ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಫ್ರೀ ರಾಡಿಕಲ್ ಎಂಬ ಜೈವಿಕ ರಾಸಾಯನಿಕಗಳನ್ನು ತಡೆಯುವುದರಿಂದ ಕ್ಯಾನ್ಸರ್ ನಿಂದಲೂ ದೂರವಿರಬಹುದು. ಬಾಳೆ ಎಲೆ ಊಟ ಆರೋಗ್ಯಕ್ಕೆ ತಂಪಾಗಿರುದರಿಂದ ನಾವು ಯಾವುದೆ ಚಿಕ್ಕ ಪುಟ್ಟ ಚರ್ಮ ರೋಗಗಳಿಂದಲೂ ದೂರವಿರಬಹುದು.

#ನೀವು ತಟ್ಟೆಗಳಲ್ಲಿ ಊಟ ಮಾಡಿದರೆ ಅವುಗಳಲ್ಲಿ ಮಾರ್ಜಕದ ಕಣಗಳು ನಿಮ್ಮ ಹೊಟ್ಟೆ ಸೇರಬಹುದು. ಆದರೆ, ಬಾಳೆ ಎಲೆಯಲ್ಲಿ ಈ ಸಮಸ್ಯೆಯೇ ಇರುವುದಿಲ್ಲ

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group