ಐಸ್ ಕ್ಯೂಬ್‌ಗಳ ಬಳಕೆಯ ಅದ್ಭುತ ಪ್ರಯೋಜನಗಳು!

ಬೇಸಿಗೆಯಲ್ಲಿ ಐಸ್ ಆಗಿರುವುದನ್ನು ತಿನ್ನೋದಕ್ಕೆ ಇಷ್ಟಪಡುತ್ತಾರೆ. ಆದರೆ ಐಸ್ ಕ್ಯೂಬ್ ಅನ್ನು ಇದೀಗ ತಿನ್ನಲು ಅನುಮತಿಸುವುದಿಲ್ಲ. ಗಂಟಲು ಮತ್ತು ಶ್ವಾಸಕೋಶಗಳ ವಿರುದ್ಧ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು, ಆದರೆ ನಾವು ಐಸ್ ಕ್ಯೂಬ್‌ಗಳನ್ನು ಬೇರೆ ರೀತಿಯಲ್ಲಿ ಬಳಕೆ ಮಾಡಬಹುದು. ಐಸ್ ಕ್ಯೂಬ್‌ಗಳ ಬಳಕೆಯ ಬಗ್ಗೆ ಕೆಲವು ಆಸಕ್ತಿದಾಯಕ ಮಾಹಿತಿ ಇಲ್ಲಿವೆ
#ವಯಸ್ಸಾದಂತೆ ಕಾಣುವುದನ್ನು ತಡೆಯುತ್ತವೆ ನಿಮ್ಮ ಮುಖದ ಮೇಲೆ ಕಾಣಿಸಿಕೊಳ್ಳುವ ಸುಕ್ಕುಗಳನ್ನು ಐಸ್‌ಕ್ಯೂಬ್‍ಗಳಿಂದ ಕಡಿಮೆ ಮಾಡಿಕೊಳ್ಳಬಹುದು. ಐಸ್ ಕ್ಯೂಬ್ ಫೇಶಿಯಲ್‍ನಿಂದ ನಿಮ್ಮ ಮುಖದ ಭಾಗಕ್ಕೆ ರಕ್ತ ಸಂಚಾರ ಅಧಿಕವಾಗುತ್ತದೆ. ಇದರಿಂದ ನಿಮ್ಮ ಮುಖದ ಹೊಳಪು ಹೆಚ್ಚುತ್ತದೆ. ಆಗ ನಿಮ್ಮ ಮುಖ ಕಳೆಯಿಂದ ನಳನಳಿಸುತ್ತದೆ. ಹಾಗಾಗಿ ಐಸ್ ಕ್ಯೂಬ್ ಫೇಶಿಯಲನ್ನು ತಪ್ಪದೆ ಮಾಡಿ.
#ಎಣ್ಣೆಯ ತ್ವಚೆ ಹೊಂದಿದ್ದವರು ಐಸ್ ಕ್ಯೂಬ್ ಮಾಡಿಕೊಳ್ಳುವಾಗ ಸ್ವಲ್ಪ ನಿಂಬೆ ಹಣ್ಣಿನ ರಸ ಸೇರಿಸಿ ಐಸ್ ಕ್ಯೂಬ್ ಗಳನ್ನು ಮಾಡಿಕೊಂಡು ಮಸಾಜ್ ಮಾಡಿಕೊಂಡರೆ ಚರ್ಮ ಉತ್ತಮವಾಗಿರುತ್ತದೆ. ತೋಳುಗಳಲ್ಲಿ ಹೆಚ್ಚು ಬೆವರು ಬರುವವರೂ ಕೂಡ ಇದನ್ನು ಬಳಕೆ ಮಾಡುವುದರಿಂದ ಬೆವರು ಕಡಿಮೆಯಾಗುತ್ತದೆ.
#ಚಿಕ್ಕ ಮಕ್ಕಳು ಹೆಚ್ಚಾಗಿ ಔಷಧಿಗಳನ್ನು ತೆಗೆದುಕೊಳ್ಳಲು ಇಷ್ಟಪಡೋದಿಲ್ಲ. ಅದರ ರುಚಿ ಮಕ್ಕಳಿಗೆ ವಾಕರಿಕೆ ಬರುವಂತೆ ಮಾಡುತ್ತದೆ. ಇಂತ ಸಮಯದಲ್ಲಿ ಔಷಧಿಯನ್ನು ನೀಡುವ ಮೊದಲು ಐಸ್ ಕ್ಯೂಬ್ ಅನ್ನು ಹೀರಲುನೀಡಿ ಐಸ್ ಕ್ಯೂಬ್ ನ್ನು ಸ್ವಲ್ಪ ಸಮಯ ಹೀರಿದರೆ ಅವರ ರುಚಿ ಗ್ರಂಥಿಗಳನ್ನು ಮರಗಟ್ಟಿಸುತ್ತದೆ ಮತ್ತು ಮಗುವಿಗೆ ಔಷಧಿಯ ಕಹಿ ರುಚಿ ತಿಳಿಯುವುದಿಲ್ಲ. ಮಗುವು ಕೇವಲ ಒಂದು ಬಾರಿ ಮಂಜುಗಡ್ಡೆಯನ್ನು ಹೀರುವಂತೆ ನೋಡಿಕೊಳ್ಳಿ.
#ಸನ್ ಬರ್ನ್‌ಗೆ ರಾಮಬಾಣ ಇದರ ಜೊತೆಗೆ ಐಸ್ ಕ್ಯೂಬ್ ಮಸಾಜ್, ಸನ್ ಬರ್ನ್‌ಗೆ ರಾಮ ಬಾಣವಾಗಿ ಕೆಲಸ ಮಾಡುತ್ತದೆ. ಸೂರ್ಯನ ಕಿರಣಗಳ ಒಡೆತಕ್ಕೆ ಸಿಲುಕಿದ ತ್ವಚೆಗೆ ಶೀಘ್ರವಾಗಿ ತಂಪು ಮಾಡುವ ಐಸ್‌ಕ್ಯೂಬ್‍ನ ಗುಣವು ನಿಮಗೆ ಹಿತವನ್ನು ನೀಡುತ್ತವೆ. ಅದರಲ್ಲಿಯು ಬಿಸಿಲು ಅಧಿಕವಾಗಿರುವ ದೇಶಗಳಲ್ಲಿ ವಾಸಿಸುವವರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಏಕೆಂದರೆ ತಕ್ಷಣಕ್ಕೆ ನಿಮಗೆ ಐಸ್‌ಕ್ಯೂಬ್‍ಗಳೆ ಆಪದ್ಭಾಂಧವನಾಗಿ ಬರುತ್ತವೆ.
# ಸುಕ್ಕುಗಳು, ಸೂಕ್ಷ್ಮವಾದ ಗೆರೆಗಳಿಂದ ಮುಕ್ತಿ ದೊರೆಕಿಸಿ, ಯೌವನವಾಗಿರುವಂತೆ ಮಾಡುತ್ತದೆ.ಹಲ್ಲುಗಳ ನೋವಿಗೆ ತ್ವರಿತವಾಗಿ ಚಿಕಿತ್ಸೆ ನೀಡುತ್ತದೆ.ಚರ್ಮಕ್ಕೆ ಹೊಳಪನ್ನು ನೀಡುತ್ತದೆ