ಪತ್ರೊಡೆ ಕೆಸುವಿನ ಎಲೆಯ ಪ್ರಯೋಜನ!

ಮಳೆಗಾಲದಲ್ಲಿ ಇದನ್ನು ತಿಂದರೆ ಒಳ್ಳೆಯದು, ಮೈ ಬೆಚ್ಚಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆದರೆ ಕೆಸುವಿನ ಎಲೆ ಮೈ ಬೆಚ್ಚಗಿಡುವುದು ಮಾತ್ರವಲ್ಲ ಇನ್ನೂ ಅನೇಕ ಆರೋಗ್ಯಕರ ಪ್ರಯೋಜನಗಳಿವೆ ಎಂಬುವುದು ನಿಮಗೆ ಗೊತ್ತೇ?ಇನ್ನು ಕೆಸುವಿನ ಎಲೆಯ ಸಾರು, ಗೊಜ್ಜು, ಪತ್ರೊಡೆ ಸವಿಯುವಾಗ ವಿಶಿಷ್ಟ ರುಚಿಯ ಜೊತೆಗೆ ಈ ಪ್ರಮುಖ ಪ್ರಯೋಜನಗಳು ದೊರೆಯುತ್ತವೆ ಎಂಬುವುದು ನೆನಪಿರಲಿ
#ದೇಹದಲ್ಲಿರುವ ಕಶ್ಮಲಗಳನ್ನು ಹೊರ ಹಾಕುತ್ತದೆ:ದೇಹದಲ್ಲಿ ಕಶ್ಮಲಗಳು ಹೆಚ್ಚಾದಾಗ ದೇಹದಲ್ಲಿ ಫ್ರೀ ರ‍್ಯಾಡಿಕಲ್ ಸಂಗ್ರಹವಾಗುತ್ತಾ ಸಾಗುತ್ತದೆ. ಇದರಿಂದಾಗಿ ಹೃದಯ ತೊಂದರೆ, ಸಂಧಿವಾತ, ಕ್ಯಾನ್ಸರ್ ಮುಂತಾದ ಸಮಸ್ಯೆ ಉಂಟಾಗುವುದು. ಫ್ರೀ ರ‍್ಯಾಡಿಕಲ್ಸ್ ಆಹಾರ ವಿಭಜನೆ ಆಗುವಾಗ ಅಥವಾ ತಂಬಾಕು, ಧೂಮಪಾನ ಅಥವಾ ವಿಕಿರಣಗಳು ಸೋಕಿದಾಗ ಉಂಟಾಗುತ್ತದೆ.
#ಮೊಡವೆ ಹೋಗಲಾಡಿಸುತ್ತೆ:ಕೆಸುವಿನ ಎಲೆಯಲ್ಲಿರುವ ಸತುವಿನಂಶ ಮೊಡವೆ ಹೋಗಲಾಡಿಸಲು ಸಹಕಾರಿ. ಇದು ಟೆಸ್ಟೋಸ್ಟಿರೋನ್ ನಿಯಂತ್ರಣದಲ್ಲಿಡುವಲ್ಲಿ ಸಹಕಾರಿ. ಇದು ತ್ವಚೆಯಲ್ಲಿ ಎಣ್ಣೆಯಂಶ ಉತ್ಪತ್ತಿಯನ್ನು ನಿಯಂತ್ರಿಸುತ್ತದೆ. ಸತು ಬಿಳಿ ರಕ್ತ ಕಣಗಳ ಸಂಖ್ಯೆ ಹೆಚ್ಚು ಮಾಡುತ್ತದೆ ಹಾಗೂ ಸೋಂಕು ತಡೆಗಟ್ಟುತ್ತದೆ. ಇನ್ನು ಮೊಡವೆಯಿಂದ ಉಂಟಾದ ಕಲೆ ಹೋಗಲಾಡಿಸುವಲ್ಲಿಯೂ ಇದು ಸಹಕಾರಿ.
#ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು:ವಿಟಮಿನ್ ಇ ವಯಸ್ಸಾದಾಗ ಉಂಟಾಗುವ ಕಣ್ಣಿನ ಪೊರೆ ಸಮಸ್ಯೆ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. ಬೀಟಾ ಕೆರೋಟಿನ್, ವಿಟಮಿನ್ ಸಿ, ಸತು ಈ ಅಂಶಗಳು ದೃಷ್ಟಿ ದೋಷ ಉಂಟಾಗುವುದನ್ನು ತಡೆಗಟ್ಟುವಲ್ಲಿ ಸಹಕಾರಿ. ವಿಟಮಿನ್ ಎ ಮತ್ತು ವಿಟಮಿನ್ ಇ ಕಣ್ಣಿನ ಆರೋಗ್ಯ ಕಾಪಾಡುವಲ್ಲಿ ಸಹಕಾರಿ.
#ಸ್ನಾಯು ಸೆಳೆತ ತಡೆಗಟ್ಟುತ್ತದೆ;ಮೆಗ್ನಿಷ್ಯಿಯಂ ಬೆನ್ನು ನೋವು ಕಡಿಮೆ ಮಾಡುತ್ತದೆ. ಕಿಡ್ನಿಗೆ ಒತ್ತಡ ಬೀಳದಂತೆ ತಡೆಗಟ್ಟುತ್ತದೆ, ಸ್ನಾಯುಗಳ ನರಗಳ ಆರೋಗ್ಯ ವೃದ್ಧಿಸುತ್ತದೆ. ಮೆಗ್ನಿಷ್ಯಿಯಂ ಕೊರತೆ ಉಂಟಾದರೆ ತಲೆಸುತ್ತು, ಕಾಲುಗಳಲ್ಲಿ ಸ್ನಾಯು ಸೆಳೆತ ಮುಂತಾದ ಸಮಸ್ಯೆ ಕಮಡು ಬರುವುದು.
#ಹೀಮೋಗ್ಲೋಬಿನ್ ಉತ್ಪತ್ತಿಗೆ ಸಹಕಾರಿ:ದೇಹದಲ್ಲಿ ಹೀಮೋಗ್ಲೋಬಿನ್ ಉತ್ಪತ್ತಿಗೆ ಕಬ್ಬಿಣದಂಶ ಅವಶ್ಯಕ. ಕಬ್ಬಿಣದಂಶ ರಕ್ತಹೀನತೆ ಸಮಸ್ಯೆ ಉಂಟಾಗದಂತೆ ತಡೆಗಟ್ಟುವಲ್ಲಿ ಸಹಕಾರಿ