ಕಣ್ಣು ಉರಿ ಸಮಸ್ಯೆಗೆ ಈ ಮನೆ ಮದ್ದುಗಳು!

ದಿನವಿಡೀ ಲ್ಯಾಪ್‌ಟಾಪ್, ಕಂಪ್ಯೂಟರ್, ಮೊಬೈಲ್ ನೋಡುವುದರಿಂದ ಕಣ್ಣು ಉರಿ ಅಥವಾ ಕಣ್ಣು ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಇದಕ್ಕೆ ಒಂದು ಕಾರಣ ಕಣ್ಣಿನ ಮೇಲೆ ಬೀಳುವ ಒತ್ತಡವಾದರೆ, ಮತ್ತೊಂದು ಕಾರಣ ಗೆಜೆಟ್ಗಳಿಂದ ಹೊರಸೂಸುವ ಬೆಳಕು. ಆದರೆ ಆಗೊಮ್ಮೆ ಹೀಗೊಮ್ಮೆ ಕಾಣಿಸಿಕೊಳ್ಳುವ ಇಂತಹ ಸಮಸ್ಯೆಗೆ ಸಿಂಪಲ್ ಆಗಿ ಈ ಪರಿಹಾರ ಕಂಡುಕೊಳ್ಳಬಹುದು.
#ಬಹಳಷ್ಟು ಉರಿ ಕಂಡುಬಂದರೆ ಕಣ್ಣುಗಳನ್ನು ನೀರಿನಿಂದ ತೊಳೆಯಬೇಕು. ಕಿರಿಕಿರಿ ಕಡಿಮೆ ಮಾಡಲು ಇದು ತುಂಬಾ ಸಹಾಯ ಮಾಡುತ್ತದೆ. ರೋಸ್ ವಾಟರ್ ಬಳಸಿ ಸಹ ಕಣ್ಣುಗಳನ್ನು ತೊಳೆಯಬಹುದು. ಇದು ಕಣ್ಣು ಉರಿಗೆ ಸಾಕಷ್ಟು ಪರಿಹಾರ ನೀಡುತ್ತದೆ. ಡಿಜಿಟಲ್ ಕಣ್ಣಿನ ಆಯಾಸದಿಂದ ಕಿರಿಕಿರಿಯುಂಟಾಗುತ್ತದೆ. ಇದನ್ನು ಕಡಿಮೆ ಮಾಡಲು ನೀವು ಹೆಚ್ಚುಹೊತ್ತು ಮೊಬೈಲ್ ಅಥವಾ ಕಂಪ್ಯೂಟರ್ ಸ್ಕ್ರೀನ್ ನೋಡುವುದನ್ನು ಕಡಿಮೆ ಮಾಡಬೇಕು.
#ಸೌತೆಕಾಯಿಯನ್ನು ಹೋಳುಗಳನ್ನಾಗಿ ಮಾಡಿ ಅವುಗಳನ್ನು ಕಣ್ಣಿನ ಮೇಲೆ ಇಟ್ಟುಕೊಂಡು ಅರ್ಧ ನಿಮಿಷಗಳ ಕಾಲ ಹಾಗೆಯೇ ಇರಿ. ಇದರಿಂದ ಕಣ್ಣು ತಣ್ಣನೇಯ ಅನುಭವ ಪಡೆಯುತ್ತದೆ. ಕೆಂಪಾದ ಕಣ್ಣು ಮತ್ತು ಹೆಚ್ಚು ಆಯಾಸದಿಂದ ಊದಿಕೊಂಡಿರುವ ಕಣ್ಣಿನ ಆರೋಗ್ಯಕ್ಕೆ ಇದು ಸಹಾಯಕ.
#ದಾಳಿಂಬೆ ಹಣ್ಣಿನಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಹಾಗೆಯೇ ಅದರ ಎಲೆಗಳ ಮೂಲಕ ಕೂಡ ಕಣ್ಣಿನ ಸಮಸ್ಯೆಗೆ ಪರಿಹಾರ ಕಾಣಬಹುದಾಗಿದೆ. ಇದಕ್ಕಾಗಿ ನೀವು ದಾಳಿಂಬೆ ಗಿಡದ ಎಲೆಗಳನ್ನು ಪುಡಿ ಮಾಡಿ ನೀರು ಬೆರೆಸಿ ಪೇಸ್ಟ್ನಂತೆ ಮಾಡಿ. ಬಳಿಕ ಅದನ್ನು ಕಣ್ಣುಗಳ ಮೇಲೆ ಹಚ್ಚಿಕೊಳ್ಳಿ. ಇದನ್ನು10 ರಿಂದ 20 ನಿಮಿಷಗಳ ಬಳಿಕ ತೊಳೆಯಿರಿ.
#ಕಣ್ಣುಗಳ ನವೆ ನಿವಾರಣೆಗೆ ಇನ್ನೊಂದು ಪರಿಣಾಮಕಾರಿ ಮನೆಮದ್ದು ಎಂದರೆ ಅದು ಚಾಮೊಮೈಲ್ ಹೂವು ಅಥವಾ ಚಾಮೊಮೈಲ್ ಎಣ್ಣೆಯ ಬಳಕೆ ಮಾಡುವುದು. ಚಾಮೊಮೈಲ್ ಚಹಾ ಬ್ಯಾಗ್ ಕೂಡ ಬಹಳ ಸುಲಭವಾಗಿ ಎಲ್ಲರ ಬಳಿ ಲಭ್ಯವಿರುತ್ತದೆ. ಹಾಗಾಗಿ ಇದನ್ನು ಬೇಕಾದರೂ ಫ್ರೀಜರ್ ನಲ್ಲಿ ಸ್ವಲ್ಪ ಹೊತ್ತು ಇಟ್ಟು ಕಣ್ಣುಗಳ ಮೇಲೆ ನಂತರ ಇಟ್ಟುಕೊಳ್ಳುವುದರ ಮೂಲಕ ಪರಿಹಾರ ಕಾಣಬಹುದು.
#ಹಾಲುಗಳ ಮೂಲಕ ಕೂಡ ಕಣ್ಣಿನ ಉರಿಯನ್ನು ಕಡಿಮೆ ಮಾಡಬಹುದು. ತಣ್ಣನೆಯ ಹಾಲನ್ನು ಒಂದು ಕಾಟನ್ ಬಟ್ಟೆಯಲ್ಲಿ ಅದ್ದಿ, ಅದನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳಿ. ಅಥವಾ ಹಾಲಿನಿಂದ ಕಣ್ಣುಗಳ ಭಾಗದಲ್ಲಿ ಮಸಾಜ್ ಮಾಡಿ. ದಿನನಿತ್ಯ ಹೀಗೆ ಮಾಡುವುದರಿಂದ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಣ್ಣು ಉರಿ ಕಡಿಮೆಯಾಗುತ್ತದೆ