ಕಣ್ಣಿನ ತುರಿಕೆಯ ಸಮಸ್ಯೆಯೇ ಇಲ್ಲಿವೆ ನೋಡಿ ಕೆಲವು ಪರಿಹಾರಗಳು!

ಕಣ್ಣಿನ ತುರಿಕೆಯ ಸಮಸ್ಯೆ ಕೆಲವರಿಗೆ ಆಗಾಗ ಕಾಡುತ್ತಿರುತ್ತದೆ. ಇದು ಸಾಮಾನ್ಯವಾದರೂ ಮತ್ತೆ ಮತ್ತೆ ಕಾಣಿಸಿ ಕೊಂಡರೆ ಕಣ್ಣಿಗೆ ಅಪಾಯ. ಕಲುಷಿತ ವಾತಾವರಣ, ಗಾಳಿಯಲ್ಲಿ ತೂರಿಬರುವ ಧೂಳು, ಮಣ್ಣಿನ ಕಣ, ಕಣ್ಣಿನ ಸೋಂಕು ಮತ್ತು ಅಲರ್ಜಿ ಇದಕ್ಕೆ ಮುಖ್ಯ ಕಾರಣ. ಕಣ್ಣಿನ ಒಳಗೆ ಹಾಗೂ ಸುತ್ತಲೂ ಇರುವ ಕಣ್ಣಿನ ತುರಿಕೆಗಳು ಕಣ್ಣನ್ನುತುರಿಸುವಂತೆ ಮಾಡುತ್ತದೆ. ಕಣ್ಣಿನ ತುರಿಕೆಯನ್ನು ತಡೆಗಟ್ಟಲು ಹಲವು ದಾರಿಗಳಿವೆ ಅಂತಹ ಕೆಲವು ಸಲಹೆ ಇಲ್ಲಿವೆ ನೋಡಿ
#ಕಣ್ಣಿಗೆ ಕಾಸ್ಮೆಟಿಕ್ ಬೇಡ: ಕಣ್ಣಿನ ಶೃಂಗಾರಕ್ಕೆಂದು ಬಳಸುವ ಅನೇಕ ಕಾಸ್ಮೆಟಿಕ್ ಗಳು ಕಣ್ಣಿಗೆ ಅಲರ್ಜಿ ಉಂಟು ಮಾಡಬಹುದು ಅಥವಾ ನೀವು ಕಣ್ಣಿಗೆ ಕಾಸ್ಮೆಟಿಕ್ ಹಚ್ಚಿಕೊಂಡ ತಕ್ಷಣವೇ ಏನಾದರೂ ತುರಿಕೆ ಉಂಟು ಮಾಡಿದರೆ ಅದು ಅಲರ್ಜಿಯ ಲಕ್ಷಣವೆಂದು ದೂರವಿರಿಸಿದರೆ ಉತ್ತಮ.
#ಶುದ್ಧವಾದ, ತೆಳುವಾದ ಬಟ್ಟೆಯನ್ನು ತಣ್ಣನೆಯ ನೀರಿನಲ್ಲಿ ಅದ್ದಿ, ಕಣ್ಣಿನ ಕೆಳಗಿನ ಭಾಗಕ್ಕೆ ಮೃದುವಾಗಿ ಒತ್ತಿ ಕೆಲವು ನಿಮಿಷಗಳ ಕಾಲ ಹಿಡಿದುಕೊಳ್ಳಿ
#ಬೆಡ್ ಶೀಟ್ ಮತ್ತು ದಿಂಬಿನ ಕವರ್ ಬದಲಿಸುತ್ತಿರಿ: ವಾರಕ್ಕೊಮ್ಮೆಯಾದರೂ ನೀವು ಮಲಗುವ ಹಾಸಿಗೆಯ ಬೆಡ್ ಶೀಟ್ ಮತ್ತು ದಿಂಬಿನ ಕವರ್ ಗಳನ್ನು ಬಿಸಿ ನೀರಿನಲ್ಲಿ ನೆನೆಸಿ ಒಗೆಯಿರಿ. ಬಿಸಿ ನೀರು ಧೂಳಿನಿಂದ ಬರುವ ಕೀಟಾಣುಗಳನ್ನು ನಿವಾರಿಸುತ್ತದೆ.
#ಹಸಿ ಆಲೂಗಡ್ಡೆ:ಕಣ್ಣಿನ ತುರಿಕೆ ಸಮಸ್ಯೆಯನ್ನು ನಿವಾರಿಸಲು ಹಸಿ ಆಲೂಗಡ್ಡೆಯೂ ಔಷಧ ವಾಗಿದೆ. ಸೌತೆಕಾಯಿಯ ಪರಿಹಾರದಂತೆ ಆಲೂಗಡ್ಡೆಯನ್ನು ತುಂಡು ಮಾಡಿ ಎರಡರಿಂದ ನಾಲ್ಕು ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಡಬೇಕು. ಬಳಿಕ 10ರಿಂದ 15 ನಿಮಿಷಗಳ ಕಾಲ ಕಣ್ಣಿನ ಮೇಲೆ ಇಟ್ಟರೆ ಸಮಸ್ಯೆ ನಿವಾರಣೆಯಾಗುವುದು.
#ಕೆಂಪಾದ ಕಣ್ಣುಗಳಿಗೆ ಹಾಲು ಮತ್ತೊಂದು ಪರಿಣಾಮಕಾರಿ ಮನೆಮದ್ದು. ತಣ್ಣನೆಯ ಹಾಲು ಸುಡುವ ಸಂವೇದನೆಯನ್ನು ಶಮನಗೊಳಿಸುತ್ತದೆ ಮತ್ತು ಕಣ್ಣುಗಳಲ್ಲಿ ತುರಿಕೆಯನ್ನು ನಿವಾರಿಸುತ್ತದೆ.ತಣ್ಣನೆಯ ಹಾಲಿನಲ್ಲಿ ಸ್ವಚ್ಛವಾದ ಹತ್ತಿ ಉಂಡೆಯನ್ನು ಅದ್ದಿ. ನಿಮ್ಮ ಮುಚ್ಚಿದ ಕಣ್ಣುಗಳ ಸುತ್ತಲೂ ಅದನ್ನು ಉಜ್ಜಿಕೊಳ್ಳಿ. ಇದನ್ನು ದಿನಕ್ಕೆ 2 ಅಥವಾ 3 ಬಾರಿ ಮಾಡಿ.