ಈ ಬೇಸಿಗೆಯಲ್ಲಿ ವಿಶೇಷವಾಗಿ ತಮ್ಮನು ತಾವೂ ಈ ರೀತಿ ಕಾಪಾಡಿಕೊಳ್ಳಿ!

ಈ ವರ್ಷ ರಾಜ್ಯಾದ್ಯಂತ ಹಿಂದೆಂದೂ ಕಾಣದ ಸೂರ್ಯನ ಶಾಖದ ಪ್ರಖರತೆ ಮಾರ್ಚ್ ನಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಇನ್ನೂ ಈ ಪ್ರಖರತೆ ಜೂನ್ ಎರಡನೇ ವಾರದ ವರೆಗೂ ಮುಂದುವರೆಯುವುದರಿಂದ ಖಂಡಿತವಾಗಿ ನಾವು ಕೆಲವೊಂದು ವ್ಯವಸ್ಥೆಗಳನ್ನು ಮಾಡಿಕೊಳ್ಳಲೇಬೇಕಿದೆ,ಇಲ್ಲವಾದರೆ ವಯಸ್ಕರು ಮಕ್ಕಳು ವಯೋವೃದ್ಧರು ಎಲ್ಲರೂ ಜೀವಕ್ಕೆ ಅಪಾಯ ತಂದುಕೊಳ್ಳಬೇಕಾದೀತು,ಮಕ್ಕಳಲ್ಲಿ Dehydration ವೃದ್ಧರಲ್ಲಿ Sun stroke ಮಧ್ಯ ವಯಸ್ಕರಲ್ಲಿ ವಿಪರೀತ ತಲೆನೋವು ಹೆಚ್ಚಾಗುತ್ತದೆ.ಆದ್ದರಿಂದ ಈ ಕೆಳಗೆ ಸೂಚಿಸುವಂತೆ ಈ ಬೇಸಿಗೆಯಲ್ಲಿ ತಮ್ಮನ್ನು ತಾವು ಕಾಪಾಡಿಕೊಳ್ಳಿ
ಗೃಹಿಣಿಯರು ನಿಮ್ಮ ಹೊರಗಿನ ಕೆಲಸಗಳನ್ನು ಸಂಜೆ ವೇಳೆಯಲ್ಲಿ ಮುಗಿಸಿಕೊಳ್ಳಿ2) ಬಿಸಿಲಿನಲ್ಲಿ ಹೊರ ಹೋಗಲೇ ಬೇಕಾದ ಅನಿವಾರ್ಯತೆ ಇದ್ದಲ್ಲಿ ಬಿಳಿ ಬಣ್ಣದ ಛತ್ರಿಯನ್ನು ಬಳಸಿ
ಬಿಸಿಲಿನ ಪ್ರಖರತೆಯನ್ನು ಕಪ್ಪು ಮತ್ತು ನೀಲಿ ಬಣ್ಣ ಬೇಗ ಹೀರುವುದರಿಂದ ಕಪ್ಪು ಮತ್ತು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಬೇಡಿ
ಸಾಧ್ಯವಾದಷ್ಟೂ ಕಾಟನ್ ಬಟ್ಟೆಗಳನ್ನು ಧರಿಸಿ ವಯೋವೃದ್ಧರಿಗೆ ಮತ್ತು ಮಕ್ಕಳಿಗೆ ಮನೆಯಲ್ಲಿ ಹೆಚ್ಚು ಹೆಚ್ಚು ನೀರು ಕುಡಿಯಲು ಕೊಡಿ
ಈ ಬಿಸಿಲಿನಲ್ಲಿ ವಿಟಮಿನ್ “ಸಿ” ಕೊರತೆ ಎದುರಾಗುವುದರಿಂದ ಪ್ರಕೃತಿಯ ಅಮೂಲ್ಯ ಕೊಡುಗೆ ನಿಂಬೆಹಣ್ಣಿನ ಪಾನಕ ಮಾಡಿಕೊಂಡು ಕುಡಿಯಿರಿ ಇಲ್ಲಿಸಕ್ಕರೆ ಬದಲು ಬೆಲ್ಲವನ್ನು ಬಳಸಿ
ಬೆಳಗ್ಗೆ ಎದ್ದ ತಕ್ಷಣ “ತುಳಸಿ” ಎಲೆಗಳನ್ನು Mixi ಯಲ್ಲಿ ರುಬ್ಬಿಕೊಂಡು ಎರಡು ಲೋಟದಷ್ಟು ನೀರನ್ನು ಬೆರೆಸಿ ಕುಡಿಯಿರಿ ಇದರಿಂದ ಕೆಲ ಮಾಡುವಾಗ ಸುಸ್ತಾಗುವುದಿಲ್ಲ
ಈ ಬೇಸಿಗೆ ದಿನಗಳಲ್ಲಿ ತಣ್ಣೀರಿನ ಸ್ನಾನ ಕ್ಷೇಮ, ದಿನಕ್ಕೆರಡು ಬಾರಿ ಅಂದರೆ ಸಂಜೆ ಅಥವಾ ರಾತ್ರಿ ಮಲಗುವ ಮುನ್ನ ಒಂದು ಬಕೆಟ್ ತಣ್ಣೀರಿಗೆ ಕನಿಷ್ಠ ಪುದಿನ ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ತಣ್ಣೀರಿಗೆ ಬೆರೆಸಿ ಸ್ನಾನ ಮಾಡುವುದರಿಂದ ಬೆವರಿನ ದುರ್ಗಂಧ ದೂರವಾಗುವುದಲ್ಲದೇ ಬೆವರು ಗುಳ್ಳೆಗಳು ಚರ್ಮದ ಮೇಲೆ ಬರುವುದಿಲ್ಲ