ನಿಂಬೆ ಜ್ಯೂಸ್ ಸೇವನೆಯ ಆರೋಗ್ಯಯುತ ಪ್ರಯೋಜನಗಳು!

freshly squeezed lemon juice in small bowl

ನಿಂಬೆ ಹಣ್ಣಿನಲ್ಲಿ ಅಡುಗೆಗೆ ಸ್ವಾದವನ್ನು ಹೆಚ್ಚಿಸುವ ಗುಣ ಮಾತ್ರವಲ್ಲದೆ ನಮ್ಮ ಆರೋಗ್ಯದ ಸ್ವಾದವನ್ನು ಹೆಚ್ಚಿಸುವ ಗುಣವೂ ಇದೆ. ಇದರಲ್ಲಿ ಸಿಟ್ರಸ್ ಅಂಶವಿದೆ. ಆದ್ದರಿಂದ ಇದು ಆರೋಗ್ಯಕರ ಎಂದು ಹೆಚ್ಚಿನವರಿಗೆ ಗೊತ್ತಿರುತ್ತದೆ. ಆದರೆ ಒಂದು ನಿಂಬೆಯಲ್ಲಿ 10ಕ್ಕೂ ಹೆಚ್ಚಿನ ಆರೋಗ್ಯವರ್ಧಕ ಗುಣಗಳಿವೆ ಅನ್ನುವುದು ಗೊತ್ತಿದೆಯೇ?

#ರಕ್ತವನ್ನು ಶುದ್ಧೀಕರಿಸುತ್ತದೆ: ನಿಂಬೆರಸವನ್ನು ಕಾಲರಾ, ಮಲೇರಿಯಾದಮತಹ ಸಮಸ್ಯೆಗಳನ್ನು ಸಂಪೂರ್ಣವಾಗಿ ಗುಣ ಪಡಿಸಲು ಬಳಸಲಾಗುವುದು. ಇದು ರಕ್ತವನ್ನು ಶುದ್ಧೀಕರಿಸುತ್ತದೆ.

#ಆರೋಗ್ಯಕರ ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ:ನಿಂಬೆ ನೀರು ಯಕೃತ್ತಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಪಿತ್ತರಸದ ಉತ್ಪಾದನೆಗೆ ಕಾರಣವಾಗುತ್ತದೆ, ಇದು ಆರೋಗ್ಯಕರ ಜೀರ್ಣಕ್ರಿಯೆಗೆ ಅವಶ್ಯಕವಾಗಿದೆ. ಇದಲ್ಲದೆ, ಬೆಚ್ಚಗಿನ ನೀರು ಮತ್ತು ನಿಂಬೆಯ ಸಂಯೋಜನೆಯು ಅರೋಗ್ಯ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ ಮತ್ತು ನಿಂಬೆಯಲ್ಲಿ ಕರಗುವ ಫೈಬರ್ ಪೆಕ್ಟಿನ್ ಇರುವಿಕೆಯು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜೊತೆಗೆ ಇದು ಸಕ್ಕರೆಯ ಅಂಶವನ್ನು ಸಹ ಕಡಿಮೆ ಮಾಡುತ್ತದೆ.

#ಚರ್ಮದ ಸಮಸ್ಯೆಗಳಿಗೆ ರಾಮಬಾಣ : ಮುಖದ ಮೇಲೆ ಉಂಟಾಗುವ ಮೊಡವೆಗಳನ್ನು ಹೋಗಲಾಡಿಸಲು ನಿಂಬೆ ಹಣ್ಣು ಸಹಾಯ ಮಾಡುತ್ತದೆ. ನಿಂಬೆ ಹಣ್ಣಿಗೆ ಒಂದು ಹನಿ ಜೇನುತುಪ್ಪ ಬೆರೆಸಿ, ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ತೊಳೆದರೆ, ಮುಖದ ಮೇಲಿನ ಕಪ್ಪು ಕಲೆಗಳು ಮಾಯವಾಗಿ, ಚರ್ಮ ಕಾಂತಿಯುತವಾಗುತ್ತದೆ. ಡೆಡ್ ಸ್ಕಿನ್ ತೆಗೆಯಲು ನಿಂಬೆ ಹಣ್ಣು ಉತ್ತಮ ಔಷಧ.

#ಮನುಷ್ಯನ ಮೂತ್ರ ಪಿಂಡಗಳಲ್ಲಿ ಅಥವಾ ಕಿಡ್ನಿಗಳಲ್ಲಿ ಕಂಡು ಬರುವ ಕಲ್ಲುಗಳು ಹೆಚ್ಚಾಗಿ ಕ್ಯಾಲ್ಸಿಯಂ ಅಂಶದ ಶೇಖರಣೆಯಿಂದ ಉಂಟಾಗುವ ಘನ ವಸ್ತುಗಳು ಎನಿಸುತ್ತವೆ. ಮನುಷ್ಯನ ದೇಹದಲ್ಲಿ ಉಂಟಾಗುವ ಇಂತಹ ಆರೋಗ್ಯ ಸಮಸ್ಯೆಗಳಿಗೆ ಆಮ್ಲಿಯ ಪದಾರ್ಥಗಳು ಬಹಳ ಚೆನ್ನಾಗಿ ಕೆಲಸ ಮಾಡುತ್ತವೆ ಎಂದು ಹೇಳುತ್ತಾರೆ. ನಿಂಬೆ ಹಣ್ಣಿನಲ್ಲಿ ” ಸಿಟ್ರಿಕ್ ಆಸಿಡ್ ” ಎಂಬ ಆಮ್ಲವಿರುವುದರಿಂದ, ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನ ಅರ್ಧ ಲೋಟ ಲೆಮನ್ ಜ್ಯೂಸ್ ಕುಡಿಯುವುದರಿಂದ ಕಿಡ್ನಿ ಕಲ್ಲುಗಳು ಕರಗುತ್ತವೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಇದರಿಂದ ಮೂತ್ರ ಪಿಂಡಗಳ ಸರಿಯಾದ ಕಾರ್ಯ ನಿರ್ವಹಣೆ ಸಾಧ್ಯವಾಗಿ ದೇಹದಲ್ಲಿನ ವಿಷಕಾರಿ ಅಂಶಗಳು ದೇಹದಿಂದ ಹೊರ ಹೋಗಲು ಸಹಕಾರಿಯಾಗುತ್ತವೆ.

#ಬಾಯಿಯ ದುರ್ನಾತ ತಡೆಯುತ್ತದೆ:ನಿಂಬೆ ಹಣ್ಣಿನ ಜ್ಯೂಸ್​ ಕುಡಿಯುವುದರಿಂದ ಕೆಟ್ಟ ಉಸಿರಾಟವು ಕಡಿಮೆಯಾಗುತ್ತದೆ. ಅಂದರೆ ನಿಂಬೆ ರಸವು ಬಾಯಿಯನ್ನು ಸ್ವಚ್ಛವಾಗಿಡುವ ಮೂಲಕ, ಬಾಯಿಯಿಂದ ಹೊರ ಬರುವ ವಾಸನೆ ದೂರ ಮಾಡುತ್ತದೆ. ಅದರಲ್ಲೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ತೆಗೆದುಕೊಳ್ಳುವುದು ಸೂಕ್ತ.

#ಅತಿಸಾರ ಅಥವಾ ಮಲಬದ್ಧತೆಯಂತಹ ಸಮಸ್ಯೆಗಳಲ್ಲಿ ನಿಂಬೆ ತಕ್ಷಣದ ಪರಿಹಾರವನ್ನು ನೀಡುತ್ತದೆ. ಜೀರ್ಣಕ್ರಿಯೆ ಸರಿಯಾಗಿ ನಡೆಯದಿದ್ರೆ ಪ್ರತಿದಿನ ಬೆಳಿಗ್ಗೆ ಒಂದು ಲೋಟ ನಿಂಬೆ ಪಾನಕವನ್ನು ಸೇವಿಸಿ ಪರಿಹಾರ ಕಾಣಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group