ಬೆಣ್ಣೆ ಹಣ್ಣಿನ ಪ್ರಯೋಜನ ತಿಳಿದಿದೆಯೇ?

ಇದರಿಂದ ವಿಟಮಿನ್ ಡಿ, ಮತ್ತು ಬಿ ,ಉತ್ತಮ ರೀತಿಯಲ್ಲಿ ದೊರೆಯುತ್ತದೆ. ಹಾಗೆಯೇ ಎರಡು ಬಾಳೆಹಣ್ಣಿನಲ್ಲಿ ಇರುವಷ್ಟು ಪೋಟಾಷಿಯಮ್ ಅಂಶ ಇದರಲ್ಲಿ ಇರುತ್ತದೆ. ಈ ಹಣ್ಣು ಬರೀ ಹೃದಯಕ್ಕೆ ಮೀಸಲಾಗದೆ, ಶುಗರ್ ಪೇಷಂಟ್ ಗಳಿಗೆ ಸಹ ಬಹಳಷ್ಟು ಸಹಾಯವಾಗುತ್ತದೆ. ಇದರಿಂದ ಫೇಸ್ ವಾಷ್ ಅನ್ನು ಸಹ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಇದಕ್ಕೆ ಬಹಳ ದುಬಾರಿ ಬೇಡಿಕೆ ಇದೆ. ಹಾಗೆಯೇ ಕೂದಲು ಉದುರುವಿಕೆ ಸಮಸ್ಯೆ ಇರುವವರು ಆಗಾಗ ಹಣ್ಣನ್ನು ಸೇವಿಸಿದರೆ ಕೂದಲು ಉದುರಿಕೆ ಕಡಿಮೆಯಾಗುತ್ತದೆ. ಇನ್ನಷ್ಟು ಪ್ರಯೋಜನ ತಿಳಿಯೋಣ ಬನ್ನಿ!
#ಜೀರ್ಣಕ್ರಿಯೆಗೆ ಸಹಕಾರಿ:ಹೊಟ್ಟೆಯ ಅನಾರೋಗ್ಯ ಮತ್ತು ಮಲಬದ್ಧತೆಯು ಗರ್ಭಿಣಿಯರಲ್ಲಿ ಕಂಡುಬರುವಂತಹ ಸಾಮಾನ್ಯ ಸಮಸ್ಯೆಯಾಗಿದೆ. ಅವಕಾಡೊದಲ್ಲಿ ಉನ್ನತ ಮಟ್ಟದ ನಾರಿನಾಂಶವಿದೆ ಮತ್ತು ಇದು ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಇದು ಹೊಟ್ಟೆಯ ಕ್ರಿಯೆಯನ್ನು ಸುಧಾರಿಸುವುದು.
#ಅವಕಾಡೊದಿಂದ ತೈಲವನ್ನು ಕೂಡ ತಯಾರಿಸಲಾಗುತ್ತದೆ. ಚರ್ಮವನ್ನು ಮೃದುಗೊಳಿಸುವಲ್ಲಿ ಈ ತೈಲ ಸಹಕಾರಿ. ವಾರದಲ್ಲಿ ಎರಡು ಬಾರಿ ಅವಕಾಡೊ ತೈಲದಿಂದ ಮಸಾಜ್ ಮಾಡುವುದರಿಂದ ತ್ವಚೆಯು ಸಮಸ್ಯೆಗಳು ದೂರವಾಗುತ್ತದೆ.
#ಕೊಲೆಸ್ಟ್ರಾಲ್ ಮತ್ತು ಸಕ್ಕರೆ ಮಟ್ಟ ನಿರ್ವಹಿಸುವುದು:ನಿಯಮಿತವಾಗಿ ಅವಕಾಡೊ ಸೇವನೆ ಮಾಡಿದರೆ ಅದರಿಂದ ಕೊಲೆಸ್ಟ್ರಾಲ್ ನ್ನು ನಿಯಂತ್ರಣದಲ್ಲಿ ಇಡಬಹುದು ಮತ್ತು ಸಕ್ಕರೆ ಮಟ್ಟವು ಸಮತೋಲನದಲ್ಲಿ ಇರುವುದು.
#ಲುಥೆನ್ ಮತ್ತು ಜಿಯಾಕ್ಸಾಂಥಿನ್ ಅಂಶವು ಕಾರ್ಟಿಲೆಜ್ ದೋಷದ ಅಪಾಯ ಕಡಿಮೆ ಮಾಡುವುದು. ಅವಕಾಡೊದಲ್ಲಿ ಖನಿಜಾಂಶಗಳಾಗಿರುವಂತಹ ಸತು, ಪೋಸ್ಪರಸ್, ತಾಮ್ರ, ಕ್ಯಾಲ್ಸಿಯಂ ಮತ್ತು ಸೆಲೆನಿಯಂ ಇದೆ. ಹೀಗಾಗಿ ಇದು ಅಸ್ಥಿರಂಧ್ರತೆ ಸಮಸ್ಯೆಯನ್ನು ಕಡಿಮೆ ಮಾಡುವುದು ಮತ್ತು ಮೂಳೆಯ ಖನಿಜ ಸಾಂದ್ರತೆ ಹೆಚ್ಚಿಸುವುದು.
#ಆವಕಾಡೊಗಳು ಮಧುಮೇಹ ರೋಗಿಗಳಿಗೆ ಸಹ ಪ್ರಯೋಜನಕಾರಿ. ಅವರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತಾರೆ. ಟೈಪ್-2 ಡಯಾಬಿಟಿಸ್ ಹೊಂದಿರುವ 12 ಮಹಿಳೆಯರ ಮೇಲೆ ನಡೆಸಿದ ಅಧ್ಯಯನವು ಆವಕಾಡೊದಲ್ಲಿನ ಮೊನೊಸಾಚುರೇಟೆಡ್ ಫ್ಯಾಟಿ ಆಸಿಡ್ ಅಂಶವು ರಕ್ತದಲ್ಲಿನ ಪ್ಲಾಸ್ಮಾ ಟ್ರೈಗ್ಲಿಸರೈಡ್‌ಗಳ ಮಟ್ಟವನ್ನು ಕಡಿಮೆ ಮಾಡಲು ಮತ್ತು ಲಿಪಿಡ್ ಪ್ರೊಫೈಲ್ ಅನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಸೂಚಿಸಿದೆ. ಅಲ್ಲದೆ, ಆವಕಾಡೊದಲ್ಲಿ ಸಕ್ಕರೆ ಅಂಶವು ಇತರ ಹಣ್ಣುಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ.