ಬೀಟ್ರೂಟ್ ರಸದ ಸೇವನೆಯಿಂದ ಆಗುವ ಪ್ರಯೋಜನ!

ಬೀಟ್ರೂಟ್ ರಸದ ಸೇವನೆಯಿಂದ ಇನ್ನೂ ಹಲವಾರು ಪ್ರಯೋಜನಗಳಿವೆ. ಇದರ ಉರಿಯೂತ ನಿವಾರಕ ಗುಣ ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡುತ್ತದೆ ಹಾಗೂ ಬೀಟಾಲೈನ್ಸ್ ಗಳು ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ನೆರವಾಗುತ್ತವೆ. ಇಂದಿನ ಲೇಖನದಲ್ಲಿ ಇವುಗಳಲ್ಲಿ ಪ್ರಮುಖವಾದವುಗಳನ್ನು ವಿವರಿಸಲಾಗಿದೆ. ಬನ್ನಿ ನೋಡೋಣ.

#ಪ್ರತೀ ನಿತ್ಯ ಒಂದು ಲೋಟ ಬೀಟ್ ರೂಟ್ ಜ್ಯೂಸ್ ಕುಡಿದರೆ ಅದರಿಂದ ತ್ರಾಣ ಹೆಚ್ಚಾಗುತ್ತದೆ. ನೈಟ್ರೇಟ್ ಅಂಶವು ನೈಟ್ರೇಟ್ ಆಕ್ಸೈಡ್ ಆಗಿ ಪರಿವರ್ತನೆಗೊಳ್ಳೂವ ಮೂಲಕ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆ ವೇಳೆ ಆಮ್ಲಜನಕದ ಸರಬರಾಜು ಹೆಚ್ಚಿಸುವುದು ಮತ್ತು ಆಯಾಸ ಕಡಿಮೆ ಮಾಡುವುದು. ಜ್ಯೂಶ್ ನ್ನು ನಿಯಮಿತವಾಗಿ ಕುಡಿದರೆ ಅದರಿಂದ ದೈಹಿಕವಾಗಿ ಶಕ್ತಿ ಬರುವುದು.

#ಒಂದು ಅಧ್ಯಯನದಲ್ಲಿ ನಿತ್ಯವೂ ಅರ್ಧ ಕಪ್ ಬೀಟ್ರೂಟ್ ರಸದ ಸೇವನೆಯ ಅಭ್ಯಾಸ ಮಾಡುತ್ತಿರುವ ವ್ಯಕ್ತಿಗಳ ಊಟದ ಬಳಿಕ ರಕ್ತದಲ್ಲಿ ಗ್ಲುಕೋಸ್ ಮಟ್ಟದಲ್ಲಿ ಇಳಿಕೆ ಕಂಡುಬಂದಿದೆ. ಇದರಲ್ಲಿರುವ ಪ್ರಬಲ ಆಂಟಿ ಆಕ್ಸಿಡೆಂಟುಗಳಾದ ಬೀಟಾಲೈನ್ಸ್ ಈ ಗುಣಕ್ಕೆ ಕಾರಣವಾಗಿದೆ. ಸ್ಥೂಲದೇಹಿಗಳು ಕಾರ್ಬೋಹೈಡ್ರೇಟುಗಳೊಂದಿಗೆ ಬೀಟ್ರೂಟ್ ರಸವನ್ನು ಸೇವಿಸಿದಾಗಲೂ ಇದೇ ಪ್ರಭಾವ ಉಂಟಾಗಿರುವುದನ್ನು ಗಮನಿಸಲಾಗಿದೆ. ಅಲ್ಲದೇ ಈ ವ್ಯಕ್ತಿಗಳ ದೇಹದಲ್ಲಿ ಇನ್ಸುಲಿನ್ ತಾಳಿಕೊಳ್ಳುವ ಕ್ಷಮತೆ ಇತರರಿಗಿಂತಲೂ ಹೆಚ್ಚಾಗಿರುವುದನ್ನು ಗಮನಿಸಲಾಗಿದೆ. ಈ ರಸದಲ್ಲಿರುವ ನೈಟ್ರೇಟುಗಳು ವಿಶೇಷವಾಗಿ ಟೈಪ್ – 2 ಮಧುಮೇಹ ಇರುವ ವ್ಯಕ್ತಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

#ಇದು ಚರ್ಮದ ಸಮಸ್ಯೆ ಮತ್ತು ನೆರಿಗೆ ವಿರುದ್ಧ ಹೋರಾಡುವುದು ಮಾತ್ರವಲ್ಲದೆ ಚರ್ಮಕ್ಕೆ ಪುನಶ್ಚೇತನ ನೀಡುವುದು. ನಿಯಮಿತವಾಗಿ ಬೀಟ್ರೂಟ್ ಜ್ಯೂಸ್ ಕುಡಿದರೆ ಅದರಿಂದ ಆರೋಗ್ಯಕಾರಿ ಮತ್ತು ಕಾಂತಿಯುತ ಚರ್ಮ ಪಡೆಯಬಹುದು. ಬೀಟ್ ರೂಟ್ ಜ್ಯೂಸ್ ನಿತ್ಯವೂ ಕುಡಿದರೆ ಅದರಿಂದ ವಯಸ್ಸಾಗುವ ಲಕ್ಷಣಗಳನ್ನು ತಡೆಯಬಹುದಾಗಿದೆ. ಬೀಟ್ ರೂಟ್ ನಲ್ಲಿ ಇರುವಂತಹ ಫಾಲಟೆ ಅಂಶವು ಈ ಕಾರ್ಯಕ್ಕೆ ಕಾರಣವಾಗಿದೆ.

#ಆರೋಗ್ಯಕರ ದೇಹತೂಕ:ನಿಮ್ಮ ದೇಹತೂಕವನ್ನು ನಿಯಂತ್ರಣದಲ್ಲಿಡಲು ಬೀಟ್‌ರೂಟ್‌ ಸಹಾಯಕಾರಿ. ದಿನಕ್ಕೊಂದು ಬೀಟ್‌ರೂಟ್‌ ಸೇವಿಸಿದರೆ ಸಾಕಷ್ಟು ಕ್ಯಾಲೊರಿ ಬಾಡಿಗೆ ಸಿಗುತ್ತದೆ. ಇತರ ಆಹಾರಗಳನ್ನು ಒಂದು ಮಿತಿಗಿಂತ ಹೆಚ್ಚಾಗಿ ಸೇವಿಸುವ ಅಗತ್ಯ ಬೀಳುವುದಿಲ್ಲ. ಹೀಗಾಗಿ ದೇಹದಲ್ಲಿ ಅನಗತ್ಯ ಕೊಬ್ಬು ಶೇಖರವಾಗುವುದು ತಪ್ಪುತ್ತದೆ.

#ಒಂದು ವೇಳೆ ಯಕೃತ್ ನಲ್ಲಿ ಮದ್ಯಪಾನದ ಹೊರತಾಗಿ ಎದುರಾಗಿರುವ ಕೊಬ್ಬಿನ ಸಂಗ್ರಹವಿದ್ದರೆ ಇದನ್ನು ನಿವಾರಿಸುವಲ್ಲಿ ಬೀಟ್ರೂಟ್ ರಸ ನೆರವಿಗೆ ಬರಬಹುದು. ಈ ಅಂಶವನ್ನು ಕೇವಲ ಪ್ರಾಣಿಗಳ ಮೇಲೆ ನಡೆಸಿದ ಸಂಶೋಧನೆಗಳಿಂದ ಮಾತ್ರವೇ ಕಂಡುಕೊಳ್ಳಲಾಗಿದೆ. ಇನ್ನೊಂದು ಅಧ್ಯಯನದಲ್ಲಿ ಇಲಿಗಳಿಗೆ ಬೀಟ್ರೂಟ್ ನಲ್ಲಿರುವ ಬೀಟಾಲೈನ್ ಅಂಶವನ್ನು ಹೆಚ್ಚುವರಿ ಅಂಶವಾಗಿ ನೀಡಿದಾಗ ಇವುಗಳ ಯಕೃತ್ ಅನ್ನು ವಿಷಕಾರಿ ಅಂಶಗಳಿಂದ ರಕ್ಷಣೆ ಪಡೆದಿರುವುದು ಗಮನಕ್ಕೆ ಬಂದಿದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group