ನೀವು ದಿನ ನಿತ್ಯ ಬೆಳಗ್ಗೆ ಬೇಗ ಏಳುತ್ತೀರಿ ಎಂದಾದರೆ ಈ ಪ್ರಯೋಜನಗಳು ನಿಮ್ಮದಾಗಲಿವೆ!

ಬೇಗ ಏಳುವ ಅಭ್ಯಾಸ ಮಾಡಿಕೊಂಡರೆ ನಮ್ಮ ದೇಹಕ್ಕೆ ಸಿಗುವ ಲಾಭಗಳು ಹಲವಾರು. ಮುಂಜಾನೆ ವಾತಾವರಣ ಶುದ್ಧವಾಗಿರುತ್ತದೆ. ಶುದ್ಧವಾದ ಗಾಳಿ ಸೇವಿಸಿಕೊಂಡು ಯೋಗ, ವ್ಯಾಯಾಮ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಬೇಗ ಎಳುವುದರ ಕೆಲವು ಪ್ರಯೋಜನಗಳ್ಳನು ಈ ಕೆಳಗೆ ನೀಡಲಾಗಿದೆ ನೋಡಿ!
#ಮುಂಜಾನೆ ಎದ್ದು ಪ್ರಾರ್ಥನೆ ಮತ್ತು ಧ್ಯಾನ ಮಾಡಲು ಉತ್ತಮವಾದಂತಹ ಸಮಯ ಇದಾಗಿರುತ್ತದೆ, ಈ ಸಮಯದಲ್ಲಿ ನಿಮಗೆ ಯಾವುದೇ ರೀತಿಯಾದಂತಹ ಅಡಚಣೆಗಳು ಇರುವುದಿಲ್ಲ. ಇನ್ನು ಈ ಸಮಯದಲ್ಲಿ ಏಳುವುದರಿಂದಾಗಿ ಅನೇಕ ಆರೋಗ್ಯ ಪ್ರಯೋಜನಗಳಿವೆ, ನಿಮ್ಮ ಆಯಸ್ಸು ವೃದ್ಧಿಯಾಗುವ ಎಲ್ಲ ಸಾಧ್ಯತೆಗಳಿವೆ, ಬೆಳಗ್ಗೆ ಈ ಸಮಯದಲ್ಲಿ ಎದ್ದರೆ ಭರವಸೆ ಸ್ಫೂರ್ತಿ ಮೂಡುವುದನ್ನು ಕಾಣಬಹುದಾಗಿದೆ,
#ಬ್ರೇಕ್ ಫಾಸ್ಟ್ ಆರಾಮದಲ್ಲಿ ಮಾಡಬಹುದು.ನಿಮ್ಮ ದೇಹಕ್ಕೆ ಶೇ. 50ರಷ್ಟು ಶಕ್ತಿ ಬೆಳಗ್ಗಿನ ಬ್ರೇಕ್ ಫಾಸ್ಟ್‍ನಲ್ಲಿ (Breakfast) ಸಿಗುತ್ತದೆ. ಯಾರು ಬ್ರೇಕ್‍ಫಾಸ್ಟ್ ಮಾಡುವುದಿಲ್ಲವೋ, ಅಥವಾ ಗಬಗಬ ಬ್ರೇಕ್ ಫಾಸ್ಟ್ ತಿನ್ನುತ್ತಾರೆ ಅವರಲ್ಲಿ ಆ ದಿನಕ್ಕೆ ಬೇಕಾದಷ್ಟು ಶಕ್ತಿ ದೇಹದಲ್ಲಿ ಸೃಷ್ಟಿಯಾಗುವುದಿಲ್ಲ. ಬೇಗ ಎದ್ದರೆ ಎಲ್ಲಾ ಕೆಲಸ ಬೇಗ ಮುಗಿಯುತ್ತದೆ. ಆರಾಮದಲ್ಲಿ ಬ್ರೇಕ್ ಫಾಸ್ಟ್ ಮುಗಿಸಿ ಕಚೇರಿ ಸೇರಿಕೊಳ್ಳಬಹುದು.
#ಏಕಾಗ್ರತೆಯ ಮುಂಜಾನೆ:ಬೆಳಗ್ಗಿನ ತಣ್ಣನೆಯ ತಾಜಾ ಗಾಳಿ ನಿಮ್ಮ ಜೀವನದಲ್ಲಿ ವಿಸ್ಮಯವನ್ನೇ ಸೃಷ್ಟಿಸುತ್ತೆ. ಈ ಗಾಳಿಗೆ ಎಷ್ಟು ಶಕ್ತಿ ಇರುತ್ತದೆ ಎಂದರೆ ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಬೆಳಗ್ಗಿನ ಜಾವದಲ್ಲಿ ಬೆಳಗ್ಗಿನ ಅತ್ಯುತ್ತಮ ಗಾಳಿಗೆ ಯೋಗ, ವ್ಯಾಯಾಮವನ್ನು ಜನರು ಮಾಡುವುದು. ಇನ್ನು ಬೆಳಗ್ಗಿನ ಗಾಳಿ, ವಾತಾವರಣ ಅಸ್ತವ್ಯಸ್ತವಾದ ಮನಸ್ಸನ್ನು ಬದಲಿಸಿ ಉತ್ತಮ ಹಾಗೂ ಸಾಧಿಸುವ ಚಲವನ್ನು ಸೃಷ್ಟಿಸುತ್ತದೆ. ವಾತಾವರಣ ತಾಜವಾಗಿರುವುದಲ್ಲದೇ ಮನಸ್ಸನ್ನು ಇದೆ ತಾಜಾವಾಗಿರಿಸುತ್ತದೆ. ಹೀಗಾಗಿ ನಿಮಗೆ ನಿಮ್ಮ ಕೆಲಸದ ಮೇಲೆ ಸಂಪೂರ್ಣ ಏಕಾಗ್ರತೆ ಹೊಂದಬಹುದು. ಅಲ್ಲದೇ ಬೆಳಗ್ಗಿನ ಹೊಸ ಗಾಳಿ, ಹೊಸ ಸೂರ್ಯನ ಕಿರಣ ನಿಮ್ಮ ನೋವು ಒತ್ತಡವನ್ನು ನಿವಾರಿಸುತ್ತದೆ. ಈ ಮೂಲಕ ನಿಮ್ಮ ಕೆಲಸವನ್ನು ಸರಿಯಾಗಿ ಮಾಡಿಕೊಳ್ಳಬಹುದು, ಅಲ್ಲದೇ ಲಾಭದ ಕಡೆಗೆ ನಿಮ್ಮನ್ನು ಕೊಂಡೊಯ್ಯಬಹುದು.
#ಮೂಡ್ ಚೆನ್ನಾಗಿರುತ್ತದೆ. ಬೇಗ ಏಳುವವರ ಮನಸ್ಸಿನಲ್ಲಿ ಸಕರಾತ್ಮಕ ಯೋಚನೆ ಇರುತ್ತದೆ. ಒಂದು ಸ್ಟಡಿ ಪ್ರಕಾರ ಬೆಳಗ್ಗೆ ಬೇಗ ಎದ್ದರೆ ನೀವು ದಿನವಿಡೀ ಖುಷಿಯಾಗಿರುತ್ತೀರಿ.
#ಇದೇ ಅಭ್ಯಾಸಕ್ಕೆ ಹೊಂದಿಕೊಳ್ಳುತ್ತೀರಿ: ನೀವು ದಿನ ನಿತ್ಯ ಬೆಳಗ್ಗೆ ಏಳುತ್ತೀರಿ ಎಂದಾದರೆ ನೀವು ದಿನ ನಿತ್ಯ ಒಂದು ಕೆಲಸವನ್ನು ಮಾಡಲು ಬಯಸುತ್ತೀರಿ. ಅದು ನಿಮಗೆ ನಂತರ ಹವ್ಯಾಸವಾಗುತ್ತದೆ. ಬಳಿಕ ಇದೊಂದು ಮಾದರಿಯಾಗಿ ಬದಲಾಗುತ್ತದೆ. ಉದಾಹರಣೆಗೆ ನೀವು ಬೆಳಗ್ಗೆ ಏಳುತ್ತೀರಿ ಎಂದುಕೊಳ್ಳಿ, ಎದ್ದು ನೀವು ಯೋಗ ಮಾಡುತ್ತೀರಿ ಅಥವಾ ವಾಕ್ ಹೋಗುತ್ತೀರಿ ಎಂದು ಕೊಳ್ಳಿ. ಈ ರೀತಿಯ ಹವ್ಯಾಸದಿಂದ ನೀವು ಈ ಮಾದರಿ ಹೊಂದಿಕೊಳ್ಳುತ್ತೀರಿ. ಈ ಮಾದರಿಯೇ ನಿಮ್ಮನ್ನು ದಿನ ನಿತ್ಯ ಏಳುವಂತೆ ಪ್ರೇರೆಪಿಸುತ್ತದೆ. ಮನಸ್ಸು ದೇಹ ಕೂಡ ಈ ಮಾದರಿ ಮಾಡುವಂತೆ ಪ್ರೇರೇಪಿಸುತ್ತದೆ. ಈ ಮೂಲಕ ನೀವು ಅತ್ಯುತ್ತಮ ಜೀವನ ಶೈಲಿಯನ್ನು ಹೊಂದಿಕೊಳ್ಳಬಹುದು. ಇನ್ನು ಈ ರೀತಿಯ ಮಾದರಿಯು ನಿಮ್ಮ ಹೆಚ್ಚಿನ ಉತ್ಪಾದಕೆ ವ್ಯಕ್ತಿಯನ್ನಾಗಿಸುತ್ತದೆ. ಇದು ನಿಮ್ಮ ಕೆಲಸದಲ್ಲಿ ಕಾಣುತ್ತದೆ. ಈ ಮೂಲಕ ಜೀವನದಲ್ಲಿ ಯಶಸ್ಸನ್ನು ಕಾಣಬಹುದು.