ಚೆರ್ರಿ ಟೊಮೆಟೋ ಜ್ಯೂಸ್ ಸೇವನೆಯ ಆರೋಗ್ಯಕರ ಪ್ರಯೋಜನಗಳು!

ಟೊಮೆಟೋ ಜ್ಯೂಸ್ ಕುಡಿದರೆ ಅದರಿಂದ ಹಲವಾರು ರೀತಿಯ ಲಾಭಗಳು ಸಿಗಲಿದೆ. ಇದರಲ್ಲಿ ಇರುವಂತಹ ಆಮ್ಲೀಯ ಗುಣಗಳು ವಿವಿಧ ಆರೋಗ್ಯ ಗುಣಗಳನ್ನು ಹೊಂದಿದೆ. ಟೊಮೆಟೋದಿಂದ ಆರೋಗ್ಯಕ್ಕೆ ಸಿಗುವ ಲಾಭಗಳ ಬಗ್ಗೆ ತಿಳಿಯುವ.

#ಟೊಮೇಟೊದಲ್ಲಿ ವಿಟಮಿನ್ ಸಿ ಮತ್ತು ಲೈಕೋಪೀನ್’ನಂತಹ ಉತ್ಕರ್ಷಣ ನಿರೋಧಕಗಳು ತುಂಬಿರುತ್ತವೆ. ಇದು ಒಟ್ಟಾರೆ ಆರೋಗ್ಯಕ್ಕೆ ಮತ್ತು ಚರ್ಮಕ್ಕೆ ಸಹಕಾರಿಯಾಗಿದೆ. ಆದ್ದರಿಂದ ಟೊಮೆಟೊವನ್ನು ಸಲಾಡ್ ಮಿಕ್ಸ್, ರಾಯಿತಾ, ಸ್ಯಾಂಡ್‌ವಿಚ್ ಅಥವಾ ಲೆಟಿಸ್ ರಾಪ್ಸ್’ನಲ್ಲಿ ಮಿಕ್ಸ್ ಮಾಡಿ ತಿನ್ನಬಹುದು. ಕಾಟೇಜ್ ಚೀಸ್ ಜೊತೆ ಸ್ಕಿವರ್ಸ್ ಆಗಿಯೂ ಸೇವಿಸಬಹುದು.

#ಟೊಮೆಟೋ ಬಣ್ಣವು ತುಂಬಾ ಕೆಂಪಾಗಿರುವ ಕಾರಣದಿಂದಾಗಿ ಇದರಲ್ಲಿ ಲೈಕೊಪೆನೆ ಹೆಚ್ಚಿನ ಮಟ್ಟದಲ್ಲಿದೆ. ಲೈಕೊಪೆನೆ ಕೊಬ್ಬು ಹೀರಿಕೊಳ್ಳುವ ಆಂಟಿಆಕ್ಸಿಡೆಂಟ್ ಆಗಿದ್ದು, ಟೊಮೆಟೋ ಜ್ಯೂಸ್ ಕುಡಿದರೆ ಅದರಿಂದ ಪ್ರಾಸ್ಟ್ರೇಟ್ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಮೇಧೋಗ್ರಂಥಿ ಕ್ಯಾನ್ಸರ್, ಪರಿಧಮನಿಯ ಕಾಯಿಲೆ, ಅಪಧಮನಿ ಕಾಠಿಣ್ಯ ಸಮಸ್ಯೆ ನಿವಾರಣೆ ಮಾಡಬಹುದು

#ರಕ್ತದ ಹೆಪ್ಪುಗಟ್ಟುವಿಕೆಯಿಂದ ಉಂಟಾಗುವ ಹೃದಯ ಕಾಯಿಲೆಯಿಂದಾಗಿ ಅನೇಕ ಸಾವುಗಳು ಸಂಭವಿಸಿರುವ ವರದಿಗಳಿವೆ. ಟೊಮೆಟೊ ಈ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಟೊಮ್ಯಾಟೊ ಬೀಜಗಳು ಫ್ರಟ್ಲೋ ಎಂಬ ದಪ್ಪ ಲೋಳೆಯ ಪದರದಿಂದ ಸುತ್ತುವರಿದಿದೆ. ಲಿಕೊಪೀನ್ ಮತ್ತು ಫ್ರೂಟ್ಲೊವು ರಕ್ತದ ಯಾವುದೇ ಹೆಪ್ಪುಗಟ್ಟುವಿಕೆ ರಚನೆಯನ್ನು ತಡೆಗಟ್ಟಲು ಮತ್ತು ಅನಿರ್ಬಂಧಿಸುತ್ತದೆ.

#ಟೊಮೆಟೋ ತೂಕ ಇಳಿಸಲು ಅದ್ಭುತವಾಗಿ ಬಳಸಿಕೊಳ್ಳಬಹುದು. ತೂಕ ಇಳಿಸಬೇಕೆಂದು ಜನರು ಹಲವಾರು ಸರ್ಕಸ್ ಮಾಡುವರು. ಆದರೆ ಅವರಿಗೆ ತೂಕ ಕಡಿಮೆ ಮಾಡಲು ಆಗಲ್ಲ. ಟೊಮೆಟೋ ದಲ್ಲಿ ಇರುವಂತಹ ಕಾರ್ಬೋಹೈಡ್ರೇಟ್ಸ್ ಮತ್ತು ವಿಟಮಿನ್ ಗಳು ತೂಕ ಇಳಿಕೆಗೆ ಸಹಕಾರಿ.

#ಕಡಿಮೆ ಕೊಲೆಸ್ಟ್ರಾಲ್ ಮತ್ತು ಆರೋಗ್ಯಕರ ಹೃದಯ:ಟೊಮೆಟೊಗಳ ಬೀಜಗಳು ಕೊಲೆಸ್ಟರಾಲ್ ಅನ್ನು ಹೊಂದಿರುವುದಿಲ್ಲ. ಬದಲಾಗಿ, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುವ ನಾರನ್ನು ಹೊಂದಿರುತ್ತವೆ. ಇದರಲ್ಲಿರುವ ಪೊಟ್ಯಾಶಿಯಂ ಯಾವುದೇ ಹೃದಯ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group