ಪೌಷ್ಟಿಕಾಂಶದ ಆಗರವಾದ ಮೆಂತೆ ಸೊಪ್ಪಿನ ಉಪಯೋಗಗಳು!

ಪೌಷ್ಟಿಕಾಂಶದ ಆಗರವಾದ ಮೆಂತೆಯ ಉಪಯೋಗಗಳು ಹಲವಾರು. ಹೊಟ್ಟೆ ನೋವು, ಪಿತ್ತ, ಅಜೀರ್ಣ, ಗ್ಯಾಸ್ ಹಾಗೂ ತ್ವಚೆಯ ಸಮಸ್ಯೆ ಸೇರಿದಂತೆ ಇನ್ನೂ ಅನೇಕ ತೊಂದರೆಗಳಿಗೆ ಮೆಂತೆಯಿಂದ ಮನೆ ಔಷಧಿ ತಯಾರಿಸಬಹುದು. ಇಷ್ಟೇ ಅಲ್ಲದೆ ಇನ್ನೂ ಯಾವೆಲ್ಲಾ ಉಪಯೋಗ ಪಡೆದುಕೊಳ್ಳಬಹುದು ಎನ್ನುವ ವಿವರಣೆ ಇಲ್ಲಿದೆ ನೋಡಿ!
#ಇದು ದೇಹದಲ್ಲಿನ ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಅದರ ಉರಿಯೂತದ ಗುಣಲಕ್ಷಣಗಳು ಸಂಧಿವಾತ ಮತ್ತು ಆಸ್ಟಿಯೊಪೊರೋಸಿಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಮೆಂತ್ಯ ಎಲೆಗಳು ಫೈಟೊನ್ಯೂಟ್ರಿಯೆಂಟ್‌ಗಳಲ್ಲಿ ಸಮೃದ್ಧವಾಗಿವೆ, ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ.
#ರಕ್ತಹೀನತೆ ಸಮಸ್ಯೆ ನಿವಾರಣೆಗೆ: ದೇಹದಲ್ಲಿ ಕಬ್ಬಿಣದ ಕೊರತೆ, ರಕ್ತಹೀನತೆ ಸಮಸ್ಯೆಇರುವವರಿಗೆ ಮೆಂತ್ಯ ಸೊಪ್ಪು ಯಾವುದೇ ಔಷಧಿಗಿಂತ ಕಡಿಮೆ ಇಲ್ಲ. ಮೆಂತ್ಯ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಹೇರಳವಾಗಿದ್ದು ಇದು ಹಿಮೊಗ್ಲೋಬಿನ್ ಅನ್ನು ಹೆಚ್ಚಿಸಲು ತುಂಬಾ ಸಹಕಾರಿ ಆಗಿದೆ.
#ಉರಿಯೂತ ಕಡಿಮೆ ಮಾಡಲು: ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಗುಣ ಹೊಂದಿರುವ ಮೆಂತ್ಯೆಯು ದೀರ್ಘಕಾಲಿನ ಕೆಮ್ಮು, ಬೊಕ್ಕೆ, ಬ್ರಾಂಕ್ರೈಟಿಸ್ ಮತ್ತು ಇತರ ಹಲವಾರು ಚರ್ಮದ ಸಮಸ್ಯೆ ನಿವಾರಣೆ ಮಾಡುವುದು. ಬೊಕ್ಕೆ, ದೇಹದ ನೋವು, ಕಿಡ್ನಿ ಸಮಸ್ಯೆ ಮತ್ತು ಊತವನ್ನು ಇದು ಕಡಿಮೆ ಮಾಡುವುದು.
#ಎಳೆಯ ಮಗುವಿಗೆ ಎದೆಹಾಲು ಮಾತ್ರ ಆಹಾರದ ಮೂಲವಾಗಿರುವುದು. ಎದೆಹಾಲಿನಲ್ಲಿ ಇರುವಂತಹ ಪೋಷಕಾಂಶಗಳು ಬೇರೆಲ್ಲೂ ಸಿಗದು. ಮೆಂತ್ಯೆಯು ಬಾಣಂತಿಯರಲ್ಲಿ ಎದೆಹಾಲು ಹೆಚ್ಚು ಮಾಡುವ ಗುಣ ಹೊಂದಿದೆ. ಇದನ್ನು ತರಕಾರಿ ಅಥವಾ ಗಿಡಮೂಲಿಕೆ ಚಾದ ರೂಪದಲ್ಲಿ ಬಳಕೆ ಮಾಡಬಹುದು. ಇದರಿಂದ ಎದೆಹಾಲು ಉತ್ಪತ್ತಿ ವೃದ್ಧಿಸುವುದು. ಇದರ ಬಗ್ಗೆ ವೈದ್ಯರ ಸಲಹೆ ಪಡೆದುಕೊಂಡರೆ ಒಳ್ಳೆಯದು.
#ಮಲಬದ್ದತೆ ಸಮಸ್ಯೆ ನಿವಾರಣೆ: ಮೆಂತೆ ಎಲೆಯು ದೇಹಕ್ಕೆ ಬೇಕಾಗುವ ನಾರಿನಂಶವನ್ನು ಅಧಿಕ ಪ್ರಮಾಣದಲ್ಲಿ ನೀಡುತ್ತದೆ. ಮಲಬದ್ಧತೆಯ ಸಮಸ್ಯೆಯನ್ನು ಪರಿಹಾರ ಗೊಳಿಸುವುದರ ಜೊತೆಗೆ ಕರುಳಿನ ಚಲನೆಯನ್ನು ಮೃದುಗೊಳಿಸುತ್ತದೆ.
#ಉತ್ತಮ ಮಟ್ಟದ ಪ್ರೋಟಿನ್ ಮೆಂತೆ ಸೊಪ್ಪಿನಲ್ಲಿ ಸಮೃದ್ಧವಾದ ಪ್ರೋಟೀನ್ ಮತ್ತು ನಿಕೋಟಿನ್ ಆಮ್ಲಗಳಿವೆ. ಇವು ನಮ್ಮ ಕೇಶರಾಶಿಯ ಹೊಳಪನ್ನು ಹೆಚ್ಚಿಸಿ ಬೆಳವಣಿಗೆ ಸಹಾಯ ಮಾಡುತ್ತದೆ, ಜೊತೆಗೆ ದೇಹದಲ್ಲೂ ಶಕ್ತಿಯನ್ನು ವೃದ್ಧಿಸುತ್ತದೆ.