ಕೆಸುವಿನ ಗಡ್ಡೆಯನ್ನು ಸೇವಿಸಿದರೆ ಈ ಪ್ರಯೋಜನಗಳನ್ನು ಪಡೆಯಬಹುದು!

ಸಾಮಾನ್ಯವಾಗಿ ಕೆಸುವಿನ ಗಡ್ಡೆಯನ್ನು ಸೇವಿಸಿದರೆ ಗ್ಯಾಸ್ಟ್ರಿಕ್ ಅಂತ ಕೇಳಿರುತ್ತೇವೆ. ಆದರೆ ಇದರ ಸತ್ಯಾಂಶ ಇಲ್ಲಿದೆ. ರಕ್ತಕ್ಕೆ ಕಬ್ಬಿಣದ ಅಂಶ ಮತ್ತು ನಾರಿನ ಅಂಶ ಹೆಚ್ಚಾಗಿ ಬೇಕಾಗಿರುತ್ತದೆ. ಇದರಿಂದ ಹಿಮೋಗ್ಲೋಬಿನ್ ಹೆಚ್ಚಾಗುತ್ತದೆ. ಹಾಗಾಗಿ ವೀಕ್ನೆಸ್ ಎಂಬ ಕಾರಣದಿಂದ ವೈದ್ಯರ ಬಳಿ ಹೋದಾಗ ಅವರು ಹೆಚ್ಚಾಗಿ ಸೂಚಿಸುವುದು ಹಿಮೋಗ್ಲೋಬಿನ್ಯುಕ್ತ ಆಹಾರವನ್ನು ಸೇವಿಸಿ ಎಂದು. ಇದಕ್ಕೆ ಉತ್ತಮ ಹಸಿ ತರಕಾರಿಯಲ್ಲಿ ಒಂದಾಗಿರುವುದು ಕೆಸು ಗೆಡ್ಡೆ. ಇದನ್ನು ಹಾಗೇ ತಿನ್ನುವುದು ಕೊಂಚ ಕಷ್ಟ. ಆದರೆ ತುಂಬಾ ಒಳಿತು ಇದರ ಇನ್ನಷ್ಟು ಪ್ರಯೋಜನಗಳನ್ನು ತಿಳಿಯೋಣ ಬನ್ನಿ!
#ಹೃದಯದ ಕಾಯಿಲೆಯ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆಇದರಲ್ಲಿರುವ ನಾರಿನಂಶ ಹಾಗೂ ಪಿಷ್ಠದ ಅಂಶ ಹೃದಯ ಸಂಬಂಧಿ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಅಧಿಕ ನಾರಿನಂಶವಿರುವ ಆಹಾರವನ್ನು ತಿಂದಷ್ಟೂ ಹೃದಯ ಸಂಬಂಧಿ ಕಾಯಿಲೆಗಳು ಕಾಡುವುದು ಕಡಿಮೆ ಎಂದು ಸಂಶೋಧನೆಗಳು ಹೇಳಿವೆ.ಒಂದು ಸಂಶೋಧನೆ ಪ್ರಕಾರ ದಿನದಲ್ಲಿ ಸೇವಿಸಬೇಕಾದ ನಾರಿನಂಶಕ್ಕಿಂತ 10ಗ್ರಾಂ ಅಧಿಕ ನಾರಿನಂಶದ ಆಹಾರ ತಿಂದರೆ ಹೃದಯ ಸಂಬಂಧಿ ಕಾಯಿಲೆ ಕಾಡುವುದು ಶೇ. 17ರಷ್ಟು ಕಡಿಮೆಯಾಗುತ್ತದೆ ಎಂದು ಹೇಳಿದೆ.
#ಕೆಸುವಿನ ಗಡ್ಡೆಯ ನಿಯಮಿತ ಬಳಕೆಯಿಂದ ಇದರಲ್ಲಿನ ಆಂಟಿ ಆಕ್ಸಿಡೆಂಟ್ ಅಂಶಗಳು ಕ್ಯಾನ್ಸರ್ ಉಂಟು ಮಾಡುವ ಜೀವಕೋಶಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ.ಮುಖ್ಯವಾಗಿ ಕೆಸುವಿನ ಗಡ್ಡೆಯ ಸೇವನೆಯಿಂದ ಬಾಯಿಯ ಮತ್ತು ಶ್ವಾಸಕೋಶದ ಕ್ಯಾನ್ಸರ್‌ನ್ನು ತಡೆಗಟ್ಟಬಹುದಾಗಿದೆ.
#ಕೆಸುವಿನ ಗಡ್ಡೆಯು ಆಹಾರದ ಫೈಬರ್, ಕಾರ್ಬೋಹೈಡ್ರೇಟ್‌ಗಳ ಜೀರ್ಣಕ್ರಿಯೆ ಮತ್ತು ಗ್ಲೂಕೋಸ್‌ನ್ನು ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಇದು ಪ್ರತಿಯಾಗಿ, ದೇಹವು ಇನ್ಸುಲಿನ್ ಬಿಡುಗಡೆಯನ್ನು ನಿಯಂತ್ರಿಸಲು ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಉತ್ತಮ ಗ್ಲೈಸೆಮಿಕ್ ನಿಯಂತ್ರಣವನ್ನು ಒದಗಿಸುತ್ತದೆ. ಹೀಗಾಗಿ ಮಧುಮೇಹಿಗಳು ಕೆಸುವಿನ ಗಡ್ಡೆಯನ್ನು ಸೇವನೆ ಮಾಡಬಹುದು.
#ತೂಕ ಇಳಿಕೆಗೆ ಸಹಕಾರಿ:ನಾರಿನಂಶ ಅಧಿಕವಿರುವ ತರಕಾರಿಗಳು ತೂಕ ಇಳಿಕೆಗೆ ತುಂಬಾನೇ ಸಹಕಾರಿ. ಯಾರು ತೂಕ ಕಡಿಮೆಮಾಡಬೇಕೆಂದು ಬಯಸುತ್ತಾರೋ ಅವರು ತಮ್ಮ ಆಹಾರಕ್ರಮದಲ್ಲಿ ಅತ್ಯಧಿಕ ನಾರಿನಂಶವಿರುವ ಆಹಾರ ಸೇರಿಸಬೇಕು. ನಾರಿನಂಶವಿರುವ ಆಹಾರ ನಿಧಾನಕ್ಕೆ ಜೀರ್ಣವಾಗುವುದರಿಂದ ಬೇಗನೆ ಹಸಿವು ಉಂಟಾಗುವುದಿಲ್ಲ, ಇದರಿಂದ ದಿನದಲ್ಲಿ ತೆಗೆದುಕೊಳ್ಳುವ ಕ್ಯಾಲೋರಿ ಪ್ರಮಾಣವೂ ಕಡಿಮೆಯಾಗುತ್ತದೆ ಹೀಗಾಗಿ ತೂಕ ಇಳಿಕೆಗೆ ಸಹಕಾರಿಯಾಗಿದೆ.