ಕ್ಯಾಲೋರಿ ಹೆಚ್ಚಿರುವ ಆರೋಗ್ಯಕಾರಿ ಆಹಾರಗಳು ಇವು!

ಸಾಮಾನ್ಯ ಬೆಣ್ಣೆಯಲ್ಲಿ ಮಾತ್ರ ಕ್ಯಾಲರಿ ಅಧಿಕವಾಗಿದೆ ಎಂದು ನೀವು ಭಾವಿಸಿದರೆ ಖಂಡಿತವಾಗಿಯೂ ತಪ್ಪು. ನೆಲಗಡಲೆ ಅಥವಾ ಬೀಜದ ಬೆಣ್ಣೆಯಲ್ಲಿ ಕೂಡ ಅಧಿಕ ಪ್ರಮಾಣದ ಕ್ಯಾಲರಿ ಇದೆ. ಒಂದು ಚಮಚ ನೆಲಗಡಲೆ ಬೆಣ್ಣೆಯಲ್ಲಿ 100 ಕ್ಯಾಲರಿ ಇದೆ. ಸಾಮಾನ್ಯ ಬೆಣ್ಣೆಯಲ್ಲಿ ಕೂಡ ಇಷ್ಟೇ ಮಟ್ಟದ ಕ್ಯಾಲರಿ ಇದೆ. ನೆಲಗಡಲೆ ಬೆಣ್ಣೆಯಲ್ಲಿ ಅತ್ಯಧಿಕ ಪ್ರೋಟೀನ್, ನಾರಿನಾಂಶ, ಆರೋಗ್ಯಕಾರಿ ಕೊಬ್ಬು ಹಾಗೂ ಪೈಥೋನ್ಯೂಟ್ರಿಯೆಂಟ್ಸ್ ಗಳಿವೆ.
#ಲೆಟಿಸ್: ಸಲಾಡ್ ನಲ್ಲಿ ಲೆಟಿಸ್ ಸೇರಿಸಿ. ಇದು ಫೈಬರ್, ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ ಹೊಂದಿದೆ. ಪೌಷ್ಟಿಕಾಂಶದ ಜೊತೆಗೆ ಲೆಟಿಸ್ 100 ಗ್ರಾಂಗೆ ಕೇವಲ 15 ಕ್ಯಾಲೊರಿ ಹೊಂದಿದೆ. ಹಾಗಾಗಿ ಇದು ತೂಕ ಇಳಿಕೆಗೆ ಸಹಕಾರಿ.
#ತೂಕ ಹೆಚ್ಚಳಕ್ಕೆ ಅನ್ನ ಪೂರಕವಾದ ಆಹಾರವಾಗಿದೆ. ಪ್ರತಿ ನೂರು ಗ್ರಾಂ ಬಿಳಿ ಅಕ್ಕಿಯಲ್ಲಿ 130 ಕ್ಯಾಲೋರಿಗಳೂ 28 ಗ್ರಾಂ ಕಾರ್ಬೋಹೈಡ್ರೇಟ್ ಸಹಾ ಇದೆ. ತನ್ಮೂಲಕ ತೂಕ ಹೆಚ್ಚಿಸಬಯಸುವ ವ್ಯಕ್ತಿಗಳಿಗೆ ಸೂಕ್ತ ಆಹಾರವಾಗಿದೆ. ತೂಕ ಇಳಿಕೆಯ ಪ್ರಯತ್ನದಲ್ಲಿರುವ ವ್ಯಕ್ತಿಗಳೂ ಮಿತ ಪ್ರಮಾಣದಲ್ಲಿ ಅನ್ನವನ್ನು ಸೇವಿಸಬಹುದು
#ಕ್ವಿನೋವಾ ಎನ್ನುವುದು ಸಿರಿಧಾನ್ಯಗಳ ಪಟ್ಟಿಗೆ ಸೇರಿದೆ. ತೂಕ ಇಳಿಸಲು ಬಯಸುವ ಪ್ರತಿಯೊಬ್ಬರು ಇದನ್ನು ಬಳಕೆ ಮಾಡುವರು. ಕ್ವಿನೊವಾದಲ್ಲಿ ಅತ್ಯಧಿಕ ಪ್ರಮಾಣದ ಕ್ಯಾಲರಿ ಇದೆ. ಒಂದು ಕಪ್ ಕ್ವಿನೊವಾದಲ್ಲಿ ಒಟ್ಟು 222 ಕ್ಯಾಲರಿ ಇದೆ. ಇದು ಒಂದು ಕಪ್ ಕುಚ್ಚಲಕ್ಕಿಗೆ ಸಮಾನವಾಗಿದೆ. 195 ಗ್ರಾಂ ಬೇಯಿಸಿದ ಕುಚ್ಚಲಕ್ಕಿಯಲ್ಲಿ 218 ಕ್ಯಾಲರಿ ಇದೆ. ಅದೇ ರೀತಿಯಾಗಿ ಅಧಿಕ ಮಟ್ಟದ ಪ್ರೋಟೀನ್, ನಾರಿನಾಂಶ, ಕಬ್ಬಿನಾಂಶ, ಸತು, ಥೈಮೆನ್ ಮತ್ತು ವಿಟಮಿನ್ ಬಿ6 ಕೂಡ ಇದೆ.
#ಚೀನೀಕಾಯಿ:ಥೇಟ್ ಕುಂಬಳಕಾಯಿಯಂತೆ ಕಾಣುವ ಚೀನೀಕಾಯಿ 100 ಗ್ರಾಂಗೆ 18 ಕ್ಯಾಲೊರಿ ಹೊಂದಿದೆ. ಇದು ದೇಹದಲ್ಲಿ ಕೆರಳಿಸುವ ಕರುಳಿನ ಸಹಲಕ್ಷಣಗಳನ್ನು ಶಮನಗೊಳಿಸುತ್ತದೆ. ದೇಹದಲ್ಲಿ ನೀರಿನ ಸಮತೋಲನಕ್ಕೆ ಸಹಕಾರಿ.
#ನಿತ್ಯವೂ ಒಂದು ಮಧ್ಯಮ ಗಾತ್ರದ ಬಾಳೆಹಣ್ಣನ್ನು ಸೇವಿಸುವ ಮೂಲಕ 105 ಕ್ಯಾಲೋರಿಗಳು ಮತ್ತು 27 ಗ್ರಾಂ ಕಾರ್ಬೋಹೈಡ್ರೇಟುಗಳು ದೊರಕುತ್ತವೆ. ತಜ್ಞರ ಪ್ರಕಾರ, ನಿತ್ಯವೂ ಒಂದರಿಂದ ಎರಡು ಬಾಳೆಹಣ್ಣುಗಳನ್ನು ಸೇವಿಸುವ ಮೂಲಕ ಆರೋಗ್ಯ ಉತ್ತಮವಾಗಿರುತ್ತದೆ ಹಾಗೂ ನಿತ್ಯದ ಕೆಲಸಗಳಿಗೆ ಅಗತ್ಯ ಶಕ್ತಿಯೂ ದೊರಕುತ್ತದೆ. ಇದನ್ನು ಇನ್ನಷ್ಟು ಪೌಷ್ಟಿಕವಾಗಿಸಲು ಒಂದು ಲೋಟ ಹಾಲನ್ನೂ ಜೊತೆಗೆ ಕುಡಿಯಬಹುದು