ಕುತ್ತಿಗೆ ಸುತ್ತಲಿನ ಕಪ್ಪು ಕಲೆಯನ್ನು ನಿವಾರಿಸಲು ಕೆಲವು ಮನೆ ಮದ್ದು!

ಕತ್ತು ಅಥವಾ ಕುತ್ತಿಗೆ ದೇಹದಲ್ಲಿ ನಿರ್ಲಕ್ಷಕ್ಕೆ ಒಳಗಾದ ಭಾಗಗಳಲ್ಲಿ ಒಂದು. ನಮ್ಮಲ್ಲಿ ಬಹುತೇಕ ಮಂದಿ ಮುಖವನ್ನು ಸ್ವಚ್ಚಗೊಳಿಸುವಾಗ ಕುತ್ತಿಗೆ ಭಾಗದ ಸ್ವಚ್ಚತೆಯನ್ನು ಕಡೆಗಣಿಸುತ್ತಾರೆ. ಇದರಿಂದಾಗಿ ಕತ್ತಿನ ಭಾಗದಲ್ಲಿ ಕೊಳೆ ಸಂಗ್ರಹಗೊಂಡು ಕುತ್ತಿಗೆಯ ಚರ್ಮ ಕಪ್ಪಾಗಿ ಕಾಣುತ್ತದೆ. ಕುತ್ತಿಗೆ ಪ್ರದೇಶದಲ್ಲಿ ಸೆಬಾಷಿಯಸ್ ಗ್ರಂಥಿಯ ಕೊರತೆ ಇದ್ದು, ಈ ಜಾಗ ವೃದ್ದಾಪ್ಯದ ಮೊದಲ ಚಿಹ್ನೆಯನ್ನು ತೋರ್ಪಡಿಸುವ ಸ್ಥಳವಾಗಿದೆ. ಇದೇ ರೀತಿ ನಿರ್ಲಕ್ಷ್ಯ ಮುಂದುವರೆದಂತೆ ಕುತ್ತಿಗೆ ಚರ್ಮವು ಮುನ್ನವೇ ವೃದ್ದಾಪ್ಯಕ್ಕೆ ಎಡೆ ಮಾಡಿಕೊಡುತ್ತದೆ ಹೀಗಾದಂತೆ ತಡೆಯಲು ಈ ಕೆಳಗೆ ಪರಿಹಾರಗಳನ್ನು ನೀಡಿದ್ದೇವೆ ಓದಿ!
#ಹಾಲು ಅತ್ಯುತ್ತಮ ಶುಭ್ರಕ. ಪುಡಿ ಮಾಡಿದ ಸ್ಟ್ರಾಬೆರ್ರಿಗಳನ್ನು ಹಾಲಿನೊಂದಿಗೆ ಮಿಶ್ರಣ ಮಾಡಿ ಶುಭ್ರಕವಾಗಿ ಬಳಸಬಹುದು. ಸ್ಟ್ರಾಬೆರ್ರಿ ಉತ್ತಮ ಆಂಟಿಆಕ್ಸಿಡೆಂಟ್‍ಗಳನ್ನು ಒಳಗೊಂಡಿರುವುದರಿಂದ ಇದು ಮೃತ ಕೋಶಗಳನ್ನು ತೆಗೆದು ಹಾಕಿ ನಿಮ್ಮ ಚರ್ಮವನ್ನು ಬಿಗಿಗೊಳಿಸುತ್ತದೆ.
#ಒಂದು ಬಟ್ಟಲಿನಲ್ಲಿ ಎರಡು ಚಮಚ ಅಕ್ಕಿ ಹಿಟ್ಟು ಮತ್ತು ಆಲೂಗಡ್ಡೆ ರಸವನ್ನು ಮಿಶ್ರಣ ಮಾಡಿ, ನಂತರ ಅದರಲ್ಲಿ ರೋಸ್ ವಾಟರ್ ಮಿಶ್ರಣ ಮಾಡಿ ಮತ್ತು ಪೇಸ್ಟ್ ತಯಾರಿಸಿ ಹಚ್ಚಿ ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ.
#ಮೆಂತ್ಯ ರಸವನ್ನು ಬೇಸನ್‍ನೊಂದಿಗೆ ಮಿಶ್ರಣ ಮಾಡಿ ನಿಮ್ಮ ಕತ್ತಿಗೆ ಲೇಪಿಸಿಕೊಳ್ಳಿ. 15-20 ನಿಮಿಷ ಬಿಟ್ಟು ತೊಳೆಯಿರಿ.
#ನಿಮ್ಮ ಕುತ್ತಿಗೆಯ ಭಾಗದಲ್ಲಿ ಅಲೋವೆರಾ ಜೆಲ್ ಅನ್ನು ಸುಮಾರು ಹತ್ತು ನಿಮಿಷಗಳ ಕಾಲ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ನಂತರ ಶುದ್ಧವಾದ ನೀರಿನಿಂದ ತೊಳೆದುಕೊಳ್ಳಿ.
#ವಾಸ್ತವವಾಗಿ, ಆಲೂಗಡ್ಡೆ ಬ್ಲೀಚಿಂಗ್ ಗುಣಗಳನ್ನು ಹೊಂದಿದೆ, ಇದು ಚರ್ಮದ ಮೈಬಣ್ಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ, ನೀವು ಆಲೂಗಡ್ಡೆಯನ್ನು ತುರಿದು ರಸವನ್ನು ಹೊರತೆಗೆಯಬೇಕು. ಈ ರಸವನ್ನು ನಿಮ್ಮ ಕುತ್ತಿಗೆಗೆ ಹಚ್ಚಿ ಸುಮಾರು 15 ನಿಮಿಷಗಳ ಕಾಲ ಬಿಡಿ. ಅದರ ನಂತರ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಕಪ್ಪು ಕಲೆ ನಿವಾರಣೆಯಾಗುತ್ತದೆ.