ಗಣಿಕೆ ಅಥವಾ ಕಾಕಮಾಚಿ ಸೊಪ್ಪಿನ ಔಷಧಿಯ ಗುಣಗಳು!

Solanum nigrum

ಗಣಿಕೆ ಸೊಪ್ಪು ಕಾಗೆ ಸೊಪ್ಪು ಕಾಕಿ ಹಣ್ಣು ಮುಂತಾದ ಹಣ್ಣು ಎಂದು ಕರೆಯಲ್ಪಡುವ ಈ ಹಣ್ಣು ಚಿಕ್ಕದಾಗಿ ಬೆಳೆಯುವ ಗಿಡ. ಈ ಸಸ್ಯವು ಔಷಧಿಯ ಗುಣವನ್ನು ಹೊಂದಿದೆ. ಮತ್ತು ಮಲೆನಾಡಿನಲ್ಲಿ ಬೆಳೆಯುವ ಕಳೆ ಗಿಡ. ಕೆಲವು ಕಡೆ ಔಷಧಿಯಾಗಿ ಸಾಗುವಳಿ ಮಾಡಿ ಬೆಳೆಯುವ ಪದ್ದತಿ ಕೂಡ ಇದೆ. ಹಾಗಾದರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

#ಬಾಯಿಹುಣ್ಣು ಆದಾಗ ಕಾಕಮಾಚಿ ಸೊಪ್ಪನ್ನು ತಂದು ಚಟ್ನಿ ಅಥವಾ ಪಲ್ಯವನ್ನು ಮಾಡಿ ಸೇವಿಸಿದರೆ ಒಂದೆರಡು ದಿನದಲ್ಲೇ ಹುಣ್ಣು ಮಾಯವಾಗುತ್ತದೆ. ಕಾಕಮಾಚಿ ಗಿಡದ ಸೊಪ್ಪಿನ ರಸವನ್ನು ತೆಗೆದು ಕುಡಿದರೂ ಬಾಯಿ ಹುಣ್ಣು ಕಡಿಮೆಯಾಗುತ್ತದೆ. ಹೀಗಾಗಿ ಕಾಕಮಾಚಿ ಹಿಂಸೆ ನೀಡುವ ಬಾಯಿ ಹುಣ್ಣಿಗೆ ಉತ್ತಮ ಮನೆಮದ್ದಾಗಿದೆ

#ಉರಿ ಮೂತ್ರ ಸಮಸ್ಯೆ ಇರುವವರು ಗಣಿಕೆ ಸೊಪ್ಪಿಗೆ ಜೇನುತುಪ್ಪವನ್ನು ಬೆರೆಸಿ ಕುಡಿಯಬೇಕು. ಇದರಿಂದ ಉರಿ ಮೂತ್ರ ಸಮಸ್ಯೆ ನಿವಾರಣೆ ಆಗುತ್ತದೆ

#ಶೀತ, ಕಫ, ಜ್ವರಗಳಂತಹ ಸಮಸ್ಯೆಗಳು ಕಾಡುವುದು ಸಾಮಾನ್ಯ. ಕಫವನ್ನು ಕರಗಿಸಲು ಈ ಸಸ್ಯ ಸಹಾಯ ಮಾಡುತ್ತದೆ. ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇದ್ದಾಗ ಸಸ್ಯದ ಎಲೆಗಳಿಂದ ತಂಬುಳಿ ಮಾಡಿ ಊಟದ ಜತೆ ಸೇವಿಸಲಾಗುತ್ತದೆ. ಇದರಿಂದ ಸಾಮಾನ್ಯ ಶೀತ, ಜ್ವರ ಮತ್ತು ಕಫದಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

#ಮೂಲವ್ಯಾಧಿಯಿಂದ ರಕ್ತ ಹೋಗುತ್ತಿದ್ದರೆ ಗಣಿಕೆ ಸೊಪ್ಪಿನ ಪಲ್ಯ ಸೇವನೆ ಮಾಡುವುದು ಉತ್ತಮ.

#ಇಸುಬು, ತುರಿಕೆಯಂತಹ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಈ ಗಣಿಕೆ ಸೊಪ್ಪು ಉತ್ತಮ ಮನೆಮದ್ದಾಗಿದೆ. ಚರ್ಮದ ಮೇಲೆ ಏಳುವ ಬೆವರು ಗುಳ್ಳೆಗಳು ಅಥವಾ ರಾಶಸ್‌ಗಳ ಸಮಸ್ಯೆ ಕಾಡುತ್ತಿದ್ದರೆ ಗಣಿಕೆ ಸೊಪ್ಪಿನ ಕಷಾಯ ಮಾಡಿ ಸೇವಿಸಿ.

#ಈ ಸೊಪ್ಪನ್ನು ಪಲ್ಯ,ಜೆಟ್ನಿ ಮಾಡಿ ಆಹಾರದಲ್ಲಿ ಸೇವಿಸುತ್ತ ಬಂದವರಿಗೆ ಬೊಜ್ಜಿನ ಸಮಸ್ಸೆ ಉಂಟಾಗುವುದಿಲ್ಲ.ತೂಕ ಜಾಸ್ತಿ ಇದೆ ಎನ್ನುವವರು ಈ ಸೊಪ್ಪಿನ ಕಷಾಯ ಕುಡಿದರೆ ಸುಲಭವಾಗಿ ತೂಕ ಕಡಿಮೆ ಆಗುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group