ಈರುಳ್ಳಿಯ ಸಿಪ್ಪೆಯನ್ನು ಬಿಸಾಡುವ ಮುನ್ನ ಅದರ ಉಪಯೋಗ ತಿಳಿಯಿರಿ!

ಅಡುಗೆಗೆ ಬಳಸಿದ ಈರುಳ್ಳಿಯ ಸಿಪ್ಪೆಯನ್ನು ಎಲ್ಲರೂ ಎಸೆಯುತ್ತಾರೆ. ಅದರಿಂದ ಯಾವುದೇ ಉಪಯೋಗ ಇಲ್ಲ ಎಂದು ತಿಪ್ಪೆಗೆ ಸುರಿಯುತ್ತಾರೆ. ಆದರೆ ಕೆಲವು ಜನರಿಗೆ ಮಾತ್ರ ಈರುಳ್ಳಿ ಸಿಪ್ಪೆಯನ್ನು ಕೂಡಾ ಉಪಯೋಗಿಸಬಹುದು ಎಂಬ ಬಗ್ಗೆ ತಿಳಿದಿರುತ್ತದೆ. ಅವುಗಳಿಂದಾಗುವ ಪ್ರಯೋಜನಗಳನ್ನು ಈಗ ತಿಳಿಯೋಣ!
#ಚಪಾತಿಗೂ ಸೇರಿಸಬಹುದು;ಮನೆಯಲ್ಲಿ ಚಪಾತಿ ಹಿಟ್ಟನ್ನು ಕಲಸುವಾಗ ಸ್ವಲ್ಪ ಈರುಳ್ಳಿ ಪುಡಿ ಹಾಕಿದರೆ ಹೊಸ ರುಚಿ ಬರುತ್ತದೆ. ಆ ಚಪಾತಿಯನ್ನು ಸಾಂಬಾರಿನ ಜೊತೆ ತಿನ್ನುವುದೂ ರುಚಿ.
#ಈರುಳ್ಳಿ ಸಿಪ್ಪೆಗಳು ವಿಶೇಷ ಪರಿಮಳವನ್ನು ಹೊಂದಿರುತ್ತವೆ. ಆದ್ದರಿಂದ ಒಣಗಿದ / ಹುರಿದ ಈರುಳ್ಳಿ ಸಿಪ್ಪೆ ಪುಡಿಯನ್ನು ನಿಮ್ಮ ಅಡುಗೆಗೆ ಸೇರಿಸುವುದರಿಂದ ನಿಮ್ಮ ಸೂಪ್, ಸ್ಟ್ಯೂ ಮತ್ತು ಮನೆಯಲ್ಲಿ ತಯಾರಿಸಿದ ಬ್ರೆಡ್’ಗಳ ಪರಿಮಳ ಹೆಚ್ಚುತ್ತದೆ.
#ನೈಸರ್ಗಿಕ ಕೂದಲ ಬಣ್ಣ:ಯಾವುದೇ ರಾಸಾಯನಿಕಯುಕ್ತ ಬಣ್ಣ ಉಪಯೋಗಿಸದೇ, ನೈಸರ್ಗಿಕವಾಗಿ ನಿಮ್ಮ ಕೂದಲಿಗೆ ಬಣ್ಣ ಹಚ್ಚಬೇಕಿದೆಯೇ? ಹಾಗಾದರೆ ಈರುಳ್ಳಿ ಸಿಪ್ಪೆಯಿಂದ ನಿಮಗೆ ಖಂಡಿತಾ ಸಹಾಯ ಆಗಬಹುದು. ಒಂದು ಪಾತ್ರೆಯಲ್ಲಿ ಉಪ್ಪು ಮತ್ತು ನೀರನ್ನು ಹಾಕಿ, ಅದಕ್ಕೆ ಈರುಳ್ಳಿ ಸಿಪ್ಪೆ ಹಾಕಿ ಒಂದು ಗಂಟೆಯವರಗೆ ಕುದಿಸಿ. ಬಳಿಕ ರಾತ್ರಿಯಿಡೀ ತಣ್ಣಗಾಗಲು ಬಿಡಿ. ಮುಂಜಾನೆ ಈ ಮಿಶ್ರಣವನ್ನು , ನಿಮ್ಮ ಕೂದಲಿನ ಪ್ರತೀ ಪದರಕ್ಕೂ ಕೂದಲ ಬಣ್ಣದಂತೆ ಹಚ್ಚಿ. 30 ನಿಮಿಷಗಳ ಬಳಿಕ ಒಳ್ಳೆಯ ಶಾಂಪೂ ಹಾಕಿ ಕೂದಲನ್ನು ತೊಳೆಯಿರಿ.
#ಅನ್ನದ ಜತೆಗೆ:ಅಕ್ಕಿ ಬೇಯಿಸುವಾಗ ಈರುಳ್ಳಿ ಸಿಪ್ಪೆ ಅಥವಾ ಈರುಳ್ಳಿ ಪುಡಿಯನ್ನು ಸೇರಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.
#ಒಡೆದ ಹಿಮ್ಮಡಿಗೆ ಈ ಚಳಿಗಾಲದಲ್ಲಿ ಕಾಲಿನ ಹಿಮ್ಮಡಿ ಒಡೆತ ಸಾಮಾನ್ಯ ಸಮಸ್ಯೆ. ಈ ಸಮಸ್ಯೆಗೆ ಈರುಳ್ಳಿ ಸಿಪ್ಪೆಯನ್ನು ಬಳಸಬಹುದು. ಈರುಳ್ಳಿ ಸಿಪ್ಪೆಯನ್ನು 10 ರಿಂದ 20 ನಿಮಿಷ ನೀರಿನಲ್ಲಿ ಕುದಿಸಿ ಆ ನೀರಿನಲ್ಲಿ ಕಾಲು ಅದ್ದಿಟ್ಟರೆ ಹಿಮ್ಮಡಿ ಮೃದುವಾಗುವುದು.