ಸಾಸಿವೆ ಎಣ್ಣೆ ಬಳಕೆಯ ಆರೋಗ್ಯ ಪ್ರಯೋಜನಗಳು

ಕಂದು ಮತ್ತು ಬಿಳಿ ಸಾಸಿವೆ. ಸಾಸಿವೆಯನ್ನು ಹೆಚ್ಚಾಗಿ ಭಾರತ, ಕೆನಡಾ, ಇಂಗ್ಲೆಂಡ್, ಹಂಗೇರಿ ಇತ್ಯಾದಿ ರಾಷ್ಟ್ರಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಸಾಸಿವೆ ಎಣ್ಣೆಯನ್ನು ಹೆಚ್ಚಾಗಿ ದೇಹಕ್ಕೆ ಮಸಾಜ್ ಮಾಡಿಕೊಳ್ಳಲು, ಕೂದಲು, ಚರ್ಮದ ಆರೈಕೆ, ಅಡುಗೆ ಮತ್ತು ಕೆಲವೊಂದು ಆಚರಣೆಗೆ ಬಳಕೆ ಮಾಡಲಾಗುತ್ತದೆ. ನಮ್ಮ ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ಸಾಸಿವೆಯು ಯಾವ ರೀತಿಯಲ್ಲಿ ನೆರವಾಗುವುದು ಎಂದು ತಿಳಿಯುವ.

#ಸಾಸಿವೆ ಎಣ್ಣೆಯ ಮಸಾಜ್ ದೇಹದ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ. ಹಾಗೆಯೇ ಇದರಿಂದ ದೇಃ ಗಂಟುಗಳು ಕೂಡ ಸಡಿಲಗೊಳಿಸುತ್ತದೆ.

#ಸಾಸಿವೆ ಎಣ್ಣೆಯಲ್ಲಿ ಇರುವಂತಹ ಅಲ್ಲೈಲ್ ಐಸೊಥಿಯೋಸೈನೇಟ್ ಅಂಶವು ಇದೆ ಮತ್ತು ಇದರಿಂದ ದೇಹದಲ್ಲಿನ ನೋವು ಕಡಿಮೆ ಮಾಡಬಹುದು. ಎಲ್ ಎಲ್ ಎ ಜತೆಗೆ ಒಮೆಗಾ-3 ಕೂಡ ಇದರಲ್ಲಿ ಇರುವ ಕಾರಣದಿಂದಾಗಿ ಇದು ಉರಿಯೂತ ಮತ್ತು ಸಣ್ಣ ಮಟ್ಟದಲ್ಲಿನ ಸುಟ್ಟ ಗಾಯಗಳನ್ನು ನಿವಾರಣೆ ಮಾಡುವುದು.

#ರಕ್ತ ಪರಿಚಲನೆಯನ್ನು(Blood circulation) ಸುಧಾರಿಸುತ್ತೆ ಇದು ನಿಮ್ಮ ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸಲು ಮತ್ತು ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತೆ. ಈ ಕಾರಣದಿಂದಾಗಿ ರಕ್ತ ಮತ್ತು ಪೋಷಣೆಯು ದೇಹದ ಇತರ ಅಂಗಗಳನ್ನು ಉತ್ತಮವಾಗಿ ತಲುಪುತ್ತೆ. ಹಾಗೆಯೇ ನರಗಳ ಆರೋಗ್ಯವೂ ಉತ್ತಮವಾಗಿರುತ್ತೆ.

#ಸಾಸಿವೆ ಎಣ್ಣೆಯನ್ನು ಚಿಮುಕಿಸಿ ಮತ್ತು ಕಡಿಮೆ ಉರಿಯಲ್ಲಿ ಇರಿಸಿ. ತಣ್ಣಗಾದಾಗ ಕೂದಲಿಗೆ ಅನ್ವಯಿಸಿ. ಕೂದಲು ಉದುರುವುದು ನಿಲ್ಲುತ್ತದೆ.

#ಚರ್ಮ(Skin)ದಲ್ಲಿ ಯಾವುದೇ ರೀತಿಯ ಸೋಂಕು ಇದ್ದರೆ, ಸಾಸಿವೆ ಎಣ್ಣೆಯು ಅದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಂಟಿಮೈಕ್ರೊಬಿಯಲ್‌ಗಳು ಸಾಸಿವೆ ಎಣ್ಣೆಯಲ್ಲಿ ಕಂಡುಬರುತ್ತವೆ. ಒಂದು ಅಧ್ಯಯನವು ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡಿದ ನವಜಾತ ಶಿಶುಗಳು ತಮ್ಮ ಚರ್ಮವನ್ನು ಉಳಿದವುಗಳಿಗಿಂತ ಆರೋಗ್ಯಕರವೆಂದು ಕಂಡುಕೊಂಡಿದೆ.

#ಮಕ್ಕಳ ಕಫ ಕೆಮ್ಮುಗಳಿಗೆ ಸಾಸಿವೆ ಎಣ್ಣೆಯನ್ನು ತುಸು ಬೆಚ್ಚಗೆ ಮಾಡಿ ಎದೆಗೆ ಮಾಲಿಶ್ ಮಾಡ ಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group