ಗಂಟಲಿನ ಕಫದ ಸಮಸ್ಯೆಗೆ ಸುಲಭ ಮನೆಮದ್ದು!

ಇತ್ತೀಚಿನ ಜನರು ಸಿಕ್ಕಸಿಕ್ಕ ತಿಂಡಿ-ತಿನಿಸುಗಳು, ಜ್ಯೂಸ್, ಐಸ್ ಕ್ರೀಮ್ ಗಳನ್ನೆಲ್ಲ ತಿನ್ನುತ್ತಾರೆ. ಇದರಿಂದ ಆರೋಗ್ಯ ಹಾಳಾಗುತ್ತದೆ. ಅಲ್ಲದೇ ಕೆಮ್ಮು, ನೆಗಡಿ, ಗಂಟಲು ಕಿರಿಕಿರಿಯಿಂದ ಬಳಲುತ್ತಾರೆ. ಇದನ್ನು ಗುಣಪಡಿಸಲು ವೈದ್ಯರ ಬಳಿ ಹೋಗಿ ಅವರಿಗೆ ಸಾವಿರಗಟ್ಟಲೆ ಹಣವನ್ನು ಸುರಿಸುತ್ತಾರೆ. ಇದರ ಬದಲು ಮನೆಯಲ್ಲಿ ಕುಳಿತುಕೊಂಡು ಮನೆಮದ್ದನ್ನು ತಯಾರಿಸಿ ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಬೇಕು. ವೈದ್ಯರಿಗೆ ಹಣವನ್ನು ಹಾಕುವ ಬದಲು ನೀವೇ ಮನೆಯಲ್ಲಿ ಮದ್ದನ್ನು ತಯಾರಿಸಿ ಕೆಮ್ಮು ಕಫಗಳನ್ನು ಹೋಗಲಾಡಿಸಬಹುದು.
#ಜೇನುತುಪ್ಪಕ್ಕೆ ಕರಿಮೆಣಸಿನ ಪುಡಿ ಮಿಶ್ರ ಮಾಡಿ ದಿನಕ್ಕೆ 3-4 ಬಾರಿ ಸೇವಿಸುವುದರಿಂದ ಸಹ ಗಂಟಲ ಕಫ ಕರಗುತ್ತದೆ.
#ನಿರಂತರ ಕಫದ ಸಮಸ್ಯೆ ಕಾಡುತ್ತಿದ್ದರೆ ನಿಂಬೆ ಹಣ್ಣಿನ ರಸಕ್ಕೆ ಕಪ್ಪು ಉಪ್ಪು ಅಥವಾ ಸೈಂಧವ ಉಪ್ಪು ಸೇರಿಸಿ. ಅದರೊಂದಿಗೆ ಕರಿಮೆಣಸಿನ ಪುಡಿ ಮಿಶ್ರಣ ಮಾಡಿ ಆ ರಸವನ್ನು ಸೇವಿಸಿದ್ರೆ ಕಫದ ಸಮಸ್ಯೆ ನಿವಾರಣೆಯಾಗುತ್ತದೆ
#ಒಣ ಶುಂಠಿ, ಕರಿಮೆಣಸು ಹಾಗೂ ಬೆಲ್ಲ ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ಸಹ ಕಫ ಸಮಸ್ಯೆಗೆ ಪರಿಹಾರ ಕಾಣಬಹುದು.
#ಹಸಿ ಕ್ಯಾರೆಟ್ನ್ನು ಗಟ್ಟಿ ಜ್ಯೂಸ್ ಆಗಿಸಿ ಅದಕ್ಕೆ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಸಹ ಗಂಟಲಿನ ಕಫ ನಿವಾರಣೆಯಾಗುತ್ತದೆ.
#ಕಫವನ್ನು ನಿವಾರಿಸಲು ತುಳಸಿಯೂ ಅದ್ಭುತ ಶಮನ ನೀಡುತ್ತದೆ. ಇದಕ್ಕಾಗಿ ತಾಜಾ ತುಳಸಿ ಎಲೆಗಳನ್ನು ಜಗದು ನುಂಗಬಹುದು ಅಥವಾ ಒಣಗಿದ ತುಳಸಿ ಎಲೆಗಳನ್ನು ಪುಡಿಮಾಡಿಯೂ ಸೇವಿಸಬಹುದು. ತಾಜಾ ಎಲೆಗಳಾದರೆ ಸುಮಾರು ಹತ್ತು ಗ್ರಾಂ ಸಾಕು. ಒಣ ಎಲೆಗಳಾದರೆ ಒಂದು ದೊಡ್ಡ ಚಮಚದಷ್ಟು ಪ್ರಮಾಣದಷ್ಟು ಬೇಕಾಗುತ್ತದೆ. ಇದನ್ನು ಒಂದು ಲೋಟ ನೀರಿನಲ್ಲಿ ಒಂದೆರಡು ಏಲಕ್ಕಿಗಳ ಜೊತೆಗೆ ಕುದಿಸಬೇಕು. ರುಚಿಗೆ ತಕ್ಕಷ್ಟು ಜೇನನ್ನೂ ಬೆರೆಸಬಹುದು. ಈ ಟೀ ಯನ್ನು ಕುಡಿಯುವ ಮೂಲಕ ಕಫ ಸಡಿಲಗೊಳ್ಳುತ್ತದೆ ಹಾಗೂ ಶ್ವಾಸಕೋಶದ ಇತರ ತೊಂದರೆಗಳನ್ನೂ ನಿವಾರಿಸಬಹುದು.
#ಅರಿಶಿನ ಪುಡಿಯನ್ನು ಒಂದು ಗ್ಲಾಸ್ ಹಾಲಿನಲ್ಲಿ ಹಾಕಿ ಬೆಳಗ್ಗೆ ರಾತ್ರಿ ಸೇವಿಸುವುದರಿಂದ, ಕಫ ನಿವಾರಣೆ ಮಾಡಿಕೊಳ್ಳಬಹುದಾಗಿದೆ.
#ನಿಂಬೆ, ಕಲ್ಲು ಸಕ್ಕರೆ ಮತ್ತು ಕಾಳುಮೆಣಸನ್ನು ಸೇರಿಸಿ ಗಟ್ಟಿಯಾದ ಪಾಕವನ್ನು ಮಾಡಿಕೊಳ್ಳಬೇಕು. ಈ ಪಾಕವನ್ನು ದಿನವೂ 2 ಚಮಚ ಸೇವಿಸುತ್ತಾ ಬಂದರೆ ಕಫ ಕಡಿಮೆಯಾಗುವುದಲ್ಲದೇ ಕೆಮ್ಮಿನ ಸಮಸ್ಯೆ ದೂರವಾಗುತ್ತದೆ.