ಮೆಹಂದಿಯ ಎಲೆಗಳ ಈ ಆರೋಗ್ಯಯುತ ಪ್ರಯೋಜನಗಳನ್ನು ತಿಳಿಯಿರಿ!

ಮೆಹಂದಿಯ ಎಲೆಗಳು ತುಂಬಾ ಪ್ರಯೋಜನಕಾರಿ. ಮೆಹಂದಿಯ ಎಲೆಗಳನ್ನು ಪುಡಿ ಮಾಡಿ ಅಥವಾ ಪೇಸ್ಟ್ ರೀತಿ ಮಾಡಿ ಬಳಸುತ್ತಾರೆ. ಇದರಿಂದ ಪ್ರಯೋಜನಗಳ ಪಟ್ಟಿಯನ್ನು ಇಲ್ಲಿ ನಿಮಗಾಗಿ ನೀಡಿದ್ದೇವೆ ಓದಿ ಅದರ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ.

#ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಕೂದಲು ಉದುರುವಿಕೆ, ತಲೆಹೊಟ್ಟು ಮತ್ತು ಇತರ ಕೂದಲಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

#ಸುಟ್ಟ ಗಾಯಗಳಿಗೆ ರಾಮ ಬಾಣ ಮೆಹಂದಿಯು ಸುಟ್ಟಗಾಯಗಳಿಗೆ ಅತ್ಯುತ್ತಮವಾದ ಔಷಧಿಯಾಗಿರುತ್ತದೆ. ಏಕೆಂದರೆ ಈ ಮೊದಲೇ ತಿಳಿಸಿದಂತೆ ಮೆಹಂದಿಯು ಅತ್ಯುತ್ತಮವಾದ ತಂಪುಕಾರಕ ಗುಣಗಳನ್ನು ಒಳಗೊಂಡಿದೆ. ಆದ್ದರಿಂದ ಮೆಹಂದಿ ಎಲೆಗಳನ್ನು ಸುಟ್ಟಗಾಯಗಳ ಮೇಲೆ ಉಜ್ಜಿದರೆ ನೋವು ತಕ್ಷಣ ಉಪಶಮನಗೊಳ್ಳುತ್ತದೆ.

#ಕರುಳಿಗೆ ಹಿತ: ಮೆಹಂದಿಯು ಕರುಳಿನ ಸಮಸ್ಯೆಗಳನ್ನು ಮತ್ತು ಕಾಮಾಲೆ ರೋಗವನ್ನು ಸಹ ನಿವಾರಿಸುವ ಗುಣಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಕೆಲವೊಮ್ಮೆ ಹಳದಿ ಜ್ವರವು ವಾಸಿಮಾಡಲು ಸಹ ಕಷ್ಟವೆನಿಸುವಷ್ಟು ಅಪಾಯಕಾರಿಯಾಗಿರುತ್ತದೆ. ಮೆಹಂದಿಯು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಕಾಮಾಲೆಯನ್ನು ನಿವಾರಿಸುವ ಗುಣವನ್ನು ಹೊಂದಿದೆ.

#ಮೆಹಂದಿಯಲ್ಲಿರುವ ‘ ತಂಪುಕಾರಕ’ ಗುಣಗಳ ಪರಿಣಾಮವಾಗಿ ತಲೆನೋವನ್ನು ನಿವಾರಿಸುವ ಅತ್ಯುತ್ತಮ ಔಷಧಿಯಾಗಿದೆ. ಮೆಹಂದಿ ಎಲೆಗಳು ಅಥವಾ ಮೆಹಂದಿಯನ್ನು ಹಣೆಗೆ ಹಚ್ಚಿಕೊಂಡರೆ ವಿಪರೀತವಾದ ತಲೆನೋವಿನಿಂದ ಮುಕ್ತಿ ಪಡೆಯಬಹುದು. ಈ ಮೆಹಂದಿಯನ್ನು ಪ್ರತಿನಿತ್ಯ ಬಳಸುವುದರಿಂದ ಮೈಗ್ರೇನ್‍ನಂತಹ ತಲೆನೋವನ್ನು ನಿವಾರಿಸಿಕೊಳ್ಳಬಹುದು. ಮೆಹಂದಿಯು ಅಸ್ಪಿರಿನ್ ಮಾತ್ರೆಗೆ ಅತ್ಯುತ್ತಮವಾದ ಬದಲಿ ಔಷಧಿಯಾಗಿರುತ್ತದೆ.

#ಮೆಹಂದಿಯಲ್ಲಿ ಕ್ಷಯವನ್ನು ಸಹ ನಿವಾರಿಸುವ ಗುಣಗಳು ಇವೆ. ಇದು ಟುಬೆರ್ ಕ್ಯುಲೊಸಿಸ್ ಅಥವ ಟಿ,ಬಿ ಬರದಂತೆ ಕಾಪಾಡುತ್ತದೆ. ಮೆಹಂದಿಯು ಈ ಟಿ.ಬಿ ಮೇಲೆ ಉತ್ತಮವಾಗಿ ಕೆಲಸ ಮಾಡುತ್ತದೆ. ಆದರೆ ಇದನ್ನು ಬಳಸುವ ಮೊದಲು ವೈಧ್ಯರ ಬಳಿ ಚರ್ಚಿಸುವುದು ಉತ್ತಮ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group