ಬೆನ್ನು ನೋವು ನಿವಾರಣೆಗೆ ಇವುಗಳನ್ನು ಪಾಲಿಸಿ!

ಬೆನ್ನು ನೋವು ಕಾಣಿಸಿಕೊಂಡಾಗ ಅದರ ಬಗ್ಗೆ ನಿರ್ಲಕ್ಷ್ಯವಹಿಸಿದರೆ, ಆ ನೋವು ತುಂಬಾ ಹೆಚ್ಚಾಗಬಹುದು. ಇದುವೇ ಮುಂದೆ ಮಲಗಲು, ಕುಳಿತುಕೊಳ್ಳಲು ಕಷ್ಟಕರವಾದ ಸಮಸ್ಯೆಯನ್ನು ಉಂಟು ಮಾಡಬಹುದು. ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಬೆನ್ನು ನೋವು ನಿವಾರಣೆಗೆ ಯೋಗ ಉತ್ತಮ ಪರಿಹಾರ. ಇದಲ್ಲದೆ ಇನ್ನು ಕೆಲವು ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಬೆನ್ನು ನೋವಿನಿಂದ ಮುಕ್ತಿ ಪಡೆಯಬಹುದು ಅಂತಹ ಕೆಲವು ಪರಿಹಾರಗಳ ಪಟ್ಟಿ ಇಲ್ಲಿದೆ ನೋಡಿ
#ಧೂಮ ಪಾನ ಬೆನ್ನು ನೋವನ್ನು ತೀವ್ರಗೊಳಿಸುತ್ತದೆ. ಬೆನ್ನು ನೋವು ಇರುವವರು ಧೂಮ ಪಾನ ಮಾಡದಿರಿ. ಗಾಯಗೊಂಡ ಪ್ರದೇಶಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸುವುದು. ಹೃದಯ ರೋಗ ಮತ್ತು ಉಸಿರಾಟದ ತೊಂದರೆಯನ್ನು ದ್ವಿಗುಣಗೊಳ್ಳುತ್ತದೆ. ಮೂಳೆಗಳ ಆರೋಗ್ಯವನ್ನು ಹಾಳು ಮಾಡುವುದು.
#ಎಣ್ಣೆಯಲ್ಲಿ ಕರ್ಪೂರವನ್ನು ಬೆರೆಸಿ ಐದು ನಿಮಿಷ ಕುದಿಸಿ ಅದನ್ನು ತಣ್ಣಗಾಗಿಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿ ಬೆನ್ನು ನೋವು ನಿವಾರಣೆಗಾಗಿ ನಿದ್ದೆ ಮಾಡುವುದಕ್ಕೂ ಮುನ್ನ ವಾರಕ್ಕೆ ಎರಡು ಬಾರಿ ಈ ಎಣ್ಣೆಯನ್ನು ಮಸಾಜ್ ಮಾಡಿ.
#ಗೋಡೆಗೆ ಮುಖ ಮಾಡಿ ನಿಂತುಕೊಳ್ಳಿ. ನಿಮ್ಮ ಎರಡೂ ಕೈಗಳ ಹಸ್ತಗಳನ್ನು ಗೋಡೆಯ ಮೇಲಿಡಿ. ಮುಖವನ್ನು ಮೇಲಕ್ಕೆತ್ತಿ ಮತ್ತು ನಿಧಾನವಾಗಿ ಬೆನ್ನು ಹಿಂದಕ್ಕೆ ಬಾಗಿಸಿ. ಈ ರೀತಿಯ ವ್ಯಾಯಾಮ ಮಾಡುವುದರ ಈ ಮೂಲಕ ನಿಮ್ಮ ಬೆನ್ನಿನ ನೋವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.
#ಪ್ರತಿದಿನ ಕನಿಷ್ಠ ಎಂದರೂ 30 ನಿಮಿಷಗಳ ವ್ಯಾಯಾಮ ಮಾಡಿ. ವ್ಯಾಯಾಮ ಮಾಡುವುದರಿಂದ ಆಹಾರ ಜೀರ್ಣವಾಗುತ್ತದೆ ಮತ್ತು ಮೂಳೆಗಳು ಆರೋಗ್ಯಕರವಾಗಿರುತ್ತದೆ. ಇದು ದೇಹದ ನೋವಿನ ಸಮಸ್ಯೆಯನ್ನೂ ದೂರ ಮಾಡುತ್ತದೆ.
#ನೀರು: ನಿರ್ಜಲೀಕರಣವು ಸ್ನಾಯು ಬಿಗಿತ ಮತ್ತು ಕುತ್ತಿಗೆ ಮತ್ತು ಮೇಲಿನ ಬೆನ್ನಿನ ಬಿಗಿತವನ್ನು ಉಂಟುಮಾಡುವುದರಿಂದ ಸ್ವತಃ ರೀಹೈಡ್ರೇಟ್ ಅನ್ನು ಸೇರಿಸಿಕೊಳ್ಳುವುದು ಸಹ ಬಹಳ ಮುಖ್ಯ. ಒಬ್ಬರು ಪ್ರತಿದಿನ ಕುಡಿಯಬೇಕಾದ ನೀರಿನ ಪ್ರಮಾಣವು ಹಲವಾರು ಅಂಶಗಳ ಮೇಲೆ ಬದಲಾಗುತ್ತದೆಯಾದರೂ, ನೀವು ಒಂದು ದಿನದಲ್ಲಿ 3 ಲೀಟರ್ ನೀರನ್ನು ಸುರಕ್ಷಿತವಾಗಿ ಕುಡಿಯಬಹುದು.