ಆರೋಗ್ಯಕರವಾಗಿ ತೂಕ ಕಡಿಮೆ ಮಾಡಿಕೊಳ್ಳಲು ಬಾರ್ಲಿ ನೀರು!

ಹೌದು. ಬಾರ್ಲಿ ನೀರಿನಲ್ಲಿರುವ ಪೌಷ್ಟಿಕಾಂಶಗಳಿಂದ ಇದು ಚಿಕ್ಕಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರಿಗೂ ಬಹಳ ಉಪಯೋಗವಿದೆ. ಅದರಲ್ಲೂ ಬಾಣಂತಿಯರಿಗೆ ಇದನ್ನು ಕುಡಿಯಲೇ ಬೇಕೆಂದು ಹೇಳಿರುತ್ತಾರೆ. ಇದರ ಇನ್ನಷ್ಟು ಪ್ರಯೋಜನಗಳತ್ತ ನೋಡೋಣ!

#ಮಧುಮೇಹಿಗಳಿಗೂ ಉತ್ತಮವಾಗಿದೆ:ಬಾರ್ಲಿಯಲ್ಲಿರುವ ಬೀಟಾ ಗ್ಲುಕಾನ್ ಆಹಾರದಲ್ಲಿರುವ ಗ್ಲುಕೋಸ್ ಸಕ್ಕರೆಯನ್ನು ರಕ್ತದಲ್ಲಿ ಸೇರಿಸುವ ಗತಿಯನ್ನು ನಿಧಾನಗೊಳಿಸುವ ಕಾರಣ ಮಧುಮೇಹಿಗಳು ಸಹಾ ಸುರಕ್ಷಿತವಾಗಿ ಸೇವಿಸಬಹುದು. ಮಧುಮೇಹಿಗಳ ರಕ್ತದಲ್ಲಿ ಥಟ್ಟನೇ ಸಕ್ಕರೆಯ ಪ್ರಮಾಣ ಏರಿದರೆ ಅಪಾಯಕಾರಿಯಾದುದರಿಂದ ಬಾರ್ಲಿ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆ ನಿಧಾನವಾಗಿ ಲಭ್ಯವಾಗುವಂತೆ ಮಾಡಿ ಮಧುಮೇಹಿಗಳಿಗೆ ಸೂಕ್ತವಾದ ಆಹಾರವಾಗಿದೆ.

#ದೀರ್ಘಕಾಲದ ತನಕ ಹಸಿವಾಗದ ರೀತಿ ಮಾಡಿ ಜಂಕ್ ಅಥವಾ ಕರಿದ ಆಹಾರಗಳಿಂದ ನಿಮ್ಮನ್ನು ದೂರವಿರುವಂತೆ ಮಾಡುತ್ತದೆ. ಫೈಬರ್ ಅಂಶವು ಜೀರ್ಣ ಶಕ್ತಿ ಹೆಚ್ಚಿಸುವುದರ ಜೊತೆಗೆ ಬಾರ್ಲಿ ನೀರನ್ನು ಕುಡಿದರೆ ಕ್ಯಾಲೋರಿ ಅಂಶ ಕಡಿಮೆಯಾಗಿ ಉತ್ತಮ ಆರೋಗ್ಯ ಸಿಗುತ್ತದೆ.ಆರೋಗ್ಯಕರವಾಗಿ ತೂಕ ಕಡಿಮೆ ಮಾಡಿಕೊಳ್ಳಲು ನಿಮ್ಮ ದಿನನಿತ್ಯದ ವ್ಯಾಯಾಮ ಹಾಗೂ ಡಯಟ್‍ನೊಂದಿಗೆ ಬಾರ್ಲಿ ನೀರನ್ನು ಸೇವಿಸಲು ಆರಂಭಿಸಿ ಉತ್ತಮ ಆರೋಗ್ಯವನ್ನು ಹೊಂದಿ.

#ಬಾರ್ಲಿಯ ಹೆಚ್ಚಿನ ಫೈಬರ್ ಅಂಶವು ಮತ್ತೊಮ್ಮೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದರ ಕರಗದ ಫೈಬರ್ ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೂಲಕ ಆಹಾರವು ಹಾದುಹೋಗಲು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಕರುಳಿನ ಕ್ಯಾನ್ಸರ್ ವಿರುದ್ಧ ವಿಶೇಷವಾಗಿ ರಕ್ಷಣಾತ್ಮಕವಾಗಿ ಕಾಣುತ್ತದೆ. ಕರಗುವ ಫೈಬರ್ ನಿಮ್ಮ ಕರುಳಿನಲ್ಲಿರುವ ಕಾರ್ಸಿನೋಜೆನ್‌ಗಳಿಗೆ ಬಂಧಿಸಬಹುದು, ಅವುಗಳನ್ನು ನಿಮ್ಮ ವ್ಯವಸ್ಥೆಯಿಂದ ತೆಗೆದುಹಾಕುತ್ತದೆ.

#ಅಜೀರ್ಣ ಸಮಸ್ಯೆಗೆ:ಉಷ್ಣದಿಂದಾಗುವ ಸಮಸ್ಯೆಗಳು, ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಬಾರ್ಲಿ ನೀರು ಸೇವಿಸಬಹುದೆಂದು ಆಯುರ್ವೇದದಲ್ಲಿ ಹೇಳಲಾಗಿದೆ. ಅದಲ್ಲದೆ, ಮಲಬದ್ಧತೆ, ಬೇಧಿ ಮುಂತಾದ ಸಮಸ್ಯೆಯಿದ್ದರೂ ಬಾರ್ಲಿ ನೀರು ಸೇವಿಸಬಹುದು.

#ಮೂತ್ರಪಿಂಡಗಳಲ್ಲಿ ಉತ್ಪತ್ತಿಯಾಗುವ ಕಲ್ಲುಗಳಿಗೆ ಆಹಾರದಲ್ಲಿರುವ ಲವಣಗಳು ಕಾರಣವಾಗಿವೆ. ಒಂದು ಚಿಕ್ಕ ಕಣದಿಂದ ಪ್ರಾರಂಭವಾಗುವ ಇವು ದಿನಗಳೆದಂತೆ ದೊಡ್ಡದಾಗುತ್ತಾ ಹೋಗುತ್ತವೆ. ಒಂದು ನಿರ್ದಿಷ್ಟ ಪ್ರಮಾಣಕ್ಕೆ ಬೆಳೆದ ಬಳಿಕ ನೋವು ನೀಡಲು ಪ್ರಾರಂಭವಾಗುತ್ತದೆ. ಅಲ್ಲಿಯವರೆಗೂ ಈ ಕಲ್ಲುಗಳ ಇರುವಿಕೆಯೇ ಗೊತ್ತಾಗುವುದಿಲ್ಲ. ಪ್ರತಿದಿನ ಬಾರ್ಲಿ ನೀರನ್ನು ಕುಡಿಯುವುದರಿಂದ ಈ ಕಲ್ಲುಗಳು ನಿಧಾನವಾಗಿ ಕರಗುತ್ತವೆ. ಪರಿಣಾಮವಾಗಿ ಮೂತ್ರಪಿಂಡಗಳ ಕಾರ್ಯಕ್ಷಮತೆ ಹೆಚ್ಚುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group