ಮೂಲವ್ಯಾಧಿ ಕಾಯಿಲೆಯನ್ನು ಗುಣಪಡಿಸುವ ಮನೆಮದ್ದುಗಳು!

ಮಲವಿಸರ್ಜನೆಗೆ ಹೋದಾಗ ತುಂಬಾ ನೋವಾಗುವುದು, ರಕ್ತ ಸುರಿಯುವಿಕೆ, ಉರಿ ಇವೆಲ್ಲಾ ಮೂಲವ್ಯಾಧಿ ಸಮಸ್ಯೆಯ ಲಕ್ಷಣವಾಗಿದೆ. ಇದಕ್ಕೆ ಅನೇಕ ಚಿಕಿತ್ಸೆಗಳಿವೆ. ಈ ಕಾಯಿಲೆ ಪ್ರಭಾವದ ಮೇಲೆ ಇದಕ್ಕೆ ಚಿಕಿತ್ಸೆಯನ್ನು ಮಾಡಲಾಗುವುದು. ಈ ಕಾಯಿಲೆ ಅಧಿಕವಾಗಿದ್ದರೆ ಆಪರೇಷನ್ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಔಷಧಿಯಿಂದ ಗುಣಪಡಿಸಬಹುದು.

ಮೂಲವ್ಯಾಧಿ ಕಾಯಿಲೆಯನ್ನು ಬರದಂತೆ ತಡೆಯುವ ಬಂದ ಕಾಯಿಲೆಯನ್ನು ಗುಣಪಡಿಸುವ ಸಾಮರ್ಥ್ಯ ಕೆಲವೊಂದು ಆಹಾರಗಳಿಗಿವೆ. ಆ ಆಹಾರಗಳು ಯಾವುವು ಎಂದು ನೋಡೋಣ ಬನ್ನಿ.

#ಮೂಲವ್ಯಾಧಿಯಿಂದ ಮುಕ್ತಿ ಪಡೆಯಲು ಅಶ್ವಸ್ಥ ಮರದ ಎಲೆಗಳು , 10 ಗ್ರಾಂ ದಾಲ್ಚಿನಿ, ಮಸಾಲೆ ಎಲೆ, ಕರಿ ಮೆಣಸು 30-30ಗ್ರಾಂ, ಶುಂಠಿ 35 ಗ್ರಾಂ, ಅಳಲೇ ಕಾಯಿ ಪೌಡರ್ 100 ಗ್ರಾಂ.ನಲ್ಲಿ 200 ಗ್ರಾಂ ಬೆಲ್ಲ ಬೆರೆಸಿ ಚೆನ್ನಾಗಿ ಅರಿದುಕೊಳ್ಳಿ. ನಂತರ ಈ ಮಿಶ್ರಣದಿಂದ 25-25 ಗ್ರಾಂ.ನ ಲಡ್ಡು ತಯಾರಿಸಿ, ನಿತ್ಯ ಬೆಳಗ್ಗೆ ಹಾಗೂ ಸಾಯಂಕಾಲ ಹದ ಬಿಸಿ ನೀರಿನ ಜೊತೆಗೆ ಸೇವಿಸಿದರೆ, ಮೂಲವ್ಯಾಧಿ ದೂರವಾಗುತ್ತದೆ.

#ಬಾಳೆಹಣ್ಣು ಬೆಸ್ಟ್ ಈ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ಬಾಳೆಹಣ್ಣನ್ನು ತಿಂದರೆ ಉತ್ತಮ. ಬಾಳೆಹಣ್ಣು ಗುದನಾಳದ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಮಲದ ಟೈಟ್ ಆಗುವುದನ್ನುಸಡಿಲಗೊಳಿಸುತ್ತದೆ. ಬ್ಯಾಕ್ಟೀರಿಯಾ ವಿರೋಧಿ ಎಂಬ ದೃಷ್ಟಿಯಿಂದ ಮೂಲವ್ಯಾಧಿಗೆ ಬಾಳೆಹಣ್ಣು ಉತ್ತಮ ಆಹಾರವಾಗಿದೆ.

#ಮಜ್ಜಿಗೆ ಮತ್ತು ಜೀರಿಗೆ ಪೈಲ್ಸ್​ಗೆ ಪರಿಹಾರ ನೀಡುತ್ತದೆ:ಮೂರರಿಂದ ನಾಲ್ಕು ದಿನಗಳಲ್ಲಿ ಇದರ ಪ್ರಯೋಜನಗಳು ಗೋಚರಿಸುತ್ತವೆ. ನೀವು ಮಜ್ಜಿಗೆ ಬದಲಾಗಿ ನೀರನ್ನು ಕೂಡಾ ಬಳಸಬಹುದು. ಇದಕ್ಕಾಗಿ, ಒಂದು ಗ್ಲಾಸ್ ನೀರಿಗೆ ಅರ್ಧ ಟೀ ಚಮಚ ಜೀರಿಗೆ ಪುಡಿಯನ್ನು ಹಾಕಿಕೊಂಡು ಕುಡಿಯಿರಿ. ಪೈಲ್ಸ್ ಅನ್ನು ಆದಷ್ಟು ಬೇಗ ಗುಣಪಡಿಸಲು ಇದು ಅತ್ಯುತ್ತಮ ಪರಿಹಾರವಾಗಿದೆ. ಎರಡು ಲೀಟರ್ ಮಜ್ಜಿಗೆಯಲ್ಲಿ ಐವತ್ತು ಗ್ರಾಂ ಜೀರಿಗೆ ಮಿಶ್ರಣ ಮಾಡಿ, ಮತ್ತು ನಿಮಗೆ ಬಾಯಾರಿಕೆ ಬಂದಾಗಲೆಲ್ಲಾ ಈ ಮಿಶ್ರಣವನ್ನು ನೀರಿನ ಬದಲು ಕುಡಿಯಿರಿ.

#ಈರುಳ್ಳಿಯಲ್ಲಿ ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳು ಸಾಕಷ್ಟು ಕಂಡುಬರುವ ಕಾರಣ ಚರ್ಮದ ಭಾಗದಲ್ಲಿ ಕಂಡುಬರುವ ಊತ ಮತ್ತು ಉರಿಯೂತವನ್ನು ಇದು ನಿವಾರಣೆ ಮಾಡುತ್ತದೆ ಎಂದು ಹೇಳಬಹುದು.ಮೂಲವ್ಯಾಧಿ ಸಮಸ್ಯೆ ಪರಿಹಾರ ಮಾಡುವಲ್ಲಿ ಈರುಳ್ಳಿ ಮತ್ತು ಜೇನು ತುಪ್ಪ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ದಿನದಲ್ಲಿ 2 ಬಾರಿ ಇದನ್ನು ಸೇವನೆ ಮಾಡುವುದರಿಂದ ನಿಮ್ಮ ನೋವು ಮತ್ತು ರಕ್ತ ಸ್ರಾವ ಶೀಘ್ರವಾಗಿ ದೂರವಾಗುತ್ತದೆ ಎಂದು ಹೇಳಬಹುದು.

#ವ್ಯಾಯಾಮ ಮಲಬದ್ಧತೆ ತಡೆಯಲು ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು. ನಡೆಯುವ ವ್ಯಾಯಾಮ ಮಾಡಿ. ಆದರೆ ಭಾರ ಎತ್ತುವಂತಹ ಕಷ್ಟದ ವ್ಯಾಯಾಮವನ್ನು ಮೂಲವ್ಯಾಧಿ ಇರುವವರು ಮಾಡಬಾರದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group