ಕಿವಿ ನೋವಿಗೆ ಪರಿಹಾರ ಕಂಡುಕೊಳ್ಳಲು ಈ ಮನೆ ಮದ್ದು!

ಕಿವಿ ನೋವು(Pain), ತುರಿಕೆ ಅಥವಾ ಊತಕ್ಕೆ ಚಿಕಿತ್ಸೆ ಏನು? ಕಿವಿಯಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೆ, ನೀವು ತಕ್ಷಣ ವೈದ್ಯರನ್ನು ಭೇಟಿಯಾಗಬೇಕು ಎಂಬುದನ್ನು ನೆನಪಿನಲ್ಲಿಡಿ. ಆದಾಗ್ಯೂ, ಕಿವಿ ನೋವು ಮತ್ತು ಇತರ ಸಮಸ್ಯೆಗಳಿಂದ ನಿಮಗೆ ಪರಿಹಾರವನ್ನು ನೀಡುವ ಕೆಲವು ಮನೆಮದ್ದುಗಳಿವೆ. ಆದರೆ ಇವುಗಳನ್ನು ಬಳಕೆ ಮಾಡೋ ಮುನ್ನ ವೈದ್ಯರನ್ನು ಕಂಡರೆ ಉತ್ತಮ.
#ಸಾಸಿವೆ ಎಣ್ಣೆ- ಸಾಸಿವೆ ಎಣ್ಣೆಯನ್ನು (Mustard oil) ಕಿವಿ ನೋವಿಗೆ ಚಿಕಿತ್ಸೆ ನೀಡಲು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಅದರ ಕೆಲವು ಹನಿಗಳನ್ನು ಪೀಡಿತ ಕಿವಿಗೆ ಹಾಕಿ. ಹೇಗಾದರೂ, ಸಮಸ್ಯೆ ಗಂಭೀರವಾಗಿದ್ದರೆ, ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.
#ಸಣ್ಣ ಈರುಳ್ಳಿಯನ್ನು ತೆಗೆದುಕೊಂಡು ಅದನ್ನು ಕತ್ತರಿಸಿಕೊಳ್ಳಿ. ಮೈಕ್ರೋವೇವ್‌ನಲ್ಲಿ 2 ನಿಮಿಷಗಳಷ್ಟು ಕಾಲ ಬಿಸಿ ಮಾಡಿಕೊಳ್ಳಿ. ಅದು ತಣ್ಣಗಾದ ನಂತರ, ರಸವನ್ನು ಹಿಂಡಿ ತೆಗೆಯಿರಿ. ನೋವಿರುವ ಕಿವಿಗೆ 2-3 ಹನಿ ಹಾಕಿಕೊಳ್ಳಿ. ನಂತರ ಮತ್ತೊಂದು ಬದಿಗೆ ಮಲಗಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಕಿವಿಗೆ ಸರಿಯಾಗಿ ಮದ್ದು ತಲುಪುತ್ತದೆ.
#ಅಲೋವೆರಾ(Aloevera)ಕಿವಿಗಳಲ್ಲಿ ತುರಿಕೆ ಇದ್ದರೆ, ಅಲೋವೆರಾ ಸಸ್ಯವು ಅದ್ಭುತ ಮಾಡುತ್ತೆ. ತಲೆಯನ್ನು ಒಂದು ಬದಿಗೆ ವಾಲಿಸಿ, ನೀವು ಮೂರರಿಂದ ನಾಲ್ಕು ಹನಿ ಅಲೋವೆರಾ ಜೆಲ್ ಅನ್ನು ಕಿವಿಯಲ್ಲಿ ಹಾಕಬಹುದು. ಅದನ್ನು ಹೊರತೆಗೆಯುವ ಮೊದಲು ಅದನ್ನು ಕೆಲವು ಸೆಕೆಂಡುಗಳ ಕಾಲ ಹಾಗೆಯೇ ಬಿಡಿ. ಅಲೋವೆರಾ ಒಳಕಿವಿಯೊಳಗಿನ pH ಮಟ್ಟವನ್ನು ಸುಧಾರಿಸುತ್ತೆ. ಇದರ ಉರಿಯೂತ ಶಮನಕಾರಿ ಗುಣಲಕ್ಷಣ ಒಣ, ತುರಿಕೆ, ಕಿರಿಕಿರಿ ಉಂಟುಮಾಡುವ ಕಿವಿ ಸಮಸ್ಯೆಯನ್ನು ದೂರ ಮಾಡುತ್ತೆ
#ಶುಂಠಿಯಲ್ಲಿಯೂ ಔಷಧೀಯ ಗುಣಗಳಿವೆ. ಅಲ್ಲದೇ ಇದು ಉತ್ತಮ ಉರಿಯೂತ ನಿವಾರಕ ಮತ್ತು ಗುಣಪಡಿಸುವ ಗುಣಗಳನ್ನು ಹೊಂದಿದೆ.ಇದರ ರಸ ತೀರಾ ಪ್ರಬಲವಾಗಿರುವ ಕಾರಣ ನೇರವಾಗಿ ಎಂದಿಗೂ ಕಿವಿಗೆ ಹಾಕಬಾರದು.ಬದಲಿಗೆ, ಸಮಪ್ರಮಾಣದ ಆಲಿವ್ ಎಣ್ಣೆಯನ್ನು ಬೆರೆಸಿ ಒಂದು ಚಿಕ್ಕ ಬಾಟಲಿಯಲ್ಲಿ ಸಂಗ್ರಹಿಸಿ.ಈ ಮಿಶ್ರಣವನ್ನು ಸೋಂಕು ಎದುರಾಗಿರುವ ಕಿವಿಗೆ ನಿತ್ಯವೂ ಮೂರರಿಂದ ನಾಲ್ಕು ತೊಟ್ಟುಗಳಷ್ಟು ಬಿಟ್ಟುಕೊಳ್ಳಿ.
ತುಳಸಿ ಎಲೆಯಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇದನ್ನ ಹಲವಾರು ವರ್ಷಗಳಿಂದ ಬಳಕೆ ಮಾಡಲಾಗುತ್ತಿದೆ ಕೆಲ ತುಳಸಿ ಎಲೆಗಳನ್ನು ಜಜ್ಜಿಕೊಂಡು ರಸ ತೆಗೆದುಕೊಳ್ಳಿ. ಆ ರಸವನ್ನು ಕಿವಿಗೆ ಹಾಕಿದರೆ ನಿಮ್ಮ ಕಿವಿ ನೋವಿಗೆ ಮುಕ್ತಿ ಸಿಗುತ್ತದೆ.
#ಕಿವಿ ನೋವನ್ನು ಕೂಡಲೇ ಪರಿಹರಿಸಲು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಬಿಳಿ ವಿನೇಗರ್ ಅನ್ನು ಮಿಶ್ರ ಮಾಡಿ. ನೋವಿರುವ ಕಿವಿಗೆ ಹಾಕಿ. ನಂತರ ಅದನ್ನು ಸರಿಯಾಗಿ ಒಣಗಿಸಿಕೊಳ್ಳಿ.
#ಬೆಳ್ಳುಳ್ಳಿಯ ಎಸಳುಗಳನ್ನು ಸುಲಿದು ಚೆನ್ನಾಗಿ ಜಜ್ಜಿಕೊಳ್ಳಿ. ಇನ್ನು ಒಂದು ಚಿಕ್ಕ ಬಾಣಲೆಯಲ್ಲಿ ಮೂರು ನಾಲ್ಕು ಚಮಚ ಎಳ್ಳೆಣ್ಣೆ ಹಾಕಿ ಬಿಸಿಮಾಡಿ. ಎಣ್ಣೆ ಬಿಸಿಯಾದ ನಂತರ ಅದಕ್ಕೆ ಬೆಳ್ಳುಳ್ಳಿ ಹಾಕಿ, ಆರಲು ಬಿಡಿ. ಎಣ್ಣೆ ಆರಿದ ನಂತರ ಕಿವಿಗೆ 2 ರಿಂದ 3 ಹನಿ ಬಿಟ್ಟುಕೊಳ್ಳಿ. ಇದನ್ನ 2 ರಿಂದ 3 ಬಾರಿ ಮಾಡುವುದರಿಂದ ಕಿವಿ ನೋವಿಗೆ ಬೇಗ ಪ್ರಯೋಜನ ಸಿಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ.