ಕ್ಯಾರೆಟ್ ಜ್ಯೂಸ್ ಮಾಡಿ ಕುಡಿದರೆ ಈ ಎಲ್ಲ ಆರೋಗ್ಯ ಪ್ರಯೋಜನ ಪಡೆಯಬಹುದು!

ನೆಲದ ಅಡಿಯಲ್ಲಿ ಬೆಳೆಯುವಂತಹ ಕ್ಯಾರೆಟ್ ಅನ್ನು ನಾವು ಸಲಾಡ್ ಮತ್ತು ಇತರ ಪದಾರ್ಥಗಳಲ್ಲಿ ಬಳಸುತ್ತೇವೆ. ಕೆಲವರಿಗೆ ಇದು ಇಷ್ಟವಾಗದಿರಬಹುದು. ಇಂತಹವರು ಇದನ್ನು ಜ್ಯೂಸ್ ಮಾಡಿ ಕುಡಿದರೆ ಅದರಿಂದ ಅಪಾರ ಲಾಭವನ್ನು ಪಡೆಯಬಹುದಾಗಿದೆ.

#ಒಂದು ಲೋಟ ಕ್ಯಾರೆಟ್ ಜ್ಯೂಸ್‌ನಲ್ಲಿ ತುಂಬಾ ಕಡಿಮೆ ಕ್ಯಾಲರಿಯಿದೆ ಮತ್ತು ಅದರಲ್ಲಿರುವ ಸಕ್ಕರೆಯಲ್ಲಿ ಪ್ರಮುಖ ಪೋಷಕಾಂಶ ಹಾಗೂ ಖನಿಜಾಂಶಗಳಿವೆ. ಇದರಿಂದ ಸಕ್ಕರೆ ಅಂಶವನ್ನು ನಿಯಂತ್ರಿಸಿ ಮಧುಮೇಹವನ್ನು ಸರಿಯಾಗಿಟ್ಟುಕೊಳ್ಳಲು ನೆರವಾಗುವುದು

#ಚರ್ಮಕ್ಕೆ ಹೊಳಪು ನೀಡುತ್ತದೆ:ಕ್ಯಾರೆಟ್‌ ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಮತ್ತು ವಿಟಮಿನ್ ಸಿ ಚರ್ಮದ ಕಾಲಜನ್ ಉತ್ಪಾದನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಕ್ಯಾರೆಟ್‌ ನಲ್ಲಿರುವ ಫೈಬರ್ ಮತ್ತು ಪ್ರೋಟೀನ್ ಚರ್ಮದ ಸ್ಥಿತಿಸ್ಥಾಪಕತ್ವ ಕಾಪಾಡುತ್ತದೆ. ವಿಟಮಿನ್ ಸಿ ಉತ್ಕರ್ಷಣ ನಿರೋಧಕವಾಗಿ ಕೆಲಸ ಮಾಡುತ್ತದೆ.

#ಕ್ಯಾರೆಟ್ ಜ್ಯೂಸ್‌ಗೆ ಸಕ್ಕರೆ ಮತ್ತು ಕಾಳುಮೆಣಸು ಬೆರೆಸಿ ಕುಡಿಯುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ ಮತ್ತು ಕಫದಿಂದಲೂ ಪರಿಹಾರ ಸಿಗುತ್ತದೆ.

#ಬೀಟಾ ಕ್ಯಾರೋಟೀನ್ ಕೇವಲ ಕಣ್ಣಿನ ದೃಷ್ಟಿಗೆ ಮಾತ್ರವಲ್ಲ, ಮೆದುಳಿನ ಕ್ಷಮತೆ ಹೆಚ್ಚಿಸಲೂ ನೆರವಾಗುತ್ತದೆ. ವಯಸ್ಸಾದಂತೆ ಎದುರಾಗುವ ಸ್ಮರಣ ಶಕ್ತಿ ಕುಂದುವುದು, ಮರೆಗುಳಿತನ, ಅಲ್ಜೀಮರ್ಸ್ ಕಾಯಿಲೆ ಮೊದಲಾದವುಗಳು ಎದುರಾಗುವ ಸಾಧ್ಯತೆಯನ್ನು ಕ್ಯಾರೆಟ್ ಸೇವನೆಯಿಂದ ತಗ್ಗಿಸಬಹುದು. ಮೆದುಳಿಗೆ ಎದುರಾಗುವ ಉತ್ಕರ್ಷಣಶೀಲ ಒತ್ತಡ (oxidative stress) ದಿಂದ ಮೆದುಳಿನ ಜೀವಕೋಶಗಳು ಒಮ್ಮೆ ಸತ್ತರೆ ಇವು ಮತ್ತೊಮ್ಮೆ ಹುಟ್ಟದೇ ಇರುವುದು ಇದಕ್ಕೆಲ್ಲಾ ಕಾರಣ. ಬೀಟಾ ಕ್ಯಾರೋಟೀನ್ ಈ ಒತ್ತಡವನ್ನು ನಿವಾರಿಸಿ ಅಥವಾ ಆದಷ್ಟೂ ತಗ್ಗಿಸಿ ಮೆದುಳಿನ ಮೇಲೆ ಧಾಳಿ ಎರಗದಂತೆ ತಡೆಯುವ ಮೂಲಕ ಮೆದುಳಿನ ಸವೆತವನ್ನು ತಡೆಯುತ್ತದೆ.

#ಕ್ಯಾರೆಟ್ ನಲ್ಲಿ ಸಾಕಷ್ಟು ಪೊಟ್ಯಾಸಿಯಮ್ ಇದೆ. ಅಧಿಕ ರಕ್ತದೊತ್ತಡ ಹೊಂದಿದ್ದರೆ, ನಿಮ್ಮ ಹೃದಯ ಸಮಸ್ಯೆ ಹೆಚ್ಚುತ್ತವೆ. ಆಹಾರದಲ್ಲಿ ಪೊಟ್ಯಾಸಿಯಮ್ ಭರಿತ ಆಹಾರ ಸೇರಿಸಿ. ಇದು ಕ್ಯಾರೆಟ್‌ ನಲ್ಲಿರುವ ಆಂಟಿ ಆಕ್ಸಿಡೆಂಟ್ ಸಂಯುಕ್ತ ಹೃದಯದ ಆರೋಗ್ಯಕ್ಕೂ ಪ್ರಯೋಜನಕಾರಿ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group